For Quick Alerts
  ALLOW NOTIFICATIONS  
  For Daily Alerts

  ತಲೈವಿ ಬಗ್ಗೆ ಮಾತನಾಡದ ಬಾಲಿವುಡ್: ಅಸಮಾಧಾನಗೊಂಡ ಕಂಗನಾ

  |

  ಕಂಗನಾ ರಣಾವತ್ ಬಾಲಿವುಡ್ ಇಂಡಸ್ಟ್ರಿಯ ರೆಬೆಲ್ ಹೀರೋಯಿನ್. ಬಿಟೌನ್ ಪ್ರಭಾವಿಗಳ ವಿರುದ್ಧ ನೆಪೋಟಿಸಂ, ಮೀಟೂ ಹಾಗೂ ಇನ್ನಿತರ ಆರೋಪಗಳು ಬಂದ ಸಂದರ್ಭದಲ್ಲಿ ಕಂಗನಾ ಸಹ ಅವರ ವಿರುದ್ಧ ಧ್ವನಿಗೂಡಿಸಿದ್ದರು. ಪದೇ ಪದೇ ಬಾಲಿವುಡ್ ಪ್ರಭಾವಿ ನಟ ಹಾಗೂ ನಿರ್ಮಾಪಕರನ್ನು ದೂಷಿಸುತ್ತಿರುವ ಕಂಗನಾ ಸಾಲು ಸಾಲು ಹಿಟ್ ಚಿತ್ರಗಳನ್ನು ಮಾಡಿ ಎಲ್ಲರ ಕಣ್ಣು ಕುಕ್ಕುತ್ತಿದ್ದಾರೆ.

  ಈ ನಡುವೆ ಕಂಗನಾ ರಣಾವತ್ ಎಂತಹ ಅದ್ಭುತ ಸಿನಿಮಾ ಅಥವಾ ಪಾತ್ರ ಮಾಡಿದರೂ ಆಕೆಯ ಪ್ರಯತ್ನ ಅಥವಾ ಪರ್ಫಾಮೆನ್ಸ್ ಬಗ್ಗೆ ಶ್ಲಾಘಿಸುವ ಮಂದಿ ಬಾಲಿವುಡ್‌ನಲ್ಲಿ ಕಾಣ್ತಿಲ್ಲ.

  'ತಲೈವಿ' ಯಶಸ್ಸಿನ ಬೆನ್ನಲ್ಲೆ ಭರ್ಜರಿ ಸುದ್ದಿ ನೀಡಿದ ನಿರ್ಮಾಪಕ'ತಲೈವಿ' ಯಶಸ್ಸಿನ ಬೆನ್ನಲ್ಲೆ ಭರ್ಜರಿ ಸುದ್ದಿ ನೀಡಿದ ನಿರ್ಮಾಪಕ

  ಸೆಪ್ಟೆಂಬರ್ ಆರಂಭದಲ್ಲಿ ಕಂಗನಾ ರಣಾವತ್ ನಟನೆಯ ತಲೈವಿ ಸಿನಿಮಾ ತೆರೆಗೆ ಬಂತು. ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ ಸಿನಿಮಾ ರಿಲೀಸ್ ಆಗಿದೆ. ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ವಿಮರ್ಶಾತ್ಮಕವಾಗಿ ಚಿತ್ರ ಮೆಚ್ಚುಗೆ ಗಳಿಸಿದೆ. ಜಯಲಲಿತಾ ಅವರ ಪಾತ್ರದಲ್ಲಿ ಕಂಗನಾ ಬಹಳ ಚೆನ್ನಾಗಿ ನಟಿಸಿದ್ದಾರೆ ಎಂದು ಮೆಚ್ಚುಗೆಯೂ ಬಂದಿತ್ತು. ಆದರೆ ಬಾಲಿವುಡ್‌ ಯಾವ ಸ್ಟಾರ್ ನಟ-ನಟಿ, ನಿರ್ದೇಶಕ-ನಿರ್ಮಾಪಕನೂ ಸಹ ತಲೈವಿ ಬಗ್ಗೆ ಒಂದೊಳ್ಳೆ ಮಾತು ಹೇಳಿಲ್ಲ. ಇದು ಸಹಜವಾಗಿ ಕಂಗನಾಗೆ ಬೇಸರ ಉಂಟು ಮಾಡಿದೆ. ಮುಂದೆ ಓದಿ...

  ವಜ್ರದಂತ ತಲೈವಿ ಮಾಡಿದ್ದಕ್ಕೆ ಧನ್ಯವಾದ

  ವಜ್ರದಂತ ತಲೈವಿ ಮಾಡಿದ್ದಕ್ಕೆ ಧನ್ಯವಾದ

  ತಲೈವಿ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ಹಾಗೂ ಜಯಲಲಿತಾ ಪಾತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಕುರಿತು ಕಂಗನಾ ರಣಾವತ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು, ''ಭಾವೋದ್ರಿಕ್ತವಾಗಿ ಮತ್ತು ಬಹಳ ಅಪರೂಪ ಎನ್ನುವಂತೆ ಪ್ರೀತಿ ಗಳಿಸಿದ ಚಿತ್ರ ತಲೈವಿ. ಜನರು ಪುರುಚ್ಚಿ ತಲೈವಿ ಜೆ. ಜಯಲಲಿತಾ ಅವರ ಕಥೆಯನ್ನು ತಿಳಿದುಕೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ. ನನ್ನ ವೃತ್ತಿ ಜೀವನದಲ್ಲಿ ಈ ಚಿತ್ರವನ್ನು ಹೊಳೆಯುವ ವಜ್ರವಾಗಿಸಿದ್ದಕ್ಕೆ ಹಾಗೂ ಈ ಸಿನಿಮಾ ಮಾಡಿದ್ದಕ್ಕಾಗಿ ನನ್ನ ತಂಡಕ್ಕೆ ದೊಡ್ಡ ಧನ್ಯವಾದಗಳು'' ಎಂದು ಕಂಗನಾ ಹರ್ಷಗೊಂಡಿದ್ದಾರೆ.

