ಸರ್ಕಾರದಲ್ಲಿ ನಮ್ಮ ಮೋದಿ ಜೀ ಬಾಲಿವುಡ್‌ನಲ್ಲಿ ನೀವು ; ಹೀಗೆ ಪಾಕಿಸ್ತಾನದ ಹುಟ್ಟಡಗಿಸಿ-ಕಂಗನಾ ಕಂಡಂತೆ ಧುರಂಧರ್

ಬಾಲಿವುಡ್‌ನ ವಿವಾದಿತ ಬೆಡಗಿ ಮತ್ತು ರಾಜಕಾರಣಿ ಕಂಗನಾ ರಾಣಾವತ್ ಅವರು ಯಾವಾಗಲೂ ತಮ್ಮ ನೇರ ನುಡಿಯಿಂದಲೇ ಸುದ್ದಿಯಲ್ಲಿ ಇರುತ್ತಾರೆ. ಸಿನಿಮಾ ವಿಚಾರ ಇರಲಿ ಅಥವಾ ದೇಶದ ವಿಚಾರ ಇರಲಿ ಅವರು ತಮ್ಮ ಅಭಿಪ್ರಾಯವನ್ನು ಮುಚ್ಚುಮರೆ ಇಲ್ಲದೆ ಹಂಚಿಕೊಳ್ಳುತ್ತಾರೆ. ಈಗ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಅಭಿಮಾನಿಗಳ ಗಮನ ಸೆಳೆದಿದೆ. ಹಲವರ ಮೆಚ್ಚುಗೆಗೆ ಕೂಡ ಪಾತ್ರವಾಗಿದೆ.

ಹೌದು, ಅಸಲಿಗೆ ಸಿನಿಮಾ ತಾರೆಯರು ಸಾಮಾನ್ಯವಾಗಿ ಇತರರ ಚಿತ್ರಗಳನ್ನು ಹೊಗಳುವುದು ಕಡಿಮೆ. ಆದರೆ ಕಂಗನಾ ಅವರು ಒಂದು ವಿಶೇಷ ಚಿತ್ರವನ್ನು ನೋಡಿ ಮನಸಾರೆ ಮೆಚ್ಚಿಕೊಂಡಿದ್ದಾರೆ. ಈ ಚಿತ್ರದ ಮೇಕಿಂಗ್ ಮತ್ತು ಕಥಾಹಂದರ ಅವರನ್ನು ಅಚ್ಚರಿಗೊಳಿಸಿದೆ. ಆ ಚಿತ್ರದ ಬಗ್ಗೆ ಅವರು ನೀಡಿರುವ ರೇಟಿಂಗ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

Kangana Ranaut fired up after watching Dhurandhar Her bold statement on terrorists goes viral

ಈ ಸಿನಿಮಾವನ್ನು ನೋಡಿದ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತದೆ ಎಂದು ಕಂಗನಾ ಹೇಳಿದ್ದಾರೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಶಿಳ್ಳೆ ಹೊಡೆಯುವಂತಹ ದೃಶ್ಯಗಳು ಈ ಸಿನಿಮಾದಲ್ಲಿವೆ. ಹಾಗಾದರೆ ಕಂಗನಾ ಅಷ್ಟೊಂದು ಭಾವುಕರಾಗಿ ಹೊಗಳಿದ ಆ ಸಿನಿಮಾ ಯಾವುದು? ಅವರು ಪಾಕಿಸ್ತಾನದ ಬಗ್ಗೆ ಹೇಳಿದ್ದೇನು ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಧುರಂಧರ್ ಚಿತ್ರಕ್ಕೆ ಕಂಗನಾ ಫಿದಾ: ನಿರ್ದೇಶಕನಿಗೆ ಜೈ ಎಂದ ನಟಿ...

ಬಾಲಿವುಡ್‌ನಲ್ಲಿ ಸದ್ಯ ಭಾರಿ ಚರ್ಚೆಯಲ್ಲಿರುವ ಸಿನಿಮಾ ಎಂದರೆ ಅದು 'ಧುರಂಧರ್'. ಈ ಚಿತ್ರವು ಭಾರತೀಯ ಸೈನಿಕರ ಶೌರ್ಯ ಮತ್ತು ದೇಶಭಕ್ತಿಯನ್ನು ಸಾರುವ ಕಥೆಯನ್ನು ಹೊಂದಿದೆ. ಈ ಸಿನಿಮಾವನ್ನು ವೀಕ್ಷಿಸಿದ ಕಂಗನಾ ರಾಣಾವತ್ ಅವರು ಚಿತ್ರತಂಡದ ಕೆಲಸಕ್ಕೆ ಶಹಬ್ಬಾಷ್ ಎಂದಿದ್ದಾರೆ. ಕಂಗನಾ ಅವರು ಚಿತ್ರದ ಪ್ರತಿಯೊಂದು ಫ್ರೇಮ್ ಅನ್ನು ಎಂಜಾಯ್ ಮಾಡಿದ್ದಾರೆ.

