For Quick Alerts
  ALLOW NOTIFICATIONS  
  For Daily Alerts

  ಕಂಗನಾಗೆ ಮತ್ತೊಂದು ಶಾಕ್; ನಟಿಯನ್ನು ಬ್ಯಾನ್ ಮಾಡಿದ ಬಾಲಿವುಡ್ ಖ್ಯಾತ ಡಿಸೈನರ್ಸ್

  |

  ನಟಿ ಕಂಗನಾ ರಣಾವತ್ ಟ್ವಿಟ್ಟರ್ ಖಾತೆ ಅಮಾನತು ಮಾಡುವ ಮೂಲಕ ಟ್ವಿಟ್ಟರ್ ಸಂಸ್ಥೆ ಶಾಕ್ ನೀಡಿದೆ. ಮೈಕ್ರೋ ಬ್ಲಾಗಿಂಗ್ ಸೈಟ್ ನಿಯಮಗಳಿಗೆ ವಿರುದ್ಧವಾಗಿ ಪದಗಳನ್ನು ಬಳಸಿ ಟ್ವೀಟ್ ಮಾಡುತ್ತಿದ್ದ ಕಂಗನಾಗೆ ಟ್ಟಿಟ್ಟರ್ ಸಂಸ್ಥೆ ಶಾಶ್ವತವಾಗಿ ಸಸ್ಪೆಂಡ್ ಮಾಡಿದೆ.

  Kangana Ranawat ರನ್ನು ಬ್ಯಾನ್ ಮಾಡಿದ ಬಾಲಿವುಡ್ ಖ್ಯಾತ ಡಿಸೈನರ್ಸ್ | Filmibeat Kannada

  ಇದರ ಬೆನ್ನಲ್ಲೇ ಕಂಗನಾಗೆ ಮತ್ತೊಂದು ಆಘಾತ ಎದುರಾಗಿದೆ. ಬಾಲಿವುಡ್ ನ ಖ್ಯಾತ ಡಿಸೈನರ್ಸ್ ಆಗಿರುವ ಆನಂದ್ ಭೂಷಣ್ ಮತ್ತು ರಿಮ್ ಜಿಮ್ ದಾಡು ತಮ್ಮ ಬ್ರ್ಯಾಂಡ್ ನಿಂದ ಕಂಗನಾ ಅವರನ್ನು ಬ್ಯಾನ್ ಮಾಡಿದೆ. ಇನ್ಮುಂದೆ ಕಂಗನಾ ಕಂಗನಾ ಜೊತೆ ಕೆಲಸ ಮಾಡುವುದಿಲ್ಲ ಮತ್ತು ಈಗಾಗಲೇ ಡಿಸೈನ್ ಮಾಡಿದ ಎಲ್ಲಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡುವುದಾಗಿ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...

  ಕಂಗನಾ ಜೊತೆ ಇನ್ಮುಂದೆ ಕೆಲಸ ಮಾಡಲ್ಲ- ಆನಂದ್ ಭೂಷಣ್

  ಕಂಗನಾ ಜೊತೆ ಇನ್ಮುಂದೆ ಕೆಲಸ ಮಾಡಲ್ಲ- ಆನಂದ್ ಭೂಷಣ್

  ದ್ವೇಷದ ಮಾತುಗಳನ್ನು ಆಡುವ ಯಾರ ಜೊತೆಯೂ ನಾವು ಕೆಲಸ ಮಾಡುವುದಿಲ್ಲ ಆನಂದ್ ಭೂಷಣ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 'ಇಂದು ನಡೆದ ಘಟನೆಯ ದೃಷ್ಟಿಯಿಂದ, ಕಂಗನಾ ರಣಾವತ್ ಅವರೊಂದಿಗೆನ ಎಲ್ಲಾ ಸಹಯೋಗದ ಚಿತ್ರಗಳನ್ನು ನಮ್ಮ ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕುತ್ತಿದ್ದೇವೆ. ಭವಿಷ್ಯದಲ್ಲಿ ಯಾವುದೇ ಪ್ರಾಜೆಕ್ಟ್ ಗೂ ಅವರ ಜೊತೆ ಕೆಲಸ ಮಾಡಲ್ಲ ಎಂದು ಪ್ರತಿಜ್ಞೆ ಮಾಡುತ್ತೇವೆೆ. ನಮ್ಮ ಬ್ರ್ಯಾಂಡ್ ಯಾವುದೇ ಧ್ವೇಷ ಭಾಷಣವನ್ನು ಬೆಂಬಲಿಸುವುದಿಲ್ಲ' ಎಂದು ಹೇಳಿದ್ದಾರೆ.

  ಒಳ್ಳೆಯ ಕೆಲಸ ಮಾಡಲು ತಡಮಾಡಬಾರದು

  ಒಳ್ಳೆಯ ಕೆಲಸ ಮಾಡಲು ತಡಮಾಡಬಾರದು

  ಇನ್ನು ಈ ಬಗ್ಗೆ ರಿಮ್ ಜಿಮ್ ಟ್ವಿಟ್ ಮಾಡಿ, 'ಒಳ್ಳೆಯ ಕೆಲಸ ಮಾಡಲು ಎಂದಿಗೂ ತಡಮಾಡಬಾರದು. ಕಂಗನಾ ಜೊತೆಗಿನ ಈ ಹಿಂದಿನ ಎಲ್ಲಾ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕುತ್ತಿದ್ದೇವೆ. ಭವಿಷ್ಯದಲ್ಲಿ ಯಾವುದೇ ಪ್ರಾಜೆಕ್ಟ್ ನಲ್ಲೂ ಕೆಲಸ ಮಾಡುವುದಿಲ್ಲ' ಎಂದು ಹೇಳಿದ್ದಾರೆ.

  ಕಂಗನಾ ಸಹೋದರಿಯ ಪ್ರತಿಕ್ರಿಯೆ

  ಕಂಗನಾ ಸಹೋದರಿಯ ಪ್ರತಿಕ್ರಿಯೆ

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಕಂಗನಾ ರಣಾವತ್ ಸಹೋದರಿ ರಂಗೋಲಿ ಚಂದೇಲ್ 'ಈ ವ್ಯಕ್ತಿ ಆನಂದ್ ಭೂಷಣ್ ಕಂಗನಾ ಹೆಸರಿನಲ್ಲಿ ಮೈಲೇಜ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ನಾವು ಅವರ ಜೊತೆ ಅಸೊಸಿಯೇಟ್ ಆಗಿಲ್ಲ ಮತ್ತು ಅವರು ಯಾರೆಂದು ನಮಗೆ ತಿಳಿದಿಲ್ಲ.'

  ನಾವು ಬ್ರ್ಯಾಂಡ್ ಆಯ್ಕೆ ಮಾಡಲ್ಲ

  ನಾವು ಬ್ರ್ಯಾಂಡ್ ಆಯ್ಕೆ ಮಾಡಲ್ಲ

  'ಅನೇಕ ಪ್ರಭಾವಶಾಲಿ ಹ್ಯಾಂಡಲ್ ಗಳು ಆತನ ಜೊತೆ ಟ್ಯಾಗ್ ಮಾಡಿ, ಕಂಗನಾ ಹೆಸರನ್ನು ತನ್ನ ಬ್ರಾಂಡ್ ಜೊತೆ ಎಳೆಯುತ್ತಿದ್ದಾರೆ. ಕಂಗನಾ ಯಾವುದೇ ಬ್ರ್ಯಾಂಡ್ ಗಳಿಗೆ ಕೋಟಿ ರೂ. ಕೊಡುತ್ತಾರೆ. ನಾವು ಬಟ್ಟೆಗಳನ್ನು ಆಯ್ಕೆ ಮಾಡುವುದಿಲ್ಲ. ಆದರೆ ಮ್ಯಾಗಜಿನ್ ಸಂಪಾದಕರು ಸಂಪೂರ್ಣ ಔಟ್ ಲುಕ್ ನೋಡಿಕೊಳ್ಳುತ್ತಾರೆ' ಎಂದು ಹೇಳಿದ್ದಾರೆ.

  ಕೊರ್ಟ್ ಮೊರೆ ಹೋಗುವುದಾಗಿ ಹೇಳಿದ ರಂಗೋಲಿ

  ಕೊರ್ಟ್ ಮೊರೆ ಹೋಗುವುದಾಗಿ ಹೇಳಿದ ರಂಗೋಲಿ

  'ಈ ಸಣ್ಣ ಡಿಸೈನರ್ ತನ್ನನ್ನು ಪ್ರಮೋಟ್ ಮಾಡಿಕೊಳ್ಳಲು ಭಾರತದ ಖ್ಯಾತ ನಟಿಯ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ನಾನು ಅವನ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇನೆ. ನಾವು ಅವರೊಂದಿಗೆ ಎಲ್ಲಿ ಮತ್ತು ಹೇಗೆ ಅಸೋಸಿಯೇಟ್ ಆಗಿದ್ದೇವೆ ಎನ್ನುವುದು ಕೋರ್ಟ್ ನಲ್ಲಿ ಸಾಬೀತು ಆಗಲಿ. ನ್ಯಾಯಾಲಯದಲ್ಲಿ ನಿಮ್ಮನ್ನು ನೋಡುತ್ತೇವೆ' ಎಂದು ಬರೆದುಕೊಂಡಿದ್ದಾರೆ.

  English summary
  Designer Anand Bhushan and Rimzim Dadu decide not work with Kangana Ranaut after banned from Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X