ಅಚ್ಚರಿ: ಆಲಿಯಾ ಭಟ್ ಚಿತ್ರವನ್ನು ಹೊಗಳಿದ ಕಂಗನಾ!

ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಒಂದಲ್ಲಾ ಒಂದು ವಿವಾದದ ಮೂಲಕ ಪ್ರಚಾರದಲ್ಲಿರುತ್ತಾರೆ. ಒಂದೋ ಸ್ವತಃ ಅವರೇ ಟೀಕೆಗೆ ಗುರಿಯಾಗುತ್ತಾರೆ ಅಥವಾ ಬೇರೆ ಯಾರನ್ನಾದರೂ ಟೀಕಿಸಿ ವಿವಾದಕ್ಕೆ ಒಳಗಾಗುತ್ತಾರೆ. ಒಟ್ಟಿನಲ್ಲಿ ಹಲವು ನಟ, ನಟಿಯರ ಬಗ್ಗೆ ಸದಾ ಯಾವುದಾದರು ಒಂದು ವಿಚಾರಕ್ಕೆ ಕಾಲೆಳೆಯುತ್ತಾ ಇರುತ್ತಾರೆ.

ಇತ್ತೀಚೆಗೆ ನಟಿ ಕಂಗನಾ ಆಲಿಯಾ ಭಟ್ ಮತ್ತು ದೀಪಿಕಾ ಬಗ್ಗೆ ಸಾಕಷ್ಟು ಟೀಕೆಗಳನ್ನು ಮಾಡಿದ್ದರು. ಆಲಿಯಾ ಅಭಿನಯದ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರದ ಬಗ್ಗೆಯೂ ಕಂಗನಾ ಅಸಮಾಧಾನ ಹೊರ ಹಾಕಿದ್ದರು. ಆದರೆ ಈಗ ಇದೇ ಚಿತ್ರದ ಬಗ್ಗೆ ಆಲಿಯಾ ಅಚ್ಚರಿಯ ಹೇಳಿಕೆ ಒಂದನ್ನು ನೀಡಿದ್ದರು.

ಹೌದು ನಟಿ ಕಂಗನಾ ಈ ಬಾರಿ ಆಲಿಯಾ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಆದರೆ ಯಾವುದೇ, ಟೀಕೆ ಮಾಡಿಲ್ಲ, ಅಸಮಾಧಾನ ಹೊರ ಹಾಕಿಲ್ಲ. ಬದಲಿಗೆ ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಇದು ಬಾಲಿವುಡ್‌ ಬಳಗಕ್ಕೆ ಅಚ್ಚರಿ ಮೂಡಿಸಿದೆ. ಸಿನಿಮಾಗೆ ವ್ಯಕ್ತ ಆಗಿರುವ ಉತ್ತಮ ರೆಸ್ಪಾನ್ಸ್ ಬಗ್ಗೆ ಕಂಗನಾ ಮಾತನಾಡಿ, ಹೆಮ್ಮೆ ಇದೆ ಎಂದಿದ್ದಾರೆ. "ದಕ್ಷಿಣ ಚಿತ್ರೋದ್ಯಮದಲ್ಲಿ ದಾಖಲೆಯ ಕಲೆಕ್ಷನ್‌ನೊಂದಿಗೆ, ಥಿಯೇಟರ್‌ಗಳು ಪುನಶ್ಚೇತನಗೊಳ್ಳುತ್ತಿರುವುದನ್ನು ಕೇಳಲು ಸಂತೋಷವಾಗಿದೆ. ಹಿಂದಿ ಬೆಲ್ಟ್‌ನಲ್ಲೂ ಕೆಲವು ಕೆಲವು ಸಿನಿಮಾಗಳು ಪುಟ್ಟ, ಪುಟ್ಟ ಹೆಜ್ಜೆಗಳನ್ನು ಇಡುತ್ತಿರುವುದನ್ನು ನಾನು ಕೇಳುತ್ತಿದ್ದೇನೆ. ಇತ್ತೀಚೆಗೆ ರಿಲೀಸ್ ಸೂಪರ್‌ ಸ್ಟಾರ್ ನಿರ್ದೇಶಕರನ್ನು ಹೊಂದಿರುವ ಇತ್ತೀಚಿನ ಮಹಿಳಾ ಪ್ರಧಾನ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಮೂಲಕ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುವಂತಾದರೆ ಅದು ಅದ್ಭುತವಾಗಿದೆ." ಎಂದು ಬರೆದುಕೊಂಡಿದ್ದಾರೆ.