ಈ ಸಿನಿಮಾದಲ್ಲಿ ತೋರಿಸಲಾದ ಸನ್ನಿವೇಶಗಳು ಅತ್ಯಂತ ನೈಜವಾಗಿವೆ. ಶತ್ರು ರಾಷ್ಟ್ರಕ್ಕೆ ಭಾರತದ ಗೂಢಾಚಾರಿ ಪ್ರವೇಶ ಮಾಡಿ, ಅಲ್ಲಿನವರ ಕುತಂತ್ರಕ್ಕೆ ಹೇಗೆ ಕಡಿವಾಣ ಹಾಕುತ್ತಾನೆ ಎಂಬುದು ಇಲ್ಲಿನ ಪ್ರಮುಖ ಅಂಶ. ಸಿನಿಮಾ ನೋಡಿ ಹೊರಬಂದ ಕಂಗನಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘವಾದ ಪೋಸ್ಟ್ ಹಾಕುವ ಮೂಲಕ ಚಿತ್ರವನ್ನು ಹಾಡಿ ಹೊಗಳಿದ್ದಾರೆ.

'ಪಾಕಿಸ್ತಾನಿ ಭಯೋತ್ಪಾದಕರಿಗೆ ಸರಿಯಾದ ಚಿಕಿತ್ಸೆ'...

ನಾನು ಧುರಂಧರ್ ನೋಡಿದೆ. ಅದ್ಭುತ ಅನುಭವ ಎಂದು ಹೇಳಿರುವ ಕಂಗನಾ ಈ ಮೇರು ಕೃತಿಯಿಂದ ಸಂಪೂರ್ಣವಾಗಿ ನಾನು ಪ್ರೇರಿತಳಾದೆ ಎಂದು ಹೇಳಿದ್ದಾರೆ. ನಿರ್ದೇಶಕರ ಆಶಯಕ್ಕೆ ಅಪಾರ ಮೆಚ್ಚುಗೆ ಇದೆ ಎಂದು ಹೇಳೀರುವ ಕಂಗನಾ ಆದಿತ್ಯ ಧರ್ ಜೀ, ಗಡಿಯಲ್ಲಿ ನಮ್ಮ ರಕ್ಷಣಾ ಪಡೆಗಳು, ಸರ್ಕಾರದಲ್ಲಿ ನಮ್ಮ ಮೋದಿ ಜೀ ಮತ್ತು ಬಾಲಿವುಡ್ ಸಿನಿಮಾದಲ್ಲಿ ನೀವು, ಹೀಗೆ ಪಾಕಿಸ್ತಾನಿ ಭಯೋತ್ಪಾದಕರ ಹುಟ್ಟಡಗಿಸುತ್ತೀರಿ ಎಂದು ಹೇಳಿದ್ದಾರೆ. ಸಿಕ್ಕಾ ಪಟ್ಟೆ ಮಜಾ ಬಂತು, ಶಿಳ್ಳೆ ಚಪ್ಪಾಳೆ ಹೊಡೆದು ಸಂಭ್ರಮಿಸಿದೆ, ಎಲ್ಲರ ಕೆಲಸ ಅದ್ಭುತವಾಗಿದೆ, ಆದರೆ ಈ ಗೆಲುವಿನ ರೂವಾರಿ ನಿರ್ದೇಶಕ ಆದಿತ್ಯ ಧರ್ ಅವರೇ ಯಾಮಿ ಗೌತಮ್‌ಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

Kangana Ranaut fired up after watching Dhurandhar Her bold statement on terrorists goes viral

ಕಂಗನಾ ಅವರ ಈ ಪೋಸ್ಟ್‌ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ದೇಶದ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎನ್ನುವ ಕಂಗನಾ ಅವರ ನಿಲುವು ಈ ಪೋಸ್ಟ್ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯನ್ನು ಚಿತ್ರದಲ್ಲಿ ತೋರಿಸಿರುವ ರೀತಿ ಅವರಿಗೆ ತುಂಬಾ ಇಷ್ಟವಾಗಿದೆ.

ಸಿನಿ ರಸಿಕರ ಮನಗೆದ್ದ ಆಕ್ಷನ್ ದೃಶ್ಯಗಳು...

'ಧುರಂಧರ್' ಸಿನಿಮಾದಲ್ಲಿ ಆಕ್ಷನ್ ಸೀನ್‌ಗಳು ಹೈಲೈಟ್ ಆಗಿವೆ. ತಾಂತ್ರಿಕವಾಗಿ ಸಿನಿಮಾ ತುಂಬಾ ಶ್ರೀಮಂತವಾಗಿದೆ. ಕಂಗನಾ ಅವರು ಚಿತ್ರದ ನಿರ್ದೇಶಕರು ಮತ್ತು ನಟರ ಶ್ರಮವನ್ನು ಮೆಚ್ಚಿದ್ದಾರೆ. ಇಂತಹ ಸಿನಿಮಾಗಳು ದೇಶದ ಯುವಜನತೆಗೆ ಪ್ರೇರಣೆ ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

More from Filmibeat

Read more about: kangana ranaut pakistan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X