For Quick Alerts
  ALLOW NOTIFICATIONS  
  For Daily Alerts

  ಚಿತ್ರ ಸಾಹಿತಿ ಜಾವೇದ್ ಅಖ್ತರ್ ವಿರುದ್ಧ ಬೆದರಿಕೆ ಆರೋಪ ಹೊರಿಸಿದ ಕಂಗನಾ!

  |

  ಬಾಲಿವುಡ್‌ನ ಜನಪ್ರಿಯ ಚಿತ್ರ ಸಾಹಿತಿ ಜಾವೇದ್ ಅಖ್ತರ್ ವಿರುದ್ಧ ನಟಿ ಕಂಗನಾ ರನೌತ್ ಬೆದರಿಕೆ ಆರೋಪ ಹೊರಿಸಿದ್ದಾರೆ.

  ಜಾವೇದ್ ಅಖ್ತರ್, ಕಂಗನಾ ವಿರುದ್ಧ ಹೂಡಿರುವ ಮಾನನಷ್ಟ ದಾವೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹಾಜರಾಗಿ ಹೇಳಿಕೆ ದಾಖಲಿಸಿದ ಕಂಗನಾ, ನ್ಯಾಯಾಲಯದಲ್ಲಿಯೇ ಜಾವೇದ್ ಅಖ್ತರ್ ವಿರುದ್ಧ ಆರೋಪ ಮಾಡಿದ್ದಾರೆ.

  ಕಂಗನಾ ಸಿನಿಮಾ ನಿರ್ಮಿಸಿ ಲಾಸ್, ಕಚೇರಿ ಮಾರಿದ ನಿರ್ಮಾಪಕ!ಕಂಗನಾ ಸಿನಿಮಾ ನಿರ್ಮಿಸಿ ಲಾಸ್, ಕಚೇರಿ ಮಾರಿದ ನಿರ್ಮಾಪಕ!

  ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರಾದ ಕಂಗನಾ, ಮೊದಲಿಗೆ, ತಮ್ಮ ಹೇಳಿಕೆಯನ್ನು ದಾಖಲಿಸುವಾಗ ಕೇವಲ ತಮ್ಮ ಸಹೋದರಿ ರಂಗೋಲಿ ಹಾಗೂ ತಮ್ಮ ವಕೀಲರು ಮಾತ್ರವೇ ಇರತಕ್ಕದ್ದು ಎಂದು ಮನವಿ ಮಾಡಿದರು. ಅವರ ಮನವಿಯನ್ನು ನ್ಯಾಯಾಲಯವು ಪುರಸ್ಕರಿಸಿತು.

  ತಾನು ಅಪರಾಧಿ ಅಲ್ಲವೆಂದು ಹೇಳಿದ ಕಂಗನಾ, ತಾನಾಗಲಿ, ರಂಗೋಲಿಯಾಗಲಿ ಜಾವೇದ್ ಅಖ್ತರ್‌ಗೆ ಮಾನ ಹಾನಿ ಮಾಡಿಲ್ಲ, ಬದಲಿಗೆ ಜಾವೇದ್ ಅಖ್ತರ್, ನನ್ನ ವಿರುದ್ಧ ಬೆದರಿಕೆ ಹಾಕಿದ್ದರು, ನಾನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಿದ್ದರು ಎಂದಿದ್ದಾರೆ.

  ಬೆದರಿಕೆ ಹಾಕಿದ್ದಾರೆ ಜಾವೇದ್ ಅಖ್ತರ್: ಕಂಗನಾ ಆರೋಪ

  ಬೆದರಿಕೆ ಹಾಕಿದ್ದಾರೆ ಜಾವೇದ್ ಅಖ್ತರ್: ಕಂಗನಾ ಆರೋಪ

  ''ನಾವು ಕೆಲವು ಫೇಕ್ ವ್ಯಕ್ತಿಗಳನ್ನು ತಯಾರು ಮಾಡುತ್ತೇವೆ, ಆಗ ನೀನು (ಕಂಗನಾ) ಸಂಬಂಧ ಹೊಂದಿದ್ದಿದ್ದು ಹೃತಿಕ್ ರೋಷನ್ ಜೊತೆಗೆ ಅಲ್ಲ ವಂಚಕನ ಜೊತೆಗೆ ಎಂದು ಪ್ರಚಾರವಾಗುತ್ತದೆ. ನಿನ್ನ ಗೌರವ ಮಣ್ಣು ಪಾಲಾಗುತ್ತದೆ. ಸಾರ್ವಜನಿಕವಾಗಿ ನಿನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ, ಆಗ ನಿನಗೆ ಆತ್ಮಹತ್ಯೆ ಅಲ್ಲದೆ ಬೇರೆ ದಾರಿಯೇ ಉಳಿಯುವುದಿಲ್ಲ. ನಮ್ಮ ಬಳಿ ಸಾಕ್ಷಿಗಳಿವೆ, ನಮ್ಮ ಬಳಿ ಎಲ್ಲ ಸಚಿವರ ಸಂಪರ್ಕವೂ ಇದೆ. ಹೃತಿಕ್ ರೋಷನ್ ಅನ್ನು ಕ್ಷಮೆ ಕೇಳು ನಿನ್ನ ಜೀವ ಉಳಿಸಿಕೊ'' ಎಂದು ಜಾವೆದ್ ಅಖ್ತರ್ ಬೆದರಿಕೆ ಹಾಕಿದ್ದರು ಎಂದು ಕಂಗನಾ ರನೌತ್ ಹೇಳಿದ್ದಾರೆ.

