'ತಲೈವಿ' ಜಯಲಲಿತಾ ಆಗಲು ಕಂಗನಾ ಮಾಡಿರೋದು ಇದೊಂದೇ ಸಾಧನೆ.!
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ತಮಿಳು ಚಿತ್ರರಂಗದ ಅಂದಕಾಲತ್ತಿಲ್ ಲೇಡಿ ಸೂಪರ್ ಸ್ಟಾರ್ ಜಯಲಲಿತಾ ರವರ ಜೀವನಚರಿತ್ರೆ ಕುರಿತು ಎರಡು ಸಿನಿಮಾಗಳು ರೆಡಿ ಆಗುತ್ತಿದೆ.
ಕಾಲಿವುಡ್ ನಲ್ಲಿ ಜಯಲಲಿತಾ ಪಾತ್ರದಲ್ಲಿ ನಿತ್ಯಾ ಮೆನನ್ ಅಭಿನಯಿಸುತ್ತಿರುವ 'ದಿ ಐರನ್ ಲೇಡಿ' ತಯಾರಾಗುತ್ತಿದ್ದರೆ, ಬಾಲಿವುಡ್ ನಲ್ಲಿ ಜಯಲಲಿತಾ ಆಗಿ ಕಂಗನಾ ಕಾಣಿಸಿಕೊಂಡಿರುವ 'ತಲೈವಿ' ಸಿದ್ಧವಾಗುತ್ತಿದೆ. ಜಯಲಲಿತಾ ಆಗಿ ಕಂಗನಾ ಹೇಗೆ ಕಾಣ್ತಾರೆ ಎಂಬ ಕುತೂಹಲಕ್ಕೆ ಈಗಾಗಲೇ ತೆರೆಬಿದ್ದಿದೆ.
'ತಲೈವಿ' ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಅದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ತಲೈವಿ' ಫಸ್ಟ್ ಲುಕ್ ಟೀಸರ್ ನಲ್ಲಿ ಜಯಲಲಿತಾ ಆಗಿ ಕಂಗನಾ ಕಾಣಿಸಿಕೊಂಡಿರುವ ರೀತಿ ಸಿನಿ ಪ್ರಿಯರಲ್ಲಿ ನಿರಾಸೆ ಮೂಡಿಸಿದೆ. ಜಯಲಲಿತಾ ಪಾತ್ರಕ್ಕೆ ಜೀವ ತುಂಬಲು ಬರೀ ಮೇಕಪ್ ಮೊರೆ ಹೋಗಿರುವ ಕಂಗನಾ ರನ್ನ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
ಹೀಗಿರುವಾಗಲೇ, 'ತಲೈವಿ' ಚಿತ್ರಕ್ಕಾಗಿ ತಮ್ಮ ಪಾತ್ರದ ತಯಾರಿ ಕುರಿತು ನಟಿ ಕಂಗನಾ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಜಯಲಲಿತಾ ಆಗಲು ಕಂಗನಾ ಆರು ಕೆ.ಜಿ ದಪ್ಪ ಆಗಿದ್ದಾರಂತೆ.! ಇದೇ ದೊಡ್ಡ ಸಾಧನೆ ಎಂಬಂತೆ ಕಂಗನಾ ಹೇಳಿಕೊಂಡಿದ್ದಾರೆ.! ಮುಂದೆ ಓದಿರಿ..

ಆರು ಕೆ.ಜಿ ದಪ್ಪ ಆಗಲು ಕಷ್ಟ ಪಟ್ಟ ಕಂಗನಾ.!
''ತೆರೆಮೇಲೆ ಜಯಲಲಿತಾ ರಂತೆ ಕಾಣಲು ನಾನು ತುಂಬಾ ಕಷ್ಟ ಪಟ್ಟಿದ್ದೇನೆ. ಜಯಲಲಿತಾ ರವರ ಲುಕ್ ಗಾಗಿ ಹಗಲಿರುಳು ಶ್ರಮ ಪಟ್ಟಿದ್ದೇನೆ. ಆರು ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದೇನೆ. ಸೊಂಟ ಮತ್ತು ತೊಡೆ ಭಾಗದಲ್ಲಿ ತೂಕ ಹೆಚ್ಚಾಗಬೇಕಿದ್ದರಿಂದ ಹಾರ್ಮೋನ್ ಮಾತ್ರೆಗಳನ್ನು ನುಂಗಿದ್ದೇನೆ. ದಪ್ಪ ಆಗಲು ಹೆಚ್ಚು ಊಟ ತಿನ್ನುತ್ತಿದ್ದೆ'' ಅಂತ ಕಂಗನಾ ಹೇಳಿಕೊಂಡಿದ್ದಾರೆ.

ಮೇಕಪ್ ಮ್ಯಾಜಿಕ್
''ಮೇಕಪ್ ಆರ್ಟಿಸ್ಟ್ ಜೇಸನ್ ಕಾಲಿನ್ಸ್ ಸಹಾಯದಿಂದ ಜಯಲಲಿತಾ ಲುಕ್ ನನಗೆ ಸಿಕ್ಕಿದೆ. ಮೇಕಪ್ ಮೂಲಕ ನನ್ನ ಮುಖ ದಪ್ಪ ಕಾಣಲು ಸಾಧ್ಯವಾಯಿತು. ನನ್ನ ದೇಹದ ಹಲವೆಡೆ ಪ್ಯಾಡ್ ಗಳನ್ನು ಬಳಸಿ ಜಯಲಲಿತಾ ಲುಕ್ ಫೈನಲ್ ಮಾಡಿದ್ದೇವೆ'' ಎಂದಿದ್ದಾರೆ ಕಂಗನಾ.

ಆರು ಕೆ.ಜಿ ದಪ್ಪ ಆಗಿರುವುದು ದೊಡ್ಡ ಸಾಧನೆನಾ.?
ಜಯಲಲಿತಾ ಪಾತ್ರವನ್ನ ಪೋಷಿಸಲು ಆರು ಕೆ.ಜಿ ದಪ್ಪ ಆಗಿರುವುದನ್ನೇ ದೊಡ್ಡ ಸಾಧನೆ ಅಂತ ಕಂಗನಾ ಹೇಳಿಕೊಳ್ಳುತ್ತಿರುವುದನ್ನು ನೋಡಿ ನೆಟ್ಟಿಗರು ಹಲ್ಲು ಬಿಡುತ್ತಿದ್ದಾರೆ. ಜಯಲಲಿತಾ ಆಗಲು ಕೇವಲ ಆರು ಕೆ.ಜಿ ದಪ್ಪ ಆದರೆ ಸಾಕಾ.? ಆರು ಕೆ.ಜಿ ದಪ್ಪ ಆಗೋಕೆ ಹಾರ್ಮೋನ್ ಮಾತ್ರೆಗಳು ಬೇರೆ ಬೇಕಾ.? ಅಂತೆಲ್ಲಾ ನೆಟ್ಟಿಗರು ಕಂಗನಾ ಕಾಲೆಳೆಯುತ್ತಿದ್ದಾರೆ.

ಟ್ರೋಲ್ ಆಗುತ್ತಿರುವ ಕಂಗನಾ
'ತಲೈವಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಕಂಗನಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಕಂಗನಾ ರನ್ನ ಚೋಟಾ ಭೀಮ್ ನ ಚುಟ್ಕಿ ಅಂತೆಲ್ಲಾ ಕರೆದು ನೆಟ್ಟಿಗರು ನಗುತ್ತಿದ್ದಾರೆ. ಕೇವಲ ಮೇಕಪ್ ಮುಖಾಂತರ ಜಯಲಲಿತಾ ರನ್ನ ತೆರೆಮೇಲೆ ತೋರಿಸುವ ಹಾಗಿದ್ದರೆ, ಕಂಗನಾ ಗಿಂತ ಜಯಲಲಿತಾ ಪಾತ್ರಕ್ಕೆ ಕಮಲ್ ಹಾಸನ್ ಬೆಟರ್ ಚಾಯ್ಸ್ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ.


Click it and Unblock the Notifications











