ಇನ್ನೊಂದೈದು ಜನ ಇದ್ದಿದ್ದರೆ ರವೀನಾ ಟಂಡನ್ ಕೊಲೆಯಾಗುತ್ತಿತ್ತು - ಕಂಗನಾ ರಣಾವತ್...!

ಚಿತ್ರಕ್ಕೆ ಮತ್ತು ಪಾತ್ರಕ್ಕೆ ತನು-ಮನ ಅರ್ಪಿಸುವುದಲ್ಲದೇ ಪ್ರಬಲ ಶಕ್ತಿಗಳ ಮುಂದೆ ತನ್ನ ವ್ಯಕ್ತಿತ್ವಕ್ಕೆ ಮಸಿ ತಗುಲದಂತೆ ಬಾಲಿವುಡ್ ನಲ್ಲಿ ಸ್ಟಾರ್ ಪಟ್ಟವನ್ನು ಅಲಂಕರಿಸಿದವರು ಕಂಗನಾ ರಣಾವತ್. ಹಿಮಾಚಲದ ಪ್ರದೇಶದ ಮಂಡಿಯಿಂದ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದು, ಗೆಲ್ಲುವ ವಿಶ್ವಾಸದಲ್ಲಿ ಫಲಿತಾಂಶದ ದಿನವನ್ನ ಕಾತುರದಿಂದ ಕಾಯುತ್ತಿರುವ ಕಂಗನಾ ರಣಾವತ್ ಸದ್ಯಕ್ಕೆ ರವೀನಾ ಟಂಡನ್ ಅವರ ಹಲ್ಲೆ ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ. ರವೀನಾ ಟಂಡನ್ ಪರ ಧ್ವನಿಯೆತ್ತಿದ್ದಾರೆ.

ಹೌದ, ರವೀನಾ ಟಂಡನ್ ಅವರ ಪ್ರಕರಣದ ಸುತ್ತ ಮುತ್ತ ತಮ್ಮ ಅಭಿಪ್ರಾಯವನ್ನ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಕಂಗನಾ ರಣಾವತ್, ರವೀನಾ ಟಂಡನ್ ಜೀ ಮೇಲೆ ಹೀಗಾಗಿರೋದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎಂದಿದ್ದಾರೆ. ಎದುರಿನ ಗುಂಪಿನಲ್ಲಿ ಇನ್ನೂ ಐದಾರು ಜನ ಹೆಚ್ಚು ಇದ್ದಿದ್ರೆ ರವೀನಾರನ್ನ ಹತ್ಯೆಯೇ ಮಾಡಿಬಿಡುತ್ತಿದ್ದರು ಎಂದಿರುವ ಕಂಗನಾ, ಇಂತಹ ರಸ್ತೆ ಆಕ್ರೋಶದ ಪ್ರಕೋಪಗಳನ್ನು ಪುಂಡಾಟಗಳನ್ನ ನಾನು ಖಂಡಿಸುತ್ತೇನೆ ಎಂದಿದ್ದಾರೆ. ಇಂತಹ ಜನರಿಗೆ ೀಮಾರಿ ಹಾಕಬೇಕು ಹಾಗೂ ಹಿಂಸಾತ್ಮಕ ಹಾಗೂ ವಿಷಕಾರಿ ನಡುವಳಿಕೆ ಹೊಂದಿರುವ ಇವರು ತಪ್ಪಿಸಿಕೊಳ್ಳಬಾರದು ಎಂದು ತಮ್ಮ ಆಕ್ರೋಶವನ್ನ ಕಂಗನಾ ರಣಾವತ್ ಹೊರ ಹಾಕಿದ್ದಾರೆ

