For Quick Alerts
  ALLOW NOTIFICATIONS  
  For Daily Alerts

  ಭಾರವಾದ ಹೃದಯದಿಂದ ಮುಂಬೈ ತೊರೆಯುತ್ತಿದ್ದೇನೆ: ಕಂಗನಾ ರಣಾವತ್

  |

  ನಟಿ ಕಂಗನಾ ರಣಾವತ್ ಮುಂಬೈ ನಿಂದ ಹಿಮಾಚಲ ಪ್ರದೇಶಕ್ಕೆ ವಾಪಸ್ ಆಗಿದ್ದಾರೆ. ವಿವಾದಗಳ ನಡುವೆಯೂ ಸೆಪ್ಟಂಬರ್ 9ರಂದು ಮುಂಬೈಗೆ ಬಂದಿದ್ದ ಕಂಗನಾ ಇಂದು (ಸೆಪ್ಟಂಬರ್ 14) ಬೆಳಗ್ಗೆ ಹುಟ್ಟೂರಿಗೆ ವಾಪಸ್ ಆಗಿದ್ದಾರೆ.

  ಶಿವಸೇನೆ ವಿರುದ್ಧ ಮಾತಿನ ಸಮರ ಸಾರಿದ್ದ ಕಂಗನಾ ಭಾರಿ ಭದ್ರತೆಯೊಂದಿಗೆ ಮುಂಬೈಗೆ ಆಗಮಿಸಿದ್ದರು. ಮುಂಬೈ ನಗರವನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಶಿವಸೇನೆ ಕೆಂಗಣ್ಣಿಗೆ ಗುರಿಯಾಗಿದ್ದರು. ಬೆದರಿಕೆ ಕೆರೆಗಳು ಬರುತ್ತಿವೆ ಎಂದು ಹೇಳಿದ್ದ ಕಂಗನಾಗೆ ಕೇಂದ್ರ ಸರ್ಕಾರ ವೈ ಪ್ಲಸ್ ಭದ್ರತೆ ನೀಡಿತ್ತು. ವೈ ಪ್ಲಸ್ ಭದ್ರತೆಯೊಂದಿಗೆ ನಟಿ ಕಂಗನಾ ಮುಂಬೈಗೆ ಆಗಮಿಸಿದ್ದರು. ಕಂಗನಾಗೆ ಸಹೋದರಿ ರಂಗೋಲಿ ಸಾಥ್ ನೀಡಿದ್ದರು. ಮುಂದೆ ಓದಿ..

  ರಾಜ್ಯಪಾಲರು ನನ್ನನ್ನು ಮಗಳಂತೆ ಕಂಡರು: ನಟಿ ಕಂಗನಾ ರಣಾವತ್ರಾಜ್ಯಪಾಲರು ನನ್ನನ್ನು ಮಗಳಂತೆ ಕಂಡರು: ನಟಿ ಕಂಗನಾ ರಣಾವತ್

  ಮುಂಬೈ ತೊರೆದು ಕಂಗನಾ ಹೇಳಿದ್ದೇನು?

  ಮುಂಬೈ ತೊರೆದು ಕಂಗನಾ ಹೇಳಿದ್ದೇನು?

  ಮುಂಬೈ ತೊರೆಯುವ ಮೊದಲು ಕಂಗನಾ, 'ಭಾರವಾದ ಹೃದಯದಿಂದ ಮುಂಬೈ ತೊರೆಯುತ್ತಿದ್ದೀನಿ. ನಾನು ಮುಂಬೈಯಲ್ಲಿ ಇದ್ದಷ್ಟು ದಿನ ಭಯಬೀತರಾಗಿದ್ದೆ, ನನ್ನ ಮನೆಯನ್ನು ಒಡೆದು ಹಾಕಿರುವುದು, ನಿರಂತರ ದಾಳಿ, ನಿಂದನೆಗಳು, ನನ್ನ ಸುತ್ತಲು ಸಶಸ್ತ್ರ ಭದ್ರತೆ, ನಾನು ಪಾಕ್ ಆಕ್ರಮಿತ ಕಾಶ್ಮೀರ ಅಂತ ಹೇಳಿದ್ದು ಸರಿಯಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.

