For Quick Alerts
  ALLOW NOTIFICATIONS  
  For Daily Alerts

  ಕೆಲಸವಿಲ್ಲದೆ ತೆರಿಗೆ ಕಟ್ಟಲು ಆಗುತ್ತಿಲ್ಲ; ಕಂಗನಾ ರಣಾವತ್

  |

  ಬಾಲಿವುಡ್ ನ ಖ್ಯಾತ ನಟಿ, ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಕಂಗನಾ ರಣಾವತ್ ತೆರಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಕೆಲಸವಿಲ್ಲದೆ ತೆರಿಗೆ ಕಟ್ಟಲು ತಡವಾಗುತ್ತಿದೆ ಎಂದು ಕ್ವೀನ್ ನಟಿ ಹೇಳಿದ್ದಾರೆ.

  ಸದ್ಯ ಕೊರೊನಾ ಲಾಕ್ ಡೌನ್ ನಿಂದ ಅನೇಕರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಕಂಗನಾ ಕೂಡ ಕೆಲಸವಿಲ್ಲದೆ ಟ್ಯಾಕ್ಸ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದು, ಸರ್ಕಾರಕ್ಕೆ ಇನ್ನೂ ಅರ್ಧದಷ್ಟು ತೆರಿಗೆ ಕಟ್ಟಬೇಕು ಎಂದು ಹೇಳಿದ್ದಾರೆ. ಮುಂದೆ ಓದಿ...

  ಅತೀ ಹೆಚ್ಚು ತೆರಿಗೆ ಕಟ್ಟುವ ನಟಿ ನಾನು

  ಅತೀ ಹೆಚ್ಚು ತೆರಿಗೆ ಕಟ್ಟುವ ನಟಿ ನಾನು

  'ನಾನು ಅತ್ಯಧಿಕ ತೆರಿಗೆ ಸ್ಲ್ಯಾಬ್ ಅಡಿಯಲ್ಲಿ ಬರುತ್ತೇನೆ. ನನ್ನ ಆದಾಯದ ಸುಮಾರು ಶೇ. 45ರಷ್ಟು ತೆರಿಗೆ ಕಟ್ಟುತ್ತೇನೆ. ನಾನು ಅತೀ ಹೆಚ್ಚು ತೆರಿಗೆ ಕಟ್ಟುವ ನಟಿಯಾದರೂ ಯಾವುದೇ ಕೆಲಸವಿಲ್ಲದ ಕಾರಣ ನನ್ನ ಕಳೆದ ವರ್ಷದ ತೆರಿಗೆಯ ಅರ್ಧದಷ್ಟು ಇನ್ನೂ ಕಟ್ಟಿಲ್ಲ. ನನ್ನ ಜೀವನದಲ್ಲಿ ಮೊದಲ ಬಾರಿಗೆ ತೆರಿಗೆ ಕಟ್ಟುವುದನ್ನು ತಡಮಾಡಿದ್ದೇನೆ' ಎಂದು ಹೇಳಿದ್ದಾರೆ.

  ಸರ್ಕಾರ ಬಡ್ಡಿ ವಿಧಿಸುತ್ತಿದೆ

  ಸರ್ಕಾರ ಬಡ್ಡಿ ವಿಧಿಸುತ್ತಿದೆ

  'ಆದರೆ ಬಾಕಿ ಇರುವ ತೆರಿಗೆ ಹಣಕ್ಕೆ ಸರ್ಕಾರ ಬಡ್ಡಿ ವಿಧಿಸುತ್ತಿದೆ. ಈ ಕ್ರಮವನ್ನು ನಾನು ಸ್ವಾಗತಿಸುತ್ತೇನೆ. ಸಮಯವೂ ತುಂಬ ಕಠಿಣವಾಗಿದೆ. ಆದರೆ ಎಲ್ಲರೂ ಒಟ್ಟಾದರೆ ಸಮಯಕ್ಕಿಂತ ನಾವು ಕಠಿಣವಾಗುತ್ತೇವೆ' ಎಂದು ಕಂಗನಾ ಬರೆದುಕೊಂಡಿದ್ದಾರೆ.

  ಮತ್ತೆ ಸಿನಿಮಾ ಕೆಲಸಗಳು ಪ್ರಾರಂಭ

  ಮತ್ತೆ ಸಿನಿಮಾ ಕೆಲಸಗಳು ಪ್ರಾರಂಭ

  ಇತ್ತೀಚಿಗೆಷ್ಟೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಕಂಗನಾ ಸದ್ಯ ಚೇತರಿಸಿಕೊಂಡಿದ್ದಾರೆ. ಹಿಮಾಚಲ ಪ್ರದೇಶದ ಮನೆಯಲ್ಲೇ ಇದ್ದ ಕಂಗನಾ ಇತ್ತೀಚಿಗೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ಮುಂಬೈನ ತನ್ನ ಕಚೇರಿಗೆ ಭೇಟಿ ನೀಡಿದ್ದ ಕಂಗನಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸದ್ಯ ಮಹಾರಾಷ್ಟ್ರ ಸರ್ಕಾರ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದು, ಮತ್ತೆ ಕೆಲಸ ಪ್ರಾರಂಭ ಮಾಡಲು ಸಜ್ಜಾಗಿದ್ದಾರೆ.

  ಸಿನಿಮಾದಲ್ಲಿ ರೋಹಿಣಿ ಸಿಂಧೂರಿ ಪಾತ್ರ ಮಾಡ್ತಿರೋ ನಟಿ ಯಾರು ಗೊತ್ತಾ? | Filmibeat Kannada
  ಕಂಗನಾ ಸಿನಿಮಾಗಳು

  ಕಂಗನಾ ಸಿನಿಮಾಗಳು

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಬಹುನಿರೀಕ್ಷೆಯ ತಲೈವಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣ ತಡವಾಗುತ್ತಿದೆ. ಜೊತೆಗೆ ತೇಜಸ್ ಮತ್ತು ದಾಖಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

  English summary
  Bollywood Actress Kangana Ranaut claims she is late paying Tax due to no work.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X