Kangana Ranaut comes out in support of Raveena Tandon after attack

ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನ ನೀಡಿರುವ ಜೋನ್ 9ರ ಡಿಸಿಪಿ ರಾಜ್ ತಿಲಕ್ ರೋಷನ್ ರವೀನಾ ಟಂಡನ್ ಮದ್ಯದ ಅಮಲಿನಲ್ಲಿರಲಿಲ್ಲ ಅನ್ನುವುದನ್ನ ಸ್ಪಷ್ಟಪಡಿಸಿದ್ದಾರೆ. ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದು, ಕಾರು ಯಾರಿಗೂ ಡಕ್ಕಿ ಹೊಡೆದಿಲ್ಲ ಎಂದಿದ್ದಾರೆ. ರವೀನಾ ಅವರು ಕಾರಿನಲ್ಲಿ ಮನೆಗೆ ಬರುತ್ತಿದ್ದರು. ಅವರ ಕಾರನ್ನು ರಿವರ್ಸ್ ತೆಗೆದುಕೊಳ್ಳಲಾಗುತ್ತಿತ್ತು. ಯಾರಿಗೂ ಕಾರು ಟಚ್ ಆಗಿಲ್ಲ. ಆದಾಗ್ಯೂ ಮಾತಿನ ಚಕಮಕಿ ನಡೆದಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ರವೀನಾ ಆಗಲಿ, ನಮ್ಮ ಮೇಲೆ ಹಲ್ಲೆ ಆಗಿದೆ ಎಂದವರಾಗಲಿ ದೂರು ದಾಖಲು ಮಾಡಿಲ್ಲ. ಹೀಗಾಗಿ ಯಾವುದೇ ಕೇಸ್ ಇಲ್ಲ ಎಂಬ ಮಾತು ಸದ್ಯಕ್ಕೆ ಕೇಳಿ ಬರುತ್ತಿದೆ. ಅಂದ್ಹಾಗೇ ನನ್ನನ್ನ ಹೊಡೆಯಬೇಡಿ ಎಂದು ಕೈ ಮುಗಿದು ರವೀನಾ ಟಂಡ್ ಅಂಗಲಾಚಿದ ವಿಡಿಯೋ ವೈರಲ್ ಆದರೂ ಕೂಡ ಬಾಲಿವುಡ್‌ ನಲ್ಲಿ ಇಲ್ಲಿವರೆಗೆ ಯಾರು ರವೀನಾ ಅವರ ಪರವಾಗಿ ಮಾತನಾಡಿರಲಿಲ್ಲ. ಈ ಘಟನೆಯನ್ನ ಖಂಡಿಸಿರಲಿಲ್ಲ. ಇದು.. ಸಾಮಾಜಿಕ ಜಾಲತಾಣದಲ್ಲಿ ಅನೇಕರನ್ನ ಕೆರಳಿಸಿತ್ತು. ಬಾಲಿವುಡ್‌ ಕೇವಲ ಲಾಭವನ್ನಷ್ಟೇ ನೋಡುತ್ತೆ ಹೊರತು ತಮ್ಮ ಕುಟುಂಬದ ಸದಸ್ಯರ ಪರ ಯಾವತ್ತು ನಿಲ್ಲಲ್ಲ, ಧ್ವನಿ ಎತ್ತಲ್ಲ ಅನ್ನುವ ಅಭಿಪ್ರಾಯ ಕೂಡ ಕೇಳಿ ಬಂದಿತ್ತು.

ಆದರೆ ಈಗ ಕಂಗನಾ ರಣಾವತ್ ತಮ್ಮ ಚಿತ್ರರಂಗದ ಹಿರಿಯ ನಟಿ ರವೀನಾ ಟಂಡನ್ ಪರ ಮಾತನಡಿದ್ದಾರೆ. ಘಟನೆಯನ್ನ ಖಂಡಿಸಿದ್ದಾರೆ. ಕಂಗನಾ ಅವರ ಈ ನಡೆ ಸದ್ಯಕ್ಕೆ ಅನೇಕರ ಹೃದಯವನ್ನ ಗೆದ್ದಿದೆ. ರವೀನಾ ಪರವಾಗಿ ಮಾತನಾಡಿದ್ದಕ್ಕೆ ಸಾಮಾಜಿಕ ಜಾಲತಾಣದ ಒಂದು ಬಣ ಕಂಗನಾಗೆ ಧನ್ಯವಾದ ಹೇಳುತ್ತಿದೆ. ಇನ್ನೊಂದು ಕಡೆ ಇದೇ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಬಣ ಕಂಗನಾ ಅವರ ಈ ಅಭಿಪ್ರಾಯಕ್ಕೂ ಧರ್ಮದ ಬಣ್ಣ ಹಚ್ಚುವ ಪ್ರಯತ್ನವನ್ನ ಮಾಡುತ್ತಿದೆ.

More from Filmibeat

English summary
Kangana Ranaut strongly condemns the mob attack on Raveena Tandon in Mumbai, expressing grave concern over the potential danger Tandon faced, stating, "She could have been lynched..."
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X