»   » ಹೃತಿಕ್ ರೋಷನ್ ಬಗ್ಗೆ ಬೆಚ್ಚಿಬೀಳಿಸುವ ಸಂಗತಿ ಬಿಚ್ಚಿಟ್ಟ ಕಂಗನಾ

ಹೃತಿಕ್ ರೋಷನ್ ಬಗ್ಗೆ ಬೆಚ್ಚಿಬೀಳಿಸುವ ಸಂಗತಿ ಬಿಚ್ಚಿಟ್ಟ ಕಂಗನಾ

Posted By:
Subscribe to Filmibeat Kannada

ಪ್ರೀತಿ, ಪ್ರೇಮ, ಬ್ರೇಕ್ ಅಪ್ ವಿಚಾರದಲ್ಲಿ ಬಾಲಿವುಡ್ ನಟ-ನಟಿಯರು ಹೆಚ್ಚು ಸುದ್ದಿಯಾಗ್ತಾರೆ. ಆದ್ರೆ, ನಟಿ ಕಂಗನಾ ಮತ್ತು ನಟ ಹೃತಿಕ್ ರೋಷನ್ ಜೋಡಿ ಮಾತ್ರ ವಿವಾದಿಂದಲೇ ಹೆಚ್ಚು ಗಮನ ಸೆಳೆಯುತ್ತಿದ್ದಾರೆ.

ಇವರಿಬ್ಬರ ಮಧ್ಯೆ ಅಫೇರ್ ಇದ್ದಿದ್ದು, ಅದು ಬ್ರೇಕ್ ಅಪ್ ಆಗಿ ಈಗ ಕೋರ್ಟ್ ಅಂಗಳದಲ್ಲಿ ಹೋರಾಟ ನಡೆಯುತ್ತಿರುವುದು ಹಳೆ ಸಂಗತಿ. ಆದ್ರೀಗ, ನಟ ಹೃತಿಕ್ ಬಗ್ಗೆ ಕಂಗನಾ ಸ್ಪೋಟಕ ಸುದ್ದಿಯೊಂದನ್ನ ಬಹಿರಂಗಪಡಿಸುವುದರ ಮೂಲಕ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾರೆ.

ಈ ಸಂಗತಿಯಿಂದ ಇಡೀ ಬಾಲಿವುಡ್ ಬೆಚ್ಚಿ ಬಿದ್ದಿದ್ದು, ಮೂಲೆ ಮೂಲೆಯಲ್ಲಿ ಇದೇ ವಿಷ್ಯ ಚರ್ಚೆಯಾಗುತ್ತಿದೆ. ಹಾಗಿದ್ರೆ, ನಟ ಹೃತಿಕ್ ಬಗ್ಗೆ ಕಂಗನಾ ಹೇಳಿದ್ದೇನು? ಇದರಿಂದ ಹೃತಿಕ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರಾ? ಎಂಬುದನ್ನ ತಿಳಿಯಲು ಮುಂದೆ ಓದಿ.....

ಕಂಗನಾ ಇದೆಯಂತೆ ಜೀವ ಬೆದರಿಕೆ

ನಟ ಹೃತಿಕ್ ರೋಷನ್ ಅವರ ಜೊತೆಗಿನ ಸಂಬಂಧದ ವಿವಾದವಾದ ನಂತರ ನಟಿ ಕಂಗನಾಗೆ ಚಿತ್ರರಂಗದ ಕೆಲವು ವ್ಯಕ್ತಿಗಳಿಂದ ಜೀವ ಬೆದರಿಕೆ ಇದೆಯಂತೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಭಯವಾಗುತ್ತಿದೆಯಂತೆ.

ಹೃತಿಕ್ ರೋಷನ್ ಮತ್ತೆ ಮದುವೆ ಆಗ್ತಿದ್ದಾರಾ...?

ನನ್ನ ಪರ್ಸನಲ್‌ ಇ-ಮೇಲ್‌ ದುರುಪಯೋಗ ಆಗಿದೆ

''ಹೃತಿಕ್ ನನ್ನ ಪರ್ಸನಲ್‌ ಇಮೇಲ್‌ ಅನ್ನು ಬಳಸುತ್ತಿದ್ದರು. ನನ್ನ ಇಮೇಲ್‌ ಪಾಸ್‌ವರ್ಡ್‌ ಹೃತಿಕ್ ಗೆ ಗೊತ್ತಿತ್ತು. ರಾತ್ರಿಯೆಲ್ಲ ನನ್ನ ಇಮೇಲ್‌ನಲ್ಲಿ ಲಾಗಿನ್‌ ಆಗಿ, ಅದನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಕುರಿತು ಹೃತಿಕ್ ತಂದೆಗೆ ವಿಷಯ ತಿಳಿಸಿದಾಗ, ನನಗೆ ಸಹಾಯ ಮಾಡುವ ಭರವಸೆ ನೀಡಿದ್ದರು. ಆದರೆ ಅವರೇನೂ ಮಾಡಲಿಲ್ಲ'' ಎಂದಿದ್ದಾರೆ.

'ಅಸಲಿ ಸತ್ಯ ಹೊರಬೀಳಲಿದೆ': ಕಂಗನಾಗೆ ಟಾಂಗ್ ಕೊಟ್ಟ ಹೃತಿಕ್

ಬಹಿರಂಗವಾಗಿ ಕ್ಷಮೆಯಾಚಿಸಬೇಕು

''ಹೃತಿಕ್ ರೋಷನ್ ರಿಂದ ಕೆಲವೊಂದು ಪ್ರಶ್ನೆಗಳಿಗೆ ಉತ್ತರಬೇಕಾಗಿದೆ. ಆದರೆ ಹೃತಿಕ್ ನನ್ನಿಂದ ತಪ್ಪಿಸಿಕೊಂಡು ಓಡಾತ್ತಿದ್ದಾರೆ. ನಮ್ಮಬ್ಬಿರನ್ನು ಭೇಟಿ ಮಾಡಿಸುವುದಾಗಿ ಹೇಳಿ ರಾಕೇಶ್ ರೋಷನ್ ನನಗೆ ಮೋಸ ಮಾಡುತ್ತಿದ್ದಾರೆ. ಹೀಗಾಗಿ ಇವರಿಬ್ಬರು ಸಾರ್ವಜನಿಕವಾಗಿ ನನ್ನಲ್ಲಿ ಕ್ಷಮೆಯಾಚಿಸಬೇಕು'' - ಕಂಗನಾ

ಮಾಜಿ ಪತ್ನಿಗೆ ಹೃತಿಕ್ ರೋಷನ್ ಕೊಟ್ರು ಭರ್ಜರಿ ಉಡುಗೊರೆ

ಮಲಯಾಳಂ ನಟಿ ಅಪಹರಣ ಪ್ರಕರಣದಿಂ ಭಯ ಆಗಿದೆ

ಇತ್ತೀಚಿಗೆ ಮಲಯಾಳಂ ನಟ ದಿಲೀಪ್‌, ನಟಿಯೋರ್ವಳ ಮೇಲೆ ಸೇಡು ತಿರಿಸಿಕೊಳ್ಳುವ ಸಲುವಾಗಿ ಅಪಹರಣ ಮಾಡಿದ್ದಾರೆ ಎಂಬ ಪ್ರಕರಣವನ್ನ ಕಂಗನಾ ನೆನಪು ಮಾಡಿಕೊಂಡು, ತನಗೂ ಭಯವಾಗುತ್ತಿದೆ ಎಂದಿದ್ದಾಳೆ

English summary
Kangana Ranaut’s shocking revelations regarding her alleged relationship with Hrithik Roshan are again making news. The Simran star says she feared for her life during the public spat with Hrithik.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada