For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟಿ ಕಂಗನಾ ರಣಾವತ್ ಗೆ ಅತ್ಯಾಚಾರ ಬೆದರಿಕೆ

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ ಬೆದರಿಕೆ ಹಾಕಿರುವ ಬಗ್ಗೆ ವರೆದಿಯಾಗಿದೆ. ಒಡಿಸ್ಸಾ ಮೂಲದ ವಕೀಲರ ಫೇಸ್ ಬುಕ್ ಖಾತೆಯಿಂದ ಅತ್ಯಾಚಾರ ಬೆದಕರಿಕೆ ಬಂದಿದೆ. ನಟಿ ಕಂಗನಾ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ.

  ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ನೋಪೊಟಿಸಂ, ಬಳಿಕ ಮಹಾರಾಷ್ಟ್ರ ಸರ್ಕಾರ ಮತ್ತು ಮುಂಬೈ ಪೊಲೀಸರ ವಿರುದ್ಧ ತಿರುಗಿಬಿದ್ದದ್ದರು. ನೇರ ನುಡಿಯ ಮೂಲಕ ಸಾಮಾಜಿಕ ಜಾಲತಾಣದಲ್ಲೇ ಅನೇಕರನ್ನು ತರಾಟೆಗೆ ತೆಗೆದುಕೊಳ್ಳುವ ಕಂಗನಾ ವಿರುದ್ಧ ಇತ್ತೀಚಿಗೆ ಕೋಮು ಉದ್ವೇಗವನ್ನು ಪ್ರಚೋದಿಸಿದ್ದಕ್ಕಾಗಿ ಎಫ್ ಐ ಆರ್ ದಾಖಲಾಗಿದೆ. ಕಂಗನಾ ಈ ಬಗ್ಗೆ ಟ್ವೀಟ್ ಮಾಡಿದ್ದರು. ಟ್ವೀಟ್ ಗೆ ಕಾಮೆಂಟ್ಸ್ ನಲ್ಲಿ ಅತ್ಯಾಚಾರ ಬೆದರಿಕೆ ಹಾಕಲಾಗಿದೆ. ಮುಂದೆ ಓದಿ...

  ಕಂಗನಾ ಮನೆಯಲ್ಲಿ ಮದುವೆ ಸಂಭ್ರಮ: ಅಕ್ಕ-ತಂಗಿಯರು ಸಖತ್ ಮಿಂಚಿಂಗ್!ಕಂಗನಾ ಮನೆಯಲ್ಲಿ ಮದುವೆ ಸಂಭ್ರಮ: ಅಕ್ಕ-ತಂಗಿಯರು ಸಖತ್ ಮಿಂಚಿಂಗ್!

  ಕಂಗನಾ ರಣಾವತ್ ಟ್ವೀಟ್

  ಕಂಗನಾ ರಣಾವತ್ ಟ್ವೀಟ್

  ಎಫ್ ಐ ಆರ್ ಬಗ್ಗೆ ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನವರಾತ್ರಿ ಹಬ್ಬ ಆಚರಣೆ ಮಾಡುತ್ತಿರುವ ಕಂಗನಾ ಸಾಂಪ್ರದಾಯಿಕ ಉಡುಪಿನಲ್ಲಿರುವ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿ, 'ಎಲ್ಲರೂ ನವರಾತ್ರಿ ಉಪವಾಸ ಮಾಡುತ್ತಿದ್ದಾರೆ. ನಾನು ಸಹ ಉಪವಾಸ ಮಾಡುತ್ತಿದ್ದೇನೆ. ಸಂಭ್ರಮಮಾಚರಣೆಯಲ್ಲಿದ್ದೆವು, ಅಷ್ಟರಲ್ಲಿ ನನ್ನ ವಿರುದ್ಧ ಮತ್ತೊಂದು ಎಫ್ ಐ ಆರ್ ದಾಖಲಾಗಿದೆ. ನನ್ನನ್ನು ಮಿಸ್ ಮಾಡಿಕೊಳ್ಳಬೇಡಿ, ನಾನು ಶೀಘ್ರದಲ್ಲೇ ಅಲ್ಲಿಗೆ ಬರುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

  ಅತ್ಯಾಚಾರ ಬೆದರಿಕೆ

  ಅತ್ಯಾಚಾರ ಬೆದರಿಕೆ

  ಈ ಟ್ವೀಟ್ ಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಕಾಮಂಟ್ಸ್ ಹರಿದುಬಂದಿದೆ. ಅಭಿಮಾನಿಗಳ ಕಾಮೆಂಟ್ಸ್ ಗಳ ಜೊತೆಗೆ ಒಡಿಸ್ಸಾ ಮೂಲಕ ವಕೀಲ ಮೆಹಂದಿ ರೇಜಾ ಹೆಸರಿನ ಖಾತೆಯಿಂದ ಅತ್ಯಾಚಾರ ಬೆದರಿಕೆ ಬಂದಿದೆ. 'ನಗರದ ಮಧ್ಯದಲ್ಲಿ ನಿಮ್ಮನ್ನು ಅತ್ಯಾಚಾರ ಮಾಡಬೇಕು' ಎಂದು ಕಾಮೆಂಟ್ ಹಾಕಿದ್ದಾನೆ. ಬಳಿಕ ಕಂಗನಾ ಅಭಿಮಾನಿಗಳು ಆತನ ವಿರುದ್ಧ ಮುಗಿಬಿದ್ದಾರೆ.

  ಕಂಗನಾ ರಣೌತ್ ಹಾಗೂ ಸಹೋದರಿ ಮೇಲೆ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶಕಂಗನಾ ರಣೌತ್ ಹಾಗೂ ಸಹೋದರಿ ಮೇಲೆ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ

  ಖಾತೆ ಹ್ಯಾಕ್ ಆಗಿದೆ ಎಂದ ವಕೀಲ

  ಖಾತೆ ಹ್ಯಾಕ್ ಆಗಿದೆ ಎಂದ ವಕೀಲ

  ಈ ಬಗ್ಗೆ ವಕೀಲ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿ, ಫೇಸ್ ಬುಕ್ ಖಾತೆ ಹ್ಯಾಕ್ ಆಗಿರುವುದಾಗಿ ಹೇಳಿದ್ದಾರೆ. 'ಈ ದಿನ ನನ್ನ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಕೆಲವು ಅವಹೇಳನಕಾರಿ ಕಾಮೆಂಟ್ಸ್ ಪೋಸ್ಟ್ ಮಾಡಲಾಗಿದೆ. ಯಾವುದೇ ಮಹಿಳೆಯರು ಅಥವಾ ಯಾವುದೇ ಸಮುದಾಯದ ಬಗ್ಗೆ ಪೋಸ್ಟ್ ಮಾಡಿದ್ರೆ ಅದು ನನ್ನ ಅಭಿಪ್ರಾಯವಲ್ಲ. ನಾನು ತುಂಬಾ ಆಘಾತಕ್ಕೊಳಗಾಗಿದ್ದೇನೆ ಮತ್ತು ಕ್ಷಮೆಯಾಚಿಸುತ್ತೇನೆ. ನನ್ನ ಕ್ಷಮೆಯನ್ನು ಸ್ವೀಕರಿಸಿ ಮತ್ತು ಯಾರ ಭಾವನೆಗಾದರೂ ನೋವುಂಟು ಮಾಡಿದರೆ ಕ್ಷಮಿಸಬೇಕೆಂದು ವಿನಂತಿಸುತ್ತೇನೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

  ಮೈಸೂರಿನಲ್ಲಿ ಬೀಡುಬಿಟ್ಟ ಹರಿಪ್ರಿಯಾ, ನೀನಾಸಂ ಸತೀಶ್ | Filmibeat Kannada
  ಕಾಮೆಂಟ್ ಡಿಲೀಟ್ ಮಾಡಲಾಗಿದೆ

  ಕಾಮೆಂಟ್ ಡಿಲೀಟ್ ಮಾಡಲಾಗಿದೆ

  ಬಳಿಕ ಈ ಕಾಮೆಂಟ್ ಅನ್ನು ಡಿಲೀಟ್ ಮಾಡಲಾಗಿದೆ.ಈ ಬಗ್ಗೆ ಕಂಗನಾ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಕಂಗನಾ ಸದ್ಯ ಮನಾಲಿಯಲ್ಲಿದ್ದಾರೆ. ಸಹೋದರನ ಮದುವೆ ಸಂಭ್ರಮ ಮತ್ತು ನವರಾತ್ರಿ ಹಬ್ಬದ ಖುಷಿಯಲ್ಲಿದ್ದಾರೆ.

  English summary
  Bollywood Actress Kangana Ranaut gets rape threat from Odisha lawyer, he claims account was hacked.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X