  ನನ್ನನ್ನು ದುರ್ಬಲಳು ಎಂದು ಪರಿಗಣಿಸಿ ತಪ್ಪು ಮಾಡಿದ್ದೀರಿ

  ನನ್ನನ್ನು ದುರ್ಬಲಳು ಎಂದು ಪರಿಗಣಿಸಿ ತಪ್ಪು ಮಾಡಿದ್ದೀರಿ

  "ಯಾವಾಗ ರಕ್ಷಕರೆ ವಿಧ್ವಂಸಕರಾದಾಗ, ಪ್ರಜಾಪ್ರಭುತ್ವವನ್ನು ನೋವಿಸುತ್ತಾರೆ. ನನ್ನನ್ನು ದುರ್ಬಲಳು ಎಂದು ಪರಿಗಣಿಸಿ ತುಂಬಾ ದೊಡ್ಡ ತಪ್ಪು ಮಾಡಿದ್ದೀರಾ. ನನ್ನನ್ನು ಹೆದರಿಸುವ ಪ್ರಯತ್ನ, ಕೀಳಾಗಿ ಕಾಣುವ ಮೂಲಕ ನಿಮ್ಮ ನಿಜವಾದ ಬಣ್ಣ ಬಯಲಾಗುತ್ತಿದೆ" ಎಂದು ಹೇಳಿದ್ದಾರೆ.

  ಮುಂಬೈ 'ಪಿಒಕೆ' ಎಂದು ಕಂಗನಾ ಹೇಳಿದರೂ ಬಾಲಿವುಡ್ ಯಾಕೆ ಮೌನ ವಹಿಸಿದೆ?: ಸಂಜಯ್ ರಾವತ್ಮುಂಬೈ 'ಪಿಒಕೆ' ಎಂದು ಕಂಗನಾ ಹೇಳಿದರೂ ಬಾಲಿವುಡ್ ಯಾಕೆ ಮೌನ ವಹಿಸಿದೆ?: ಸಂಜಯ್ ರಾವತ್

  ರಾಜ್ಯಪಾಲರನ್ನು ಭೇಟಿಯಾದ ಕಂಗನಾ

  ರಾಜ್ಯಪಾಲರನ್ನು ಭೇಟಿಯಾದ ಕಂಗನಾ

  5 ದಿನಗಳು ಮುಂಬೈನಲ್ಲಿದ್ದ ಕಂಗನಾ ನಿನ್ನೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಶಿವಸೇನೆಯಿಂದ ಎದುರಿಸಿದ ಸಮಸ್ಯೆಗಳು ಮತ್ತು ಬಂಗಲೆ ಒಡೆದು ಹಾಕಿದ ಬಗ್ಗೆ ರಾಜ್ಯಪಾಲರ ಜೊತೆ ಮಾತನಾಡಿದ್ದಾರೆ. ರಾಜ್ಯಪಾಲರನ್ನು ಭೇಟಿಯಾದ ಬಳಿಕ ಕಂಗನಾ ನ್ಯಾಯ ದೊರಕುವ ಭರವಸೆ ಇದೆ ಎಂದಿದ್ದಾರೆ. ಅನ್ಯಾಯದ ಬಗ್ಗೆ ವಿವರಿಸಿದ್ದೇನೆ, ರಾಜ್ಯಪಾಲರು ಮಗಳಂತೆ ಕಂಡರು ಎಂದಿದ್ದಾರೆ.

  ಪತ್ನಿ Revathi ಕಾಲೆಳೆದ Nikhil Kumaraswamy | Oneindia Kannada
  ಒಡೆದ ಕಚೇರಿಯಲ್ಲಿಯೇ ಕೆಲಸ ಮಾಡುತ್ತೇನೆ, ಕಂಗನಾ ಸವಾಲ್

  ಒಡೆದ ಕಚೇರಿಯಲ್ಲಿಯೇ ಕೆಲಸ ಮಾಡುತ್ತೇನೆ, ಕಂಗನಾ ಸವಾಲ್

  ಶಿವಸೇನೆ ಜೊತೆಗಿನ ಮಾತಿನ ಚಕಮಕಿಯ ನಡುವೆ ಕಂಗನಾ ಬಂಗಲೆಯನ್ನು ಮುಂಬೈ ಮಹಾನಗರ ಪಾಲಿಕೆ ಒಡೆದು ಹಾಕಿದೆ. ಇದು ರಾಜಕೀಯ ಪ್ರೇರಿತ ಎಂದು ಆರೋಪಿಸಿರುವ ಕಂಗನಾ, ಸಿಎಂ ಉದ್ಧವ್ ಠಾಕ್ರೆಯನ್ನು ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಒಡೆದ ಕಚೇರಿಯಲ್ಲಿಯೇ ಕೆಲಸ ಮುಂದುವರೆಸುವುದಾಗಿ ಕಂಗನಾ ಸವಾಲ್ ಎಸೆದಿದ್ದಾರೆ.

  English summary
  Kangana Ranaut leaving Mumbai with a heavy-heart. She calls her PoK analogy bang on.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X