For Quick Alerts
  ALLOW NOTIFICATIONS  
  For Daily Alerts

  ಒಂದೇ ಮಂಚ ಇಬ್ಬರೊಂದಿಗೆ ಹಂಚಿಕೊಳ್ಳಲಾರೆ: ಬಾಲಿವುಡ್ ಬೆಡಗಿಯ ಬೋಲ್ಡ್ ಮಾತು

  |

  ನಟಿ ಕಂಗನಾ ರನೌತ್ ತನ್ನ ನಟಯಷ್ಟೆ ತನ್ನ ಬೋಲ್ಡ್ ಮತ್ತು ಬಿಂದಾಸ್ ಮಾತುಗಳಿಂದಲೂ ಬಾಲಿವುಡ್‌ನಲ್ಲಿ ಪರಿಚಿತಳು.

  ಕುತೂಹಲ ಮೂಡಿಸಿದೆ ತಲೈವಿ ಚಿತ್ರದ ಪಾತ್ರಗಳ ಆಯ್ಕೆ | FILMIBEAT KANNDA

  ಬಾಲಿವುಡ್ ವಂಶಪಾರಂಪರ್ಯ, ಮಿ ಟೂ, ನಟರಿಗೆ ಸಿಗುವ ಹೆಚ್ಚಿನ ಪ್ರಾದಾನ್ಯತೆ, ಬಾಲಿವುಡ್ ನ ಹೈ-ಫೈ ಸಂಸ್ಕೃತಿ ಎಲ್ಲವುಗಳ ವಿರುದ್ಧವೂ ಬಿಡುಬೀಸಾಗಿ ಮಾತನಾಡಿರುವ ಕಂಗನಾ ಅಪರೂಪಕ್ಕೆ ತಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

  ಪಿಂಕ್‌ವಿಲ್ಲಾ ಗೆ ನೀಡಿರುವ ಸಂದರ್ಶನದಲ್ಲಿ ತನ್ನ ಜೊತೆಗಾರ ಹೇಗಿರಬೇಕು ಎಂದು ಕಂಗನಾ ರನೌತ್ ವಿವರಿಸಿದ್ದಾರೆ. ಬಾಯ್ ಫ್ರೆಂಡ್ ಆಗುವವನಿಗೆ ಇರಬೇಕಾದ ಅರ್ಹತೆಗಳ ಬಗ್ಗೆಯೂ ಅವರು ಹೇಳಿದ್ದಾರೆ.

  ಕಂಗನಾ ಬಾಯ್‌ಫ್ರೆಂಡ್ ಗೆ ಇರಬೇಕಾದ ಅರ್ಹತೆಗಳ ಪಟ್ಟಿ

  ಕಂಗನಾ ಬಾಯ್‌ಫ್ರೆಂಡ್ ಗೆ ಇರಬೇಕಾದ ಅರ್ಹತೆಗಳ ಪಟ್ಟಿ

  ತಮ್ಮ ಬಾಯ್‌ ಫ್ರೆಂಡ್ ಆಗುವವನಿಗೆ ಇರಬೇಕಾಗಿರುವ ಅರ್ಹತೆಗಳ ಪಟ್ಟಿಯನ್ನೇ ಕಂಗನಾ ರನೌತ್ ನೀಡಿದ್ದಾರೆ. ಅವರು ಒಬ್ಬ ಸಂಪೂರ್ಣ ವ್ಯಕ್ತಿಯಾಗಿರಬೇಕು, ನನ್ನ ವೈಯಕ್ತಿಕ ಜೀವನಕ್ಕೆ ಗೌರವ ಕೊಡಬೇಕು ಎಂದು ಉದ್ದದ ಪಟ್ಟಿಯನ್ನು ಪ್ರಾರಂಭ ಮಾಡಿದ್ದಾರೆ.

  ಬಾಯ್‌ ಫ್ರೆಂಡ್ ಆಗುವವ ಪರಿಪೂರ್ಣನಾಗಿರಬೇಕು

  ಬಾಯ್‌ ಫ್ರೆಂಡ್ ಆಗುವವ ಪರಿಪೂರ್ಣನಾಗಿರಬೇಕು

  ''ನಾನೊಬ್ಬ ಪರಿಪೂರ್ಣ ವ್ಯಕ್ತಿ ಹಾಗಾಗಿ ನನ್ನ ಜೊತೆಗಾರ ಸಹ ಪರಿಪೂರ್ಣ ವ್ಯಕ್ತಿಯಾಗಿಲೆಂಬುದು ನನ್ನ ಬಯಕೆ. ನನ್ನ ಜೀವನ ಪ್ರೀತಿಯನ್ನು ಅವನು ಕಿತ್ತುಕೊಳ್ಳುವಂತಹವಾಗಿರಬಾರದು, ಅವನಲ್ಲಿ ಯಾವುದೇ ಕೊರತೆಗಳು ಇರಬಾರದು'' ಎಂದು ಕಂಗನಾ ಹೇಳಿದ್ದಾರೆ.

  ಕಂಗನಾ ನೀಡಿದ ಬೋಲ್ಡ್ ಉತ್ತರ

  ಕಂಗನಾ ನೀಡಿದ ಬೋಲ್ಡ್ ಉತ್ತರ

  ಪ್ರಸ್ತುತ ಯಾವುದೇ ಬಾಯ್‌ಫ್ರೆಂಡ್ ಇಲ್ಲವೆಂದಿರುವ ಕಂಗನಾ, ಆಗಾಗ್ಗೆ ಸಾಮಾನ್ಯ ಡೇಟ್‌ಗಳಿಗೆ ಹೋಗುತ್ತೇನೆ. ಆದರೆ ಅದನ್ನು ಮುಂದುವರೆಸುವುದಿಲ್ಲ, ಏಕೆಂದರೆ ಒಂದೇ ಮಂಚವನ್ನು ಇಬ್ಬರೊಂದಿಗೆ ಹಂಚಿಕೊಳ್ಳುವಂತಹಾ ಹೆಣ್ಣು ನಾನಲ್ಲ'' ಎಂದು ಕಂಗನಾ ಬೋಲ್ಡ್ ಆಗಿ ಉತ್ತರಿಸಿದ್ದಾರೆ.

  ಕಂಗನಾ ಹೆಸರು ಹೃತಿಕ್ ಜೊತೆ ಕೇಳಿಬಂದಿತ್ತು

  ಕಂಗನಾ ಹೆಸರು ಹೃತಿಕ್ ಜೊತೆ ಕೇಳಿಬಂದಿತ್ತು

  ಕಂಗನಾ ರನೌತ್ ಹೆಸರು ಹೃತಿಕ್ ರೋಷನ್ ಜೊತೆ ಕೇಳಿಬಂದಿತ್ತು. ಆದರೆ ಈ ಇಬ್ಬರ ನಡುವೆ ಬಾರಿ ದೊಡ್ಡ ಜಗಳವೇ ನಡೆದು ವಿಷಯ ನ್ಯಾಯಾಲಯದ ವರೆಗೆ ಹೋಯಿತು. ಕಂಗನಾ ಅವರು ಹೃತಿಕ್ ವಿರುದ್ಧ ದೂರುಗಳ ಸುರಿಮಳೆಯನ್ನೇ ಸುರಿಸಿದ್ದರು.

  English summary
  Bollywood actress Kangana Ranaut said, she can not share same bed with two guys. She was talking about relationships.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X