Kangana Ranaut: ರಾವಣ ದಹನಕ್ಕೆ ಕಂಗನಾ ಪರದಾಟ!: ವಿಡಿಯೋ ಫುಲ್ ವೈರಲ್
ಪ್ರತಿ ವರ್ಷ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ದಸರಾ ಸಂಭ್ರಮ ಜೋರಾಗಿರುತ್ತದೆ. ಪ್ರಧಾನಿ ಸೇರಿದಂತೆ ಹಲವು ಗಣ್ಯರು ಈ ಆಚರಣೆಯಲ್ಲಿ ಭಾಗವಹಿಸುತ್ತಾರೆ. ಪ್ರಧಾನಿ, ರಾಷ್ಟ್ರಪತಿ ಅಥವಾ ಯಾರಾದರೂ ಸೆಲೆಬ್ರಿಟಿಗಳು ಈ ಸಮಾರಂಭದಲ್ಲಿ ಭಾಗವಹಿಸಿ ರಾವಣ ಪ್ರತಿಕೃತಿ ದಹನ ಮಾಡುವುದು ವಾಡಿಕೆ. ಈ ಬಾರಿ ಆ ಅವಕಾಶ ನಟಿ ಕಂಗನಾ ರಾಣಾವತ್‌ಗೆ ಸಿಕ್ಕಿತ್ತು.
50 ವರ್ಷಗಳ ಇತಿಹಾಸದಲ್ಲಿ ಮಹಿಳಾ ಸೆಲೆಬ್ರಿಟಿಯೊಬ್ಬರು ರಾವಣ ದಹನ ಮಾಡಿದ್ದು ಇದೇ ಮೊದಲು. ರಾಮ್ ಲೀಲಾ ಮೈದಾನದಲ್ಲಿ ರಾವಣ ದಹನದ ಮೊದಲು ಒಂದು ಸಣ್ಣ ವಿಘ್ನ ಎದುರಾಯಿತು. ಕಂಗನಾ ರಾಣಾವತ್ ರಾವಣನನ್ನು ದಹನ ಮಾಡುವ ಮುನ್ನವೇ ರಾವಣನ ಪ್ರತಿಕೃತಿ ಕೆಳಗೆ ಬಿದ್ದಿತ್ತು. ಕೂಡಲೇ ಸಮಿತಿ ಸದಸ್ಯರು ಎಚ್ಚೆತ್ತುಕೊಂಡು ತಕ್ಷಣವೇ ಪ್ರತಿಕೃತಿ ಮತ್ತೆ ನಿಲ್ಲಿಸಿದರು. ಬಳಿಕ ಕಂಗನಾ ಬಾಣ ಬೊಟ್ಟು ರಾವಣನ ಪ್ರತಿಕೃತಿ ದಹನ ಮಾಡಿದರು.

ಕಂಗನಾ ಈ ರೀತಿ ಬಾಣ ಬಿಟ್ಟು ಪ್ರತಿಕೃತಿ ದಹನ ಮಾಡಲು ಸಾಕಷ್ಟು ಸರ್ಕಸ್ ಮಾಡಿದರು. ಮೂರು ಪ್ರಯತ್ನಿಸಿದರೂ ಕಂಗನಾ ಬಾಣವನ್ನು ಸರಿಯಾಗಿ ಪ್ರಯೋಗ ಮಾಡಲು ಸಾಧ್ಯವಾಗಲಿಲ್ಲ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಂಪು ಬಣ್ಣದ ಬನಾರಸ್ ಸಿಲ್ಕ್ ಸೀರೆಯಲ್ಲಿ ಕಂಗನಾ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಸಹ ರಾಮಾಲೀಲಾ ಮೈದಾನದ ದಸರಾ ಆಚರಣೆಯಲ್ಲಿ ಭಾಗಿ ಆಗಿದ್ದರು. ಕಂಗನಾ ಮೊದಲು ಬಾಣ ಬಿಡಲು ಯತ್ನಿಸಿ ಸೋತು ನಕ್ಕರು. ಎರಡ್ಮೂರು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗದಿದ್ದಾಗ ಮತ್ತೊಬ್ಬರು ಬಾಣ ಪ್ರಯೋಗಿಸಿದರು. ಆಗ ಮೈಕ್ ತೆಗೆದುಕೊಂಡು ಕಂಗನಾ'ಜೈ ಶ್ರೀ ರಾಮ್' ಘೋಷಣೆ ಮಾಡಿದರು.
ಸದ್ಯ ಕಂಗನಾ ಬಾಣ ಪ್ರಯೋಗಿಸಲು ವಿಫಲವಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತೆರೆಮೇಲೆ ಮಾತ್ರ ಸೆಲೆಬ್ರೆಟಿಗಳು ಸಾಹಸಗಳನ್ನು ಮಾಡುತ್ತಾರೆ. ನಿಜ ಜೀವನದಲ್ಲಿ ಅಲ್ಲ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಮಣಿಕರ್ಣಿಕಾ ಸಿನಿಮಾದಲ್ಲಿ ಕಂಗನಾ ಸಾಹಸ ಪ್ರದರ್ಶನದ ವಿಡಿಯೋ ಜೊತೆಗೆ ಈ ವಿಡಿಯೋ ಸೇರಿಸಿ ವೈರಲ್ ಮಾಡುತ್ತಿದ್ದಾರೆ.
ವಾಸ್ತವವಾಗಿ, ಈ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಬೇಕು. 5 ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಕಂಗನಾ ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮೇಲಾಗಿ ಇತ್ತೀಚೆಗಷ್ಟೇ ಮಹಿಳಾ ಮೀಸಲಾತಿ ಮಸೂದೆಗೆ ಸಂಸತ್ತಿನ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಈ ಬಾರಿ ರಾಮ್ ಲೀಲಾ ಸಮಿತಿ ರಾವಣ ದಹನ್ ಕಾರ್ಯಕ್ರಮಕ್ಕೆ ಕಂಗನಾಗೆ ಆಹ್ವಾನ ನೀಡಿತ್ತು. ಬಾಲಿವುಡ್ ಕ್ವೀನ್ ಜೊತೆಗೆ ಇನ್ನೂ ಕೆಲವು ಸೆಲೆಬ್ರಿಟಿಗಳು ಕೂಡ ಉಪಸ್ಥಿತರಿದ್ದರು.
ರಾವಣ ದಹನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಗ್ಗೆ ನಟಿ ಕಂಗನಾ ರಣಾವತ್ ಸಂತಸ ವ್ಯಕ್ತಪಡಿಸಿದ್ದಾರೆ. "50 ವರ್ಷಗಳಿಂದ ಈ ಸಮಾರಂಭ ನಡೆಯುತ್ತಿದೆ. ಆದರೆ ಮಹಿಳೆಯೊಬ್ಬರು ರಾವಣ ದಹನ ಕಾರ್ಯಕ್ರಮ ನಡೆಸುತ್ತಿರುವುದು ಇದೇ ಮೊದಲು. ಆ ಅವಕಾಶ ಸಿಕ್ಕಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ" ಎಂದಿದ್ದಾರೆ. ಕಂಗನಾ ಅಭಿನಯದ 'ತೇಜಸ್' ಸಿನಿಮಾ ಇದೇ ತಿಂಗಳ 27 ರಂದು ಬಿಡುಗಡೆಯಾಗಲಿದೆ. ಸರ್ವೇಶ್ ಮೇವಾರ ನಿರ್ದೇಶನದ ಈ ಚಿತ್ರವನ್ನು ರೋನಿ ನಿರ್ಮಿಸಿದ್ದಾರೆ.


Click it and Unblock the Notifications