Kangana Ranaut Appreciates Alia Bhatt And Gangubai Kathiawadi Movie

ಹಾಗೆ ಪೋಸ್ಟ್‌ನಲ್ಲಿ "ಸಿನಿಮಾ ಮಾಫಿಯಾ ಏನಾದರೂ ಒಳ್ಳೆಯದನ್ನು ಮಾಡುತ್ತದೆ ಎಂದು ಎಂದಿಗೂ ನಿರೀಕ್ಷಿಸಿರಲಿಲ್ಲ. ಹಾಗೆ ಆದರೆ ನಾವು ಸಂಪೂರ್ಣವಾಗಿ ಪ್ರಶಂಸಿಸುತ್ತೇವೆ. ಉತ್ತಮವಾದದ್ದನ್ನು ಆಶಿಸುತ್ತೇನೆ." ಎನ್ನುವುದನ್ನೂ ಕೂಡ ಕಂಗನಾ ಬರೆದುಕೊಂಡಿದ್ದಾರೆ. ಈ ಬಾರಿ ಕಂಗನಾ ತನ್ನ ಅಹಂ ಬದಿಗಿಟ್ಟು ಸಾರ್ವಜನಿಕ ವಲಯದಲ್ಲಿ ಒಳ್ಳೆಯ ಕೆಲಸವನ್ನು ಶ್ಲಾಘಿಸಿದ್ದು ನಿಜಕ್ಕೂ ಆಶ್ಚರ್ಯಕರವಾಗಿದೆ.

ಆಲಿಯಾ ಭಟ್‌ ಹೇಳಿಕೆ ಅಚ್ಚರಿ ಮೂಡಿಸಲು ಕಾರಣ ಈ ಹಿಂದೆ ಅವರು ಬಾಲಿವುಡ್ ಬಗ್ಗೆ ಆಡಿದ ಮಾತುಗಳು. ಬಾಲಿವುಡ್ ಒಂದು ಮಾಫಿಯಾ ಗ್ಯಾಂಗ್ ಎಂದು ಕರೆದಿದ್ದರು. ಗಂಗೂಬಾಯಿ ಬಿಡುಗಡೆಗೂ ಮುನ್ನವೇ ಕಂಗನಾ ಸಾಮಾಜಿಕ ಜಾಲತಾಣದಲ್ಲಿ 200 ಕೋಟಿ ಬಜೆಟ್ ಬೂದಿಯಾಗಲಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

ಕಂಗನಾ ಆಲಿಯಾ ಅವರನ್ನು 'ಪಾಪಾ ಕಿ ಪರಿ' ಮತ್ತು 'ರೋಮ್‌ಕಾಮ್ ಬೇಬೋ' ಎಂದೂ ಕರೆದಿದ್ದರು. ಆದರೆ ಗಂಗೂಬಾಯಿಯ ಚಿತ್ರದ ಅಬ್ಬರ ಕಂಡು ಅದಕ್ಕೂ ಕಂಗನಾ ಹೊಗಳಿದ್ದಾರೆ. ಪರೋಕ್ಷವಾಗಿ ಆಲಿಯಾ ಭಟ್ ಚಿತ್ರಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ಆಕೆ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರದ ಒಂದು ವೈರಲ್ ದೃಶ್ಯದ ವಿರುದ್ಧವೂ ಕಂಗನಾ ಕಿಡಿ ಕಾರಿದ್ದರು.

More from Filmibeat

English summary
Kangana Ranaut New Step She Appreciates Alia Bhatt And Gangubai Kathiawadi Movie,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X