ಮಂಗಳ ಗ್ರಹದಿಂದ ಬಂದಿದ್ದಾರೆ ಎಂಬಷ್ಟು ವಿಚಿತ್ರ ವ್ಯಕ್ತಿ ರಾಹುಲ್ ಗಾಂಧಿ ; ಕಂಗನಾ ರಣಾವತ್..!
ಇದೇ ವರ್ಷ ತನಗೆ ಪಾಲಿಟಿಕ್ಸ್ ಗೆ ಟಿಕೆಟ್ ಸಿಗುತ್ತೆ ಎಂದು ಕಂಗನಾ ರಣಾವತ್ ಕನಸು ಮನಸಿನಲ್ಲಿ ಅಂದುಕೊಂಡಿದ್ದರಾ ಗೊತ್ತಿಲ್ಲ. ಆದರೆ ತನ್ನೂರು ಹಿಮಾಚಲ ಪ್ರದೇಶದ ಮಂಡಿಯಿಂದ ಕಣಕ್ಕಿಳಿಯಲು ಎಲೆಕ್ಷನ್ ಟಿಕೆಟ್ ಸಿಕ್ಕ ಖುಷಿಯಲ್ಲಿ ಸದ್ಯಕ್ಕಂತೂ ಕಂಗನಾ ತೇಲುತ್ತಿದ್ದಾರೆ. ಬಿ.ಜೆ.ಪಿ ಪಕ್ಷದ ರಾಷ್ಟ್ರೀಯ ವಕ್ತಾರ ಶ್ರೀಯುತ ಡಾ.ಸಂಬಿತ್ ಪಾತ್ರ ಕೂಡ ನಾಚಿಕೊಳ್ಳುವಂತೆ ಒಂದಾದ ಮೇಲೊಂದು ಹೇಳಿಕೆಯನ್ನ ಕೊಡ್ತಿದ್ದಾರೆ.
ಹೌದು, ರಾಜಕೀಯದ ಕೀರ್ತಿಯ ಶಿಖರವನ್ನೇರಲು ಅಣಿಯಾಗಿರುವ ಕಂಗನಾ ರಣಾವತ್ ಮೊನ್ನೆ ಟೈಮ್ಸ್ ನೌ ನಡೆಸಿದ ಸಂವಾದದಲ್ಲಿ ಭಾಗಿಯಾಗಿದ್ದರು. ಹತ್ತು ಹಲವಾರು ವಿಚಾರಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದರು. ಆ ಪೈಕಿ ಕಂಗನಾ ಕೊಟ್ಟ ಕೆಲ ಹೇಳಿಕೆ ವೈರಲ್ ಆಗಿವೆ ಕೂಡ. ಇದೀಗ ಆ ವೈರಲ್ ಅಡ್ಡಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಕಂಗನಾ ರಣಾವತ್ ಮಾತನಾಡಿದ ಮಾತುಗಳು ಕೂಡ ಬಂದು ಸೇರಿಕೊಂಡಿವೆ.

ಟೈಮ್ಸ್ ನೌ ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿರುವ ಕಂಗನಾ, ಮೊದಲಿಂದನೂ ನಾನು ಕಾಂಗ್ರೆಸ್ ವಿರೋಧಿ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಅದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ. ಕಂಗನಾ ಪ್ರಕಾರ ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣ ಇದೆ. ಸರಳವಾಗಿ ಹೇಳಬೇಕು ಅಂದರೆ ಸ್ವಜನಪಕ್ಷಪಾತ.
ಇನ್ನೂ ಎಲ್ಲರಿಗೂ ಗೊತ್ತಿರುವಂತೆ ಸ್ವಜನಪಕ್ಷಪಾತದ ವಿರುದ್ಧ ಸಿಡಿದೆದ್ದ ಬಾಲಿವುಡ್ ನ ಮೊದಲ ನಾಯಕಿ ಕಂಗನಾ ರಣಾವತ್. ಹೀಗಾಗಿಯೇ ಸ್ವಜನಪಕ್ಷಪಾತ, ಗುಂಪುಗಾರಿಕೆ, ವಂಶಾಡಳಿತ ರಾಜಕೀಯದ ಪಕ್ಷವನ್ನು ನಾನು ಧಿಕ್ಕರಿಸುತ್ತೇನೆ ಎಂದಿರುವ ಕಂಗನಾ,ನೆಪೋಟಿಸಂ ಕಾರಣದಿಂದಲೇ ನಾನು ಬಾಲಿವುಡ್ ನಲ್ಲಿ ಟಾರ್ಗೆಟ್ ಆಗಿದ್ದೆ, ಅದನ್ನು ನಾನು ನೇರವಾಗಿಯೇ ವಿರೋಧಿಸಿದೆ ಎಂದಿದ್ದಾರೆ. ರಾಜಕೀಯದಲ್ಲಿಯೂ ಸ್ವಜನಪಕ್ಷಪಾತವನ್ನ ನಾನು ವಿರೋಧಿಸುತ್ತೇನೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.

