twitter
    For Quick Alerts
    ALLOW NOTIFICATIONS  
    For Daily Alerts

    ಭಾರತದಲ್ಲಿ ಟ್ವಿಟ್ಟರ್ ಮುಚ್ಚಿಬಿಡಿ: ಅಕ್ಕನಿಗೆ ನಟಿ ಕಂಗನಾ ರಣಾವತ್ ಬೆಂಬಲ

    |

    ಅಕ್ಕನ ಖಾತೆಯನ್ನು ಸಸ್ಪೆಂಡ್ ಮಾಡಿರುವ ಟ್ವಿಟ್ಟರ್ ಅನ್ನೇ ಭಾರತದಲ್ಲಿ ನಿಷೇಧಿಸಬೇಕು ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಆಗ್ರಹಿಸಿದ್ದಾರೆ. ಸಹೋದರಿ ರಂಗೋಲಿ ಚಾಂಡೆಲ್ ಅವರನ್ನು ಸಮರ್ಥಿಸಿಕೊಂಡಿರುವ ಕಂಗನಾ, ಆಕೆ ಯಾವುದೇ ತಪ್ಪನ್ನು ಮಾಡಿಲ್ಲ ಎಂದಿದ್ದಾರೆ.

    ವೈದ್ಯರು ಮತ್ತು ಪೊಲೀಸರ ಮೇಲೆ ದಾಳಿಯಾಗುತ್ತಿರುವ ಘಟನೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ರಂಗೋಲಿ, ಮುಲ್ಲಾಗಳು ಮತ್ತು ಸೆಕ್ಯುಲರ್ ಮೀಡಿಯಾಗಳನ್ನು ಸಾಲಾಗಿ ನಿಲ್ಲಿಸಿ ಗುಂಡಿಕ್ಕಬೇಕು ಎಂದು ಹೇಳಿದ್ದರು. ಇದರ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ರಂಗೋಲಿ ಅವರ ಟ್ವಿಟ್ಟರ್ ಖಾತೆಯನ್ನು ಅಮಾನತು ಮಾಡಲಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಂಗನಾ ಟ್ವಿಟ್ಟರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮುಂದೆ ಓದಿ..

    ತಪ್ಪಾಗಿ ಹೇಳಿಲ್ಲ

    ತಪ್ಪಾಗಿ ಹೇಳಿಲ್ಲ

    'ವೈದ್ಯರು ಮತ್ತು ವೈದ್ಯಕೀಯ ಆರೋಗ್ಯ ಕಾರ್ಯಕರ್ತರ ಮೇಲೆ ದಾಳಿ ಮಾಡುವ ಜನರನ್ನು ಗುಂಡಿಕ್ಕಬೇಕು ಎಂದು ನಿರ್ದಿಷ್ಟವಾಗಿ ನನ್ನ ಸಹೋದರಿ ಹೇಳಿದ್ದಾಳೆ. ಆದರೆ, ಸುಸೇನ್ ರೋಷನ್ ಸಹೋದರಿ ಫರಾಹ್ ಅಲಿ ಖಾನ್ ಮತ್ತು ಖ್ಯಾತ ನಿರ್ದೇಶಕಿ ರೀಮಾ ಕಗ್ತಿ, ಮುಸ್ಲಿಮರ ಹತ್ಯಾಕಾಂಡಕ್ಕೆ ರಂಗೋಲಿ ಕರೆ ನೀಡುತ್ತಿದ್ದಾಳೆ ಎಂದು ತಪ್ಪಾಗಿ ಬಿಂಬಿಸಿದ್ದಾರೆ. ಅಂತಹ ಟ್ವೀಟ್ ಕಂಡುಬಂದರೆ ನಾನು ಮತ್ತು ರಂಗೋಲಿ ಕ್ಷಮೆ ಕೋರುತ್ತೇವೆ. ಎಲ್ಲ ಮುಸ್ಲಿಮರೂ ಭಯೋತ್ಪಾದಕರು ಅಥವಾ ಎಲ್ಲ ಮುಸ್ಲಿಮರೂ ವೈದ್ಯರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂಬುದನ್ನು ನಾವು ನಂಬುವುದಿಲ್ಲ' ಎಂದಿದ್ದಾರೆ.

