twitter
    For Quick Alerts
    ALLOW NOTIFICATIONS  
    For Daily Alerts

    ಚುನಾವಣೆ ಹೇಳಿಕೆ: ಸುಳ್ಳು ಹೇಳಿ ಸಿಕ್ಕಿ ಬಿದ್ದ ಕಂಗನಾ!

    |

    ನಟಿ ಕಂಗನಾ ರಣೌತ್ ಪ್ರತಿದಿನ ಒಂದೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಬಹುಪಾಲು ಹೇಳಿಕೆಗಳಲ್ಲಿ ಅವರು ನಿರಪರಾಧಿ, ಅಮಾಯಕಿ, ಸಂತ್ರಸ್ತೆ ಆಗಿರುತ್ತಾರೆ.

    ತಮಗೆ ಬಲವಂತದಿಂದ ಡ್ರಗ್ಸ್ ನೀಡಲಾಗಿತ್ತು ಎಂದು ಇತ್ತೀಚೆಗೆ ಕಂಗನಾ ಹೇಳಿದ್ದರು. ಆದರೆ ಕೆಲ ವರ್ಷದ ಹಳೆಯ ವಿಡಿಯೋದಲ್ಲಿ ಕಂಗನಾ ಪ್ರಿಯಕರ ಅಧ್ಯಯನ್ ಹೇಳಿದ್ದ ಪ್ರಕಾರ, ