ಮದುವೆ ಸಂಭ್ರಮದಲ್ಲಿ ಕಂಗನಾ: ಮನೆಗೆ ಅತ್ತಿಗೆಯನ್ನು ಸ್ವಾಗತಿಸಿದ ಬಾಲಿವುಡ್ 'ಕ್ವೀನ್'
ಬಾಲಿವುಡ್ ನಟಿ ಕಂಗನಾ ರಣಾವತ್ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ವಿವಾದಗಳ ಮೂಲಕವೇ ಸದ್ದು ಮಾಡುತ್ತಿದ್ದ ಕಂಗನಾ ಇದೀಗ ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ. ಕಂಗನಾ ಸಹೋದರ ಅಕ್ಷತ್ ಗೆಳತಿ ರೀತು ಜೊತೆ ಇಂದು (ನ.12) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಹೋದರನ ಮದುವೆಯ ಸಂಭ್ರಮದಲ್ಲಿ ಮಿಂದೆದ್ದ ಕಂಗನಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನಿನ್ನೆಯಿಂದ (ನವೆಂಬರ್ 11) ಮದುವೆ ಪೂರ್ವ ಶಾಸ್ತ್ರಗಳ ಫೋಟೋಗಳನ್ನು ಹಂಚಿಕೊಂಡಿದ್ದ ಕಂಗನಾ ಇದೀಗ ಮದುವೆಯ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ರಾಜಸ್ಥಾನದ ಉದೈಪುರ್ ನಲ್ಲಿ ಕಂಗನಾ ಸಹೋದರ ಅಕ್ಷತ್ ಮದುವೆ ಸಮಾರಂಭ ನಡೆಯುತ್ತಿದೆ. ಮುಂದೆ ಓದಿ...

ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆ
ಕಂಗನಾ ಸಹೋದರನ ಮದುವೆ ತೀರ ಖಾಸಗಿಯಾಗಿ ನಡೆಯುತ್ತಿದೆ. ಕೊರೊನಾ ವೈರಸ್ ಕಾರಣದಿಂದ ತೀರಾ ಆಪ್ತರಿಗೆ ಮಾತ್ರ ಆಹ್ವಾನ ನೀಡಿದ್ದಾರೆ. ಮದುವೆಯಲ್ಲಿ ಕಂಗನಾ ಇಡೀ ಕುಟುಂಬದವರು ಹಾಗೂ ಸ್ನೇಹಿತರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.

ಅತ್ತಿಗೆಯನ್ನು ಸ್ವಾಗತಿಸಿದ ಕಂಗನಾ
ಮನೆಗೆ ಆಗಮಿಸಿರುವ ಅತ್ತಿಗೆಯನ್ನು ಕಂಗನಾ ಪ್ರೀತಿಯಿಂದ ಸ್ವಾಗತ ಮಾಡಿದ್ದಾರೆ. ಅಣ್ಣ ಮತ್ತು ಅತ್ತಿಗೆಯ ಜೊತೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ನವ ಜೋಡಿಗೆ ಆಶಿರ್ವಾದಿಸಿ ಎಂದು ಕೇಳಿಕೊಂಡಿದ್ದಾರೆ.

ಪಿಂಕ್ ಮತ್ತು ನೀಲಿ ಬಣ್ಣದ ಲಹೆಂಗಾದಲ್ಲಿ ಕಂಗನಾ ಮಿಂಚಿಂಗ್
ಮೆಹಂದಿ ಶಾಸ್ತ್ರದಲ್ಲಿ ಗೋಲ್ಡ್ ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ದ ಕಂಗನಾ ಮದುವೆಯಲ್ಲಿ ಪಿಂಕ್ ಮತ್ತು ನೀಲಿ ಬಣ್ಣದ ಲೆಹೆಂಗಾದಲ್ಲಿ ಕಂಗೊಳಿಸುತ್ತಿದ್ದಾರೆ. ಸಬ್ಯಸಾಚಿ ಮುಖರ್ಜಿ ವಿನ್ಯಾಸ ಮಾಡಿರುವ ಆಭರಣವನ್ನು ಧರಿಸಿದ್ದಾರೆ.
Recommended Video

ಕಂಗನಾ ಡ್ಯಾನ್ಸ್ ವಿಡಿಯೋ ವೈರಲ್
ಕಂಗನಾ ಮತ್ತು ಸಹೋದರಿ ಮೆಹಂದಿ ಶಾಸ್ತ್ರದಲ್ಲಿ ರಾಜಸ್ಥಾನದ ಜನಪ್ರಿಯ ಜಾನಪದ ಗೀತೆ 'ಕೇಸರಿಯಾ ಬಾಲಮೇ..' ಹಾಡಿಗೆ ಮಸ್ತ್ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಕಂಗನಾ ನೃತ್ಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್ಸ್ ಹರಿದುಬಂದಿದೆ.


Click it and Unblock the Notifications











