For Quick Alerts
  ALLOW NOTIFICATIONS  
  For Daily Alerts

  ಕಂಗನಾ ಬಗ್ಗೆ 'ಕ್ಯಾರೆ' ಅನ್ನಲ್ಲ ಎಂದ ತಾಪ್ಸಿ ಪನ್ನು

  |

  ನಟಿಯರ ಜಗಳಗಳು ಯಾವುದೇ ಸಿನಿಮಾ ರಂಗಕ್ಕೆ ಹೊಸದೇನಲ್ಲ. ಈಗಲೂ ಇದೆ. ಹಿಂದೆಯೂ ಇತ್ತು. ಆದರೆ ಅವೆಲ್ಲ ಬಹಿರಂಗಗೊಳ್ಳುತ್ತಿದ್ದುದು ತುಸು ಕಡಿಮೆ. ಆದರೆ ಈ ಸಾಮಾಜಿಕ ಜಾಲತಾಣ ಕಾಲದಲ್ಲಿ ಯಾವುದೂ ಗುಟ್ಟಲ್ಲ.

  ನಟಿ ಕಂಗನಾ ರನೌತ್ ಹಾಗೂ ತಾಪ್ಸಿ ಪನ್ನು ಇಬ್ಬರೂ ಸಹ ಬಾಲಿವುಡ್‌ನ ಪ್ರತಿಭಾವಂತ ನಟಿಯರು. ಹಲವು ಅತ್ಯುತ್ತಮ ಸಿನಿಮಾಗಳನ್ನು ಸಿನಿಪ್ರೇಕ್ಷಕರಿಗೆ ನೀಡಿದ್ದಾರೆ. ಆದರೆ ಇಬ್ಬರೂ ಈಗ ಹಾವು-ಮುಂಗುಸಿಯಂತಾಗಿದ್ದಾರೆ.

  ಈ ಜಗಳ ಪ್ರಾರಂಭವಾಗಿದ್ದು ನಟಿ ಕಂಗನಾ ಅವರಿಂದಲೇ. ತಾಪ್ಸಿ ಪನ್ನು ಕೇಂದ್ರ ಸರ್ಕಾರದ ಕೆಲವು ನೀತಿಗಳ ವಿರುದ್ಧ ಟ್ವಿಟ್ಟರ್‌ನಲ್ಲಿ ಅಭಿಪ್ರಾಯ ಹಂಚಿಕೊಳ್ಳಲು ಆರಂಭಿಸುತ್ತಿದ್ದಂತೆ, ಬಿಜೆಪಿಯ ಅಖಂಡ ಭಕ್ತೆಯಾದ ಕಂಗನಾ ರನೌತ್ ತಾಪ್ಸಿ ವಿರುದ್ಧ ಮೂದಲಿಕೆ ಶುರು ಮಾಡಿದರು. ಆರಂಭದಲ್ಲಿ ಸುಮ್ಮನಿದ್ದ ತಾಪ್ಸಿ ಆ ನಂತರ ತಾವೂ ಅಖಾಡಕ್ಕೆ ಇಳಿದು ಕಂಗನಾ ವಿರುದ್ಧ ಟ್ವೀಟ್ ಮಾಡಿದರು.

  ಆ ನಂತರ ಇಬ್ಬರ ಟ್ವೀಟ್ ವಾರ್ ತುಸು ಕಡಿಮೆ ಆಗಿತ್ತು. ಇದೀಗ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ತಾಪ್ಸಿ ಪನ್ನುಗೆ ಕಂಗನಾ ಕುರಿತು ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿರುವ ತಾಪ್ಸಿ, ''ಕಂಗನಾ ನನ್ನ ಜೀವನದಲ್ಲಿ ಅಪ್ರಸ್ತುತ. ಸಿನಿಮಾ ರಂಗದಲ್ಲಿ ಆಕೆಯೂ ಒಬ್ಬ ನಟಿ. ವೃತ್ತಿ ವಿಷಯದಲ್ಲಿ ಆಕೆ ನನ್ನ ಸಹೋದ್ಯೋಗಿ. ಆದರೆ ನನ್ನ ವೈಯಕ್ತಿಕ ಜೀವನದಲ್ಲಿ ಆಕೆ ಸಂಪೂರ್ಣ ಅಪ್ರಸ್ತುತ. ಈ ಹಿಂದೆಯೂ ಆಕೆ ನನಗೆ ಮುಖ್ಯವಾಗಿರಲಿಲ್ಲ. ಈಗಲೂ ಆಕೆ ನನಗೆ ಮುಖ್ಯವಲ್ಲ'' ಎಂದಿದ್ದಾರೆ ತಾಪ್ಸಿ.

  ''ಪ್ರೀತಿ ಹಾಗೂ ದ್ವೇಷ ಎರಡೂ ಹೃದಯದಿಂದಲೇ ಹುಟ್ಟುತ್ತವೆ. ದ್ವೇಷಿಸಲಿಚ್ಛಿಸುವ ವ್ಯಕ್ತಿಯ ಬಗ್ಗೆ ನೀವು ಚಿಂತೆಯೇ ಮಾಡದೇ ಇರುವುದು ಅತ್ಯಂತ ಸೂಕ್ತ. ಅದು ಆ ವ್ಯಕ್ತಿಗೆ ನೀವು ನೀಡಬಹುದಾದ ಬಹುದೊಡ್ಡ ಶಿಕ್ಷೆ ಮತ್ತು ಅದರಿಂದ ನೀವು ನಿರಾಳತೆಯನ್ನು ಸಹ ಅನುಭವಿಸುತ್ತೀರಿ'' ಎಂದಿದ್ದಾರೆ ತಾಪ್ಸಿ.

  ಅಂತ್ಯವಾಯ್ತು ವೇಲು ರಕ್ಷಿತ್ ಶೆಟ್ಟಿ ಮುನಿಸು | Rakshith Shetty | Lahari Velu | Filmibeat Kannada

  ತಾಪ್ಸಿ ಪನ್ನುರ ಈ ಮಾತುಗಳಿಗೆ ಕಂಗನಾ ಏನು ಪ್ರತಿಕ್ರಿಯೆ ನೀಡುತ್ತಾರೆ ನೋಡಬೇಕಿದೆ. ಏಕೆಂದರೆ ಅವರಂತೂ ಸುಮ್ಮನಿರುವವರಲ್ಲ.

  English summary
  Actress Taapsee Pannu said Kangana Ranaut is too irrelevent to me. She is just an actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X