For Quick Alerts
  ALLOW NOTIFICATIONS  
  For Daily Alerts

  ಬಂಗಲೆ ಹಾನಿ: 2 ಕೋಟಿ ಪರಿಹಾರ ಕೇಳಿದ ನಟಿ ಕಂಗನಾ ರಣಾವತ್

  |

  ನಟಿ ಕಂಗನಾ ರಣಾವತ್ ಬಂಗಲೆಯನ್ನು ಒಡೆದು ಹಾಕಿದ್ದಕ್ಕೆ 2 ಕೋಟಿ ಪರಿಹಾರ ಕೋರಿ ಮುಂಬೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಸೆಪ್ಟಂಬರ್ 9ರಂದು ಮುಂಬೈ ಮಹಾನಗರ ಪಾಲಿಗೆ ಕಂಗನಾ ರಣಾವತ್ ಅವರ ಬಾಂದ್ರಾದಲ್ಲಿರುವ ಪಾಲಿ ಹಿಲ್ ಬಂಗಲೆಯನ್ನು ಅಕ್ರಮ ಕಟ್ಟಡ ಎಂದು ತೆರವು ಕಾರ್ಯಚರಣೆಗೆ ಮುಂದಾಗಿತ್ತು.

  ಕೋರ್ಟ್ ಆದೇಶ ನೀಡಿದ ಬಳಿಕ ಮುಂಬೈ ಮಹಾನಗರ ಪಾಲಿಕೆ ಕಂಗನಾ ಬಂಗಲೆ ತೆರವು ಕಾರ್ಯಚರಣೆಯನ್ನು ನಿಲ್ಲಿಸಿದ್ದಾರೆ. ಆದರೆ ಕಟ್ಟಡದ ಸಾಕಷ್ಟು ಭಾಗ ಹಾನಿಯಾಗಿದೆ.

  ಬಾಂಬೆ ಹೈ ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕಂಗನಾ, ಬಂಗಲೆಯ ಶೇ 40ರಷ್ಟು ಹಾನಿಯಾಗಿದೆ. ಬಂಗಲೆಯ ಒಳಗಡೆ ಇದ್ದ ಅಪರೂಪದ ವಸ್ತುಗಳನ್ನು ನಾಶಪಡಿಸಿದ್ದಾರೆ. ಹಾಗಾಗಿ ಬಿಎಂಸಿ 2 ಕೋಟಿ ಪರಿಹಾರ ನೀಡಬೇಕು ಎಂದು ತಿಳಿಸಿದ್ದಾರೆ.

  ಹಳೆ ಚಿತ್ರ ಹೇಳುತ್ತಿದೆ ಬೇರೆಯದ್ದೇ ಕತೆ: ಕಂಗನಾ ಜೊತೆಗಿರುವಾತ ಯಾರು?

  ಸೆಪ್ಟಂಬರ್ 7ರಂದು ಕಂಗನಾ ಬಂಗಲೆ ನೆಲಸಮ ಮಾಡುವಂತೆ ನೋಟಿಸ್ ನೀಡಲಾಗಿತ್ತು. ಮನಾಲಿಯಲ್ಲಿದ್ದ ನನಗೆ ಕಿರುಕುಳ ನೀಡಲು ಹೊರಟಿದೆ ಎಂದು ಆರೋಪಿಸಿದ್ದರು. ಸಾಂಕ್ರಾಮಿಕ ರೋಗದ ಮಧ್ಯೆ ಮನಾಲಿಯಲ್ಲಿದ್ದಾಗ 24 ಗಂಟೆಯೊಳಗಡೆ ನೋಟಿಸ್ ಗೆ ಉತ್ತರ ನೀಡಲು ತಿಳಿಸಿದ್ದರು.

  2 ದಿನಗಳ ಬಳಿಕ ಕಂಗನಾ ಮುಂಬೈಗೆ ಬಂದರು. ಶಿವಸೇನೆ ಮತ್ತು ಕಂಗನಾ ನಡುವಿನ ವಾಕ್ಸಮರ ಹೆಚ್ಚಾಗಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದರು. ಹೀಗಾಗಿ ಕೇಂದ್ರ ಸರ್ಕಾರ ವೈ ಪ್ಲಸ್ ಭದ್ರತೆಯನ್ನು ಒದಗಿಸಿತ್ತು.

  ಭಾರಿ ಭದ್ರತೆಯೊಂದಿಗೆ ಕಂಗನಾ ಮುಂಬೈ ನಗರಕ್ಕೆ ಬಂದಿಳಿದಿದ್ದರು. ಸೆಪ್ಟಂಬರ್ 14ಕ್ಕೆ ಮತ್ತೆ ಹಿಮಾಚಲ ಪ್ರದೇಶಕ್ಕೆ ವಾಪಸ್ ಆಗಿದ್ದಾರೆ. ಕಂಗನಾ ಮತ್ತು ಶಿವಸೇನೆ ನಡುವೆ ವಾಕ್ಸಮರ ಮುಂದು ವರೆದಿದೆ. ಹಿಮಾಚಲ ಪ್ರದೇಶಕ್ಕೆ ವಾಪಸ್ ಆಗುವಾಗಲು ಮುಂಬೈ ನಗರ ಪಾಕ್ ಆಕ್ರಮಿತ ಕಾಶ್ಮೀರ ಎಂದು ಹೇಳಿದ ಹೇಳಿಕೆಯನ್ನು ಮತ್ತೆ ಉಲ್ಲೇಖಿಸಿ ಶಿವಸೇನೆಯನ್ನು ಕೆಣಕಿದ್ದಾರೆ. ಸೆಪ್ಟಂಬರ್ 22ರಂದು ಮುಂಬೈ ಹೈ ಕೋರ್ಟ್ ಕಂಗನಾ ಅರ್ಜಿಯನ್ನು ವಿಚಾರಣೆ ನಡೆಸಲಿದೆ.

  English summary
  Kangana Ranaut Demands 2 crore compensation for damages to demolition at Mumbai office.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X