  ಕಂಗನಾ ಸಿನಿಮಾ 'ಧಾಖಡ್' ಧಾರುಣ ಸೋಲು: ಗೇಲಿ ಮಾಡಿದ ಸಹ ನಟಿಕಂಗನಾ ಸಿನಿಮಾ 'ಧಾಖಡ್' ಧಾರುಣ ಸೋಲು: ಗೇಲಿ ಮಾಡಿದ ಸಹ ನಟಿ

  ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ: ಕಂಗನಾ ಆರೋಪ

  ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ: ಕಂಗನಾ ಆರೋಪ

  ಮುಂದುವರೆದು, ''ಒಳ್ಳೆಯ ಮನೆಯ ಹುಡುಗಿ ಆಗಿದ್ದಿದ್ದರೆ ನಾಚಿಕೆಯಿಂದ ಮಣ್ಣು ಸೇರಿಬಿಡುತ್ತಿದ್ದಳು. ನಿನಗೆ ಸ್ವಲ್ಪವಾದರೂ ನಾಚಿಕೆ ಎಂಬುದಿದ್ದರೆ ನಿನ್ನ ಗೌರವವನ್ನು ಉಳಿಸಿಕೊಳ್ಳುವ ಕೆಲಸ ಮಾಡು'' ಎಂದು ಜಾವೇದ್ ಅಖ್ತರ್ ಹೇಳಿದರು. ಜಾವೇದ್, ನಾನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದರು. ಹಾಗೂ ನನ್ನ ಮಾನಸಿಕ ನೆಮ್ಮದಿ ಹಾಳು ಮಾಡಿ ಮಾನಸಿಕ ಹಿಂಸೆ ನೀಡಿದರು'' ಎಂದು ಸಹ ಕಂಗನಾ ರನೌತ್ ನ್ಯಾಯಾಲಯದಲ್ಲಿ ದೂರಿದ್ದಾರೆ.

  ಕಂಗನಾ ವಿರುಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದ ಜಾವೇದ್

  ಕಂಗನಾ ವಿರುಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದ ಜಾವೇದ್

  ಬಾಲಿವುಡ್‌ನ ಹಲವರ ಬಗ್ಗೆ ಹಲವು ರೀತಿಯ ಆರೋಪಗಳನ್ನು ಮಾಡುತ್ತಲೇ ಬಂದಿರುವ ಕಂಗನಾ ರನೌತ್, ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಜಾವೇದ್ ಅಖ್ತರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಅದರ ವಿರುದ್ಧ ಚಿತ್ರ ಸಾಹಿತಿ ಜಾವೇದ್ ಅಖ್ತರ್ ನ್ಯಾಯಾಲಯದ ಮೊರೆ ಹೋದರು. ಕಂಗನಾ ರನೌತ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ಅದರ ವಿಚಾರಣೆ ಕಳೆದ ಹಲವು ತಿಂಗಳಿನಿಂದಲೂ ನಡೆಯುತ್ತಲೇ ಇದೆ.

  ಕಂಗನಾ ರನೌತ್ ವಿರುದ್ಧ ಹಲವು ದೂರುಗಳಿವೆ

  ಕಂಗನಾ ರನೌತ್ ವಿರುದ್ಧ ಹಲವು ದೂರುಗಳಿವೆ

  ಕಂಗನಾ ರನೌತ್ ವಿರುದ್ಧ ಹಲವಾರು ಮಂದಿ ದೂರುಗಳನ್ನು ದಾಖಲಿಸಿದ್ದಾರೆ. ಹಲವು ಬಾಲಿವುಡ್ ನಟರ ಬಗ್ಗೆ ಕಂಗನಾ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಿದ್ದಾರೆ. ರೈತರ ಪ್ರತಿಭಟನೆ ಬಗ್ಗೆ ಕಂಗನಾ ಮಾಡಿದ್ದ ಟ್ವೀಟ್‌ ದೇಶದಾದ್ಯಂತ ವಿರೋಧಕ್ಕೆ ಒಳಗಾಗಿತ್ತು, ಕರ್ನಾಟಕದ ಬೆಂಗಳೂರು, ತುಮಕೂರು, ಬೆಳಗಾವಿ ಸೇರಿದಂತೆ ದೇಶದಾದ್ಯಂತ ಕಂಗನಾ ವಿರುದ್ಧ ದೂರು ದಾಖಲಾಗಿದ್ದವು, ಕಂಗನಾರ ದ್ವೇಷ ಟ್ವೀಟ್‌ಗಳ ತೀವ್ರತೆ ಕಂಡು ಸ್ವತಃ ಟ್ವಿಟ್ಟರ್ ಸಂಸ್ಥೆ ಕಂಗನಾರ ಟ್ವಿಟ್ಟರ್ ಖಾತೆಯನ್ನು ಡಿಲೀಟ್ ಮಾಡಿತು. ಆದರೆ ಈಗ ಕಂಗನಾ ತಮ್ಮ ಕಾರ್ಯವನ್ನು ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ನಲ್ಲಿ ಮುಂದುವರೆಸಿದ್ದಾರೆ.

  English summary
  Kangana Ranaut alleges that poet Javed Akhtar threatened her to apologize to Hritik Roshan. She alleged that Javed provoked her to commit suicide.
  Wednesday, July 6, 2022, 20:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X