    ದ್ವೇಷ ಬಿತ್ತುವ ಟ್ವೀಟ್: ಕಂಗನಾ ರಣಾವತ್ ಅಕ್ಕನ ಟ್ವಿಟ್ಟರ್ ಖಾತೆ ಸಸ್ಪೆಂಡ್ದ್ವೇಷ ಬಿತ್ತುವ ಟ್ವೀಟ್: ಕಂಗನಾ ರಣಾವತ್ ಅಕ್ಕನ ಟ್ವಿಟ್ಟರ್ ಖಾತೆ ಸಸ್ಪೆಂಡ್

    ನಮ್ಮ ಹಣ ಪಡೆದು ನಮಗೇ ಧಕ್ಕೆ

    ನಮ್ಮ ಹಣ ಪಡೆದು ನಮಗೇ ಧಕ್ಕೆ

    ಟ್ವಿಟ್ಟರ್ ವಿರುದ್ಧವೂ ಕಿಡಿಕಾರಿರುವ ಕಂಗನಾ, ಟ್ವಿಟ್ಟರ್‌ಅನ್ನು ಭಾರತದಲ್ಲಿ ಸ್ಥಗಿತಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. 'ಭಾರತೀಯರಿಂದ ಕೋಟಿಗಟ್ಟಲೆ ಹಣವನ್ನು ಸಂಪಾದಿಸುತ್ತಿದ್ದರೂ ಈ ಸಾಮಾಜಿಕ ವೇದಿಕೆಯು ನಮ್ಮ ಗೌರವಕ್ಕೆ ಧಕ್ಕೆ ತರುತ್ತಿದೆ' ಎಂದು ಆರೋಪಿಸಿದ್ದಾರೆ.

    ನಿಜವಾದ ಉಗ್ರರನ್ನು ಉಗ್ರರೆನ್ನುವಂತಿಲ್ಲ

    ನಿಜವಾದ ಉಗ್ರರನ್ನು ಉಗ್ರರೆನ್ನುವಂತಿಲ್ಲ

    ಇದು ನಾಚಿಕೆಗೇಡು. ಜನರು ಪ್ರಧಾನಿ, ಗೃಹ ಮಂತ್ರಿಯಂತಹ ವ್ಯಕ್ತಿಗಳು, ಆರೆಸ್ಸೆಸ್‌ನಂತಹ ಸಮಾಜ ಕಲ್ಯಾಣ ಸಂಘಟನೆಗಳ ಮೇಲೆ ದಾಳಿ ಮಾಡಬಹುದು, ಅವರನ್ನು ಭಯೋತ್ಪಾದಕರು ಎಂದು ಕರೆಯಬಹುದು. ಆದರೆ ನೀವು ನಿಜವಾದ ಉಗ್ರರನ್ನು ಉಗ್ರರು ಎನ್ನುವಂತಿಲ್ಲ ಎಂಬುದಾಗಿ ವಾಗ್ದಾಳಿ ನಡೆಸಿದ್ದಾರೆ.

    ಹೀಗೇನಾದರು ಆದರೆ ಕಂಗನಾ ಅಭಿನಯ ನಿಲ್ಲಿಸುತ್ತಾರೆ: ಸವಾಲ್ ಎಸೆದ ರಂಗೋಲಿಹೀಗೇನಾದರು ಆದರೆ ಕಂಗನಾ ಅಭಿನಯ ನಿಲ್ಲಿಸುತ್ತಾರೆ: ಸವಾಲ್ ಎಸೆದ ರಂಗೋಲಿ

    ನಮ್ಮದೇ ವೇದಿಕೆ ಬೇಕು

    ನಮ್ಮದೇ ವೇದಿಕೆ ಬೇಕು

    'ಅಂತಹ ಪ್ಲಾಟ್‌ಫಾರ್ಮ್‌ಗಳನ್ನು ಸ್ಥಗಿತಗೊಳಿಸಬೇಕು. ಇಂತಹ ಪ್ಲಾಟ್‌ಫಾರ್ಮ್‌ಗಳನ್ನು ಸಂಪೂರ್ಣವಾಗಿ ನಾಶಪಡಿಸುವ ಮಾರ್ಗವನ್ನು ನಾವು ಕಂಡುಕೊಳ್ಳಬೇಕು. ಮತ್ತು ನಮ್ಮದೇ ಆದ ಪ್ಲಾಟ್‌ಫಾರ್ಮ್‌ಗಳನ್ನು ಆರಂಭಿಸಬೇಕು' ಎಂದಿದ್ದಾರೆ.

    English summary
    Bollywood Actress Kangana Ranaut has defended her sister Rangoli Chandel and said platforms like twitter need to be demolished.
    Saturday, April 18, 2020, 21:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X