  ಕೊನೆಗೆ ಕಲೆ ಗೆಲ್ಲಲ್ಲಿದೆ

  ಕೊನೆಗೆ ಕಲೆ ಗೆಲ್ಲಲ್ಲಿದೆ

  ತಲೈವಿ ಸಿನಿಮಾದ ಬಗ್ಗೆ ಬಾಲಿವುಡ್‌ನಲ್ಲಿ ಒಂದೇ ಒಂದು ಮೆಚ್ಚುಗೆ ಮಾತು ಕೇಳಿಲ್ಲ. ಒಳ್ಳೆಯ ಸಿನಿಮಾ ಬಂದಾಗಲೂ ಯಾರೊಬ್ಬರು ಈ ಚಿತ್ರದ ಕುರಿತು ಮಾತನಾಡಿಲ್ಲ ಎಂದು ಕಂಗನಾ ರಣಾವತ್ ಅಸಮಾಧಾನ ವ್ಯಕ್ತಪಡಿಸಿದರು. 'ಬಾಲಿವುಡ್ ಮಾಫಿಯಾ, ರಾಜಕೀಯ ಪಿತೂರಿಗಳು, ಸೈದ್ಧಾಂತಿಕ ಭಿನ್ನತೆಗಳ ನಡುವೆ ನಿಜವಾದ ಕಲೆಯನ್ನು ಪ್ರಶಂಸಿಸದೆ ಇರುವುದು ಕೆಟ್ಟ ಮನಸ್ಥಿತಿ ಪ್ರದರ್ಶಿಸುತ್ತದೆ. ಅಂತಿಮವಾಗಿ ಕಲೆ ಗೆಲ್ಲಲಿದೆ. ತಲೈವಿ ಎಲ್ಲರ ಹೃದಯ ಗೆದ್ದಿದೆ' ಎಂದು ಟೀಕಿಸಿದ್ದಾರೆ.

  ಐಎಎಫ್ ಸಮವಸ್ತ್ರದಲ್ಲಿ ಕಾಣಿಸಿಕೊಂಡ ನಟಿ ಕಂಗನಾ ರಣಾವತ್ಐಎಎಫ್ ಸಮವಸ್ತ್ರದಲ್ಲಿ ಕಾಣಿಸಿಕೊಂಡ ನಟಿ ಕಂಗನಾ ರಣಾವತ್

  ಎಲ್ ವಿಜಯ್ ನಿರ್ದೇಶಿಸಿದ್ದ ತಲೈವಿ

  ಎಲ್ ವಿಜಯ್ ನಿರ್ದೇಶಿಸಿದ್ದ ತಲೈವಿ

  ಎ ಎಲ್ ವಿಜಯ್ ನಿರ್ದೇಶಿಸಿರುವ 'ತಲೈವಿ' ಚಿತ್ರವನ್ನು ವಿಷ್ಣುವರ್ಧನ್ ಇಂದೂರಿ ಮತ್ತು ಶೈಲೇಶ್ ಆರ್ ಸಿಂಗ್ ಜಂಟಿಯಾಗಿದೆ ನಿರ್ಮಿಸಿದ್ದಾರೆ. ಹಿತೇಶ್ ಥಕ್ಕರ್ ಮತ್ತು ತಿರುಮಲ್ ರೆಡ್ಡಿ ಸಹ-ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಸೆಪ್ಟೆಂಬರ್ 10 ರಂದು ಜೀ ಸ್ಟುಡಿಯೋಸ್ ಮೂಲಕ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತಲೈವಿ ಬಿಡುಗಡೆಯಾಗಿದೆ. ಇನ್ನು ಸೆಪ್ಟೆಂಬರ್ 25 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಹಿಂದಿ ವರ್ಷನ್ ಸಿನಿಮಾ ಪ್ರೀಮಿಯರ್ ಕಂಡಿದೆ. ಶೀಘ್ರದಲ್ಲಿ ತೆಲುಗು ಮತ್ತು ತಮಿಳು ವರ್ಷನ್ ಸಹ ಒಟಿಟಿಗೆ ಬರಲಲಿದೆ.

  ಕಂಗನಾ ಮುಂದಿನ ಸಿನಿಮಾ

  ಕಂಗನಾ ಮುಂದಿನ ಸಿನಿಮಾ

  ತಲೈವಿ ಸಿನಿಮಾ ಮುಗಿಸಿದ ಕಂಗನಾ ರಣಾವತ್ ಧಾಕಡ್ ಮತ್ತು ತೇಜಸ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರಂಜನೀಶ್ ಘಾಯ್ ನಿರ್ದೇಶನದಲ್ಲಿ ಧಾಕಡ್ ಸ್ಪೈ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಈ ಚಿತ್ರದಲ್ಲಿ ಏಜೆಂಟ್ ಅಗ್ನಿ ಪಾತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ. ಅರ್ಜುನ್ ರಾಂಪಾಲ್ ಮತ್ತು ದಿವ್ಯಾ ದತ್ ಕೂಡ ಈ ಚಿತ್ರದ ಭಾಗವಾಗಿದ್ದಾರೆ. ಇನ್ನು ತೇಜಸ್ ಸಿನಿಮಾದಲ್ಲಿ ಪೈಲೆಟ್ ಪಾತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ.

  English summary
  Bollywood Actress Kangana Ranaut furious at Bollywood celebs for not praising Thalaivii Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X