For Quick Alerts
  ALLOW NOTIFICATIONS  
  For Daily Alerts

  ಅತ್ಯಾಚಾರ ಆರೋಪ: ಕಂಗನಾ ರಣಾವತ್ ಬಾಡಿಗಾರ್ಡ್ ಕುಮಾರ್ ಮಂಡ್ಯದಲ್ಲಿ ಅರೆಸ್ಟ್

  By ಫಿಲ್ಮ್ ಡೆಸ್ಕ್
  |

  ಅತ್ಯಾಚಾರ ಆರೋಪದ ಮೇಲೆ ಬಾಲಿವುಡ್ ನಟಿ ಕಂಗನಾ ರಣಾವತ್ ಬಾಡಿಬಾರ್ಡ್ ಕುಮಾರ್ ಹೆಗ್ಡೆಯನ್ನು ಇಂದು (ಮೇ 30) ಮಂಡ್ಯದಲ್ಲಿ ಬಂಧಿಸಲಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯ ಹೆಗ್ಗದಹಳ್ಳಿಯಲ್ಲಿ ಕುಮಾರ್ ಹೆಗ್ಡೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

  ಕುಮಾರ್ ಹೆಗ್ಡೆ ವಿರುದ್ಧ ಮುಂಬೈನ ಅಂಧೇರಿ ಮೂಲದ ಬ್ಯೂಟಿಷಿಯನ್ ಅತ್ಯಾಚಾರ ಮತ್ತು ವಂಚನೆ ಆರೋಪ ಮಾಡಿದ್ದರು. ಕುಮಾರ್ ವಿರುದ್ಧ ಮುಂಬೈನ ಡಿಎನ್ ನಗರದ ಪೊಲೀಸ್ ಸ್ಟೇಷನ್‌ನಲ್ಲಿ ಎಫ್ ಐ ಆರ್ ದಾಖಲಾಗಿತ್ತು. ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವುದಾಗಿ ಯುವತಿ ಆರೋಪ ಮಾಡಿದ್ದರು. ಕುಮಾರ್ ಮುಂಬೈ ತೊರೆದು ಕರ್ನಾಟಕಕ್ಕೆ ಬಂದು ತಲೆಮರೆಸಿಕೊಂಡಿದ್ದರು. ಮುಂದೆ ಓದಿ...

  ಕುಮಾರ್ ವಿರುದ್ಧ ಯುವತಿ ಆರೋಪ

  ಕುಮಾರ್ ವಿರುದ್ಧ ಯುವತಿ ಆರೋಪ

  ದೂರು ನೀಡಿರುವ ಯುವತಿ ಹೇಳುವ ಪ್ರಕಾರ 8 ವರ್ಷಗಳಿಂದ ಒಬ್ಬರಿಗೊಬ್ಬರು ತಿಳಿದಿದ್ದು, ಕಳೆದ ವರ್ಷ ಜೂನ್ ನಲ್ಲಿ ಕುಮಾರ್ ಹೆಗ್ಡೆ ಮದುವೆಯಾವುದಾಗಿ ಒಪ್ಪಿಗೆ ನೀಡದ ಬಳಿಕ ಲಿವಿಂಗ್ ಟುಗೆದರ್‌ನಲ್ಲಿ ಇದ್ದೆವು ಎಂದಿದ್ದಾರೆ. ಮೂರ್ನಾಲ್ಕು ತಿಂಗಳಲ್ಲಿ ಮದುವೆಯಾಗುವುದಾಗಿ ಹೇಳಿ ದೈಹಿಕವಾಗಿ ಮತ್ತು ಅಶ್ಲೀಲವಾಗಿ ತನ್ನನ್ನು ಬಳಸಿಕೊಂಡಿರುವುದಾಗಿ ಆರೋಪಿಸಿದ್ದಾರೆ.

  50 ಸಾವಿರ ಪಡೆದು ಊರಿಗೆ ಹೋಗಿದ್ದಾನೆ: ಯುವತಿ ಆರೋಪ

  50 ಸಾವಿರ ಪಡೆದು ಊರಿಗೆ ಹೋಗಿದ್ದಾನೆ: ಯುವತಿ ಆರೋಪ

  'ಏಪ್ರಿಲ್ 27ರಂದು ಕುಮಾರ್ ತಾಯಿ ನಿಧನ ಹೊಂದಿದ್ದಾರೆ, ತನ್ನ ಊರಿಗೆ ಹೋಗಬೇಕೆಂದು 50 ಸಾವಿರ ಕೇಳಿದ. 50 ಸಾವಿರ ನೀಡಿದ ಬಳಿಕ ಅವನು ತನ್ನ ಊರು ಕರ್ನಾಟಕಕ್ಕೆ ಹೋದ. ಬಳಿಕ ಆತ ಸಂಪರ್ಕಕ್ಕೆ ಸಿಕ್ಕಿಲ್ಲ' ಎಂದಿದ್ದರು.

  ಆತನಿಗೆ ಬೇರೊಬ್ಬರ ಜೊತೆ ಮದುವೆ ನಿಗದಿಯಾಗಿದೆ

  ಆತನಿಗೆ ಬೇರೊಬ್ಬರ ಜೊತೆ ಮದುವೆ ನಿಗದಿಯಾಗಿದೆ

  ಮೇ 11ರಂದು ಯುವತಿಗೆ ಕುಮಾರ್ ಸ್ನೇಹಿತನಿಂದ ಫೋನ್ ಕರೆ ಬಂದಿದೆ. ಆತನನ್ನು ಯಾರು ಭೇಟಿ ಮಾಡಲು ಸಾಧ್ಯವಿಲ್ಲ ಮತ್ತು ಆತ ಮತ್ತೊಬ್ಬಳನ್ನು ಮದುವೆಯಾಗಲಿದ್ದಾನೆ ಎಂದು ಹೇಳಿದರು. ಬಳಿಕ ಕುಮಾರ್ ತಾಯಿ ಫೋನ್ ಮಾಡಿ ಇಬ್ಬರು ಬೇರೆ ಬೇರೆ ಜಾತಿಯಾದ ಕಾರಣ ಮದುವೆ ಸಾಧ್ಯವಿಲ್ಲ ಎಂದು ಹೇಳಿದರು ಎಂದು ಯುವತಿ ದೂರಿನಲ್ಲಿ ಹೇಳಿದ್ದಾರೆ.

  ಸಿನಿಮಾದಲ್ಲಿ ನಟಿಸಿ ಅಂತಾ ಅಣ್ಣಾವ್ರ ಮನೆ ಮುಂದೆ ಪ್ರತಿಭಟನೆ ಮಾಡಿದ್ರು ಅಭಿಮಾನಿಗಳು | Filmibeat Kannada
  ಜೂನ್ ನಲ್ಲಿ ಮದುವೆ ಆಗುತ್ತಿದ್ದಾರೆ; ಯುವತಿ ಆರೋಪ

  ಜೂನ್ ನಲ್ಲಿ ಮದುವೆ ಆಗುತ್ತಿದ್ದಾರೆ; ಯುವತಿ ಆರೋಪ

  ಜೂನ್ 5 ರಂದು ಕುಮಾರ್ ಮತ್ತೋರ್ವ ಯುವತಿ ಜೊತೆ ಮದುವೆಯಾಗುತ್ತಿರುವ ಮಾಹಿತಿ ತಿಳಿದುಬಂದಿದೆ. ಆತ ತನಗೆ ಮೋಸ ಮಾಡಿದ್ದಾನೆ, ಅತ್ಯಾಚಾರ ವೆಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಹಿರಿಯ ಪೊಲೀಸ್ ಅಧಿಕಾರಿ ಭಾರತ್ ಗಾಯಕ್ವಾಡ್, ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದರು. ಇದೀಗ ಕುಮಾರ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  English summary
  Bollywood Actor Kangana Ranaut bodyguard Kumar Hegde arrested in Mandya over allegation of rape.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X