ಇನ್ನೂ ಕಾಂಗ್ರೆಸ್ ಪಕ್ಷದ ವಿರುದ್ದ ಕಂಗನಾ ಗುಡುಗುತ್ತಿದ್ದ ಸಮಯದಲ್ಲಿಯೇ, ಕಂಗನಾ ರಣಾವತ್ ಅವರಿಗೆ ಸೋನಿಯಾ ಗಾಂಧಿ ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಬಗ್ಗೆ ಒಂದೇ ಪದದಲ್ಲಿ ವಿವರಣೆ ನೀಡಬೇಕೆಂಬ ಮನವಿಯನ್ನೂ ಇದೇ ಸಮಯದಲ್ಲಿ ಮಾಡಲಾಗಿದೆ. ಈ ಮನವಿಯನ್ನ ಪುರಸ್ಕರಿಸಿ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿರುವ ಕಂಗನಾ, ಸ್ವಜನಪಕ್ಷಪಾತಕ್ಕೆ ಇಬ್ಬರು ಜ್ವಲಂತ ಉದಾಹರಣೆ ಅಂದಿದ್ದಾರೆ. ರಾಹುಲ್ ಗಾಂಧಿ ಮಂಗಳ ಗ್ರಹದಿಂದ ಬಂದಿದ್ದಾರೆ ಎಂಬಷ್ಟು ವಿಚಿತ್ರವಾಗಿದ್ದಾರೆ ಎಂದು ಮಾತಿನ ಬಾಣವನ್ನೂ ಬಿಟ್ಟಿದ್ದಾರೆ.ನೆಪೋಟಿಸಂ ಮಕ್ಕಳು ಎಂದು ಟೀಕಿಸಿದ್ದಾರೆ
ಕಂಗನಾ ರಣಾವತ್ ಬಿಟ್ಟಿರುವ ಈ ಬಾಣ ಯಾರಿಗೆ ನಾಟುತ್ತೆ ಅನ್ನುವುದಕ್ಕೆ ಉತ್ತರ ಸದ್ಯದಲ್ಲಿಯೇ ಗೊತ್ತಾಗಲಿದೆಯಾದರೂ, ಕಂಗನಾ ಅವರ ಈ ಮಾತು ರಾಜಕೀಯ ವಲಯದಲ್ಲಿ ಸಿಕ್ಕಾಪಟ್ಟೆ ಚರ್ಚೆಯನ್ನಂತೂ ಹುಟ್ಟು ಹಾಕಿದೆ. ಕೆಲವರು ಕಂಗನಾ ಪರ ವಾದ ಮಾಡಿದರೆ, ಇನ್ನೂ ಕೆಲವರು ಕಾಂಗ್ರೆಸ್ ಪಕ್ಷದ ಪರ ಪ್ರತಿವಾದವನ್ನ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಕಂಗನಾ ರಣಾವತ್ ಅವರ ಪೊಲಿಟಿಕಲ್ ಜ್ಞಾನದ ಪರೀಕ್ಷೆಯನ್ನೂ ಕೂಡ ಅನೇಕರು ತೆಗೆದುಕೊಳ್ಳುತ್ತಿದ್ದಾರೆ

ಇನ್ನೂ ಇದೇ ಸಮಯದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಗ್ಗೆಯೂ ಮಾತನಾಡಿರುವ ಕಂಗನಾ, ಭ್ರಷ್ಟಾಚಾರದ ವಿರುದ್ಧ ಭಾರತ ಹೋರಾಡುತ್ತಿದೆ. ಆದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಸ್ತುತ ಭ್ರಷ್ಟಾಚಾರದ ಆರೋಪದಲ್ಲಿ ಜೈಲಿನಲ್ಲಿರುವುದು ವಿಪರ್ಯಾಸ ಅಂದಿದ್ದಾರೆ.
ಒಟ್ನಲ್ಲಿ ಸದ್ಯಕ್ಕೆ ಕಂಗನಾ ರಣಾವತ್ ಹೈಪರ್ ಆಕ್ಟಿವ್ ಆಗಿದ್ದಾರೆ. ತಮ್ಮ ನಿರ್ದೇಶನದ ಎಮರ್ಜೆನ್ಸಿ ಚಿತ್ರದ ಕೆಲಸ ಕಾರ್ಯಗಳನ್ನೆಲ್ಲ ಬದಿಗಿಟ್ಟು ಕಂಗನಾ ಸದ್ಯಕ್ಕೆ ಕಂಗನಾ ರಾಜಕೀಯದಲ್ಲಿಯೇ ಫುಲ್ ಇನ್ವಾಲ್ ಆಗಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷವನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಕಂಗನಾ ಮಾತನಾಡಿರುವ ಈ ಮಾತುಗಳಿಗೆ ರಾಹುಲ್ ಗಾಂಧಿ ಉತ್ತರ ಕೊಡ್ತಾರಾ ಅನ್ನುವುದನ್ನ ಈಗ ಕಾದು ನೋಡಬೇಕಿದೆ


Click it and Unblock the Notifications











