BJP ಮೆಚ್ಚಿಸಲು ಹೋಗಿ ನನಗೆ ಸಿಕ್ಕಿದು 25-30 ಕೇಸುಗಳು, ಊರ್ಮಿಳಾ ಕಾಂಗ್ರೆಸ್ ಮೆಚ್ಚಿಸಿ ಹೊಸ ಆಫೀಸ್ ಖರೀದಿಸಿದರು; ಕಂಗನಾ ಟಾಂಗ್
ಬಾಲಿವುಡ್ ನಟಿ ಕಂಗನಾ ರಣಾವತ್ ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ. ವಿವಾದಗಳ ಮೂಲಕವೇ ಹೆಚ್ಚು ಗಮನ ಸೆಳೆದಿರುವ ನಟಿ ಕಂಗನಾ ಇದೀಗ ನಟಿ ಮತ್ತು ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಕಾಲೆಳೆದಿದ್ದಾರೆ.
ಇತ್ತೀಗೆ ನಟಿ ಊರ್ಮಿಳಾ ಮುಂಬೈ ನಲ್ಲಿ 3.5 ಕೋಟಿ ರೂ. ಬೆಲೆಬಾಳುವ ಮನೆಯನ್ನು ಖರೀದಿಸಿದ್ದಾರೆ. ಇತ್ತೀಚಿಗಷ್ಟೆ ನಟಿ ಊರ್ಮಿಳಾ ಶಿವಸೇನಾ ಪಕ್ಷ ಸೇರ್ಪಡೆಯಾಗಿದ್ದಾರೆ. ಪಕ್ಷ ಸೇರಿದ ಬಳಿಕ ದುಬಾರಿ ಮನೆ ಖರೀದಿಸಿದ್ದಾರೆ. ಈ ಬಗ್ಗೆ ನಟಿ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕಂಗನಾ, ಊರ್ಮಿಳಾಗೆ ಟಾಂಗ್ ಕೊಟ್ಟಿದ್ದಾರೆ.
'ಊರ್ಮಿಳಾ ಅವರೇ ನಾನು ಕಷ್ಟ ಪಟ್ಟು ದುಡಿದ ಹಣದಲ್ಲಿ ಖರೀದಿಸಿದ್ದ ಕಚೇರಿಯನ್ನು ಕಾಂಗ್ರೆಸ್ ನಾಶ ಮಾಡಿತು. ಬಿಜೆಪಿ ಮನವೊಲಿಸಲು ಹೋಗಿದ್ದಕ್ಕೆ ನನಗೆ ಸಿಕ್ಕಿದ್ದು 25 ರಿಂದ 30 ಕೇಸುಗಳು. ನಾನು ಮೂರ್ಖಳಾದೆ. ನಿಮ್ಮಷ್ಟು ಜಾಣೆ ಆಗಿದ್ದರೆ ನಾನು ಕಾಂಗ್ರೆಸ್ ಖುಷಿ ಪಡಿಸುತ್ತಿದ್ದೆ. ನಾನು ಎಷ್ಟು ಮೂರ್ಖಳು'ಎಂದು ಹೇಳಿದ್ದಾರೆ.

ಕಂಗನಾಗೆ ಪ್ರತಿಕ್ರಿಯೆ ನೀಡಿದ ನಟಿ ಊರ್ಮಿಳಾ, ಕಂಗನಾ ಭೇಟಿಯಾಗುವಂತೆ ಕೇಳಿಕೊಂಡರು. 'ನಾನು ಚಿತ್ರರಂಗದಲ್ಲಿ 25ರಿಂದ 30 ವರ್ಷ ಕಷ್ಟಪಟ್ಟು ಕೆಲಸ ಮಾಡಿ ಸಂಪಾದಿಸಿದ ಹಣದಿಂದ ಆಸ್ತಿಯನ್ನು ಖರೀದಿಸಿದ್ದೇನೆ. ಇದರ ಬಗ್ಗೆ ಸಾಕ್ಷಿ ಇಲ್ಲಿದೆ. ನಾನು ರಾಜಕೀಯ ಪ್ರವೇಶ ಮಾಡುವ ಮೊದಲೆ ಫ್ಲಾಟ್ ಖರೀದಿ ಮಾಡಿದ್ದೆ' ಎಂದು ಊರ್ಮಿಳಾ ಹೇಳಿದ್ದಾರೆ.
ಇತ್ತೀಚಿಗೆ ನಟಿ ಕಂಗನಾ ಮುಂಬೈ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಗೆ ಕೆಡವಲು ಮುಂದಾಗಿತ್ತು. ಬಾಗಶಃ ಮನೆಯನ್ನು ಹಾನಿ ಮಾಡಿರುವ ಪಾಲಿಕೆ ವಿರುದ್ಧ ಕಂಗನಾ ಹೋರಾಟ ನಡೆಸುತ್ತಿದ್ದಾರೆ.


Click it and Unblock the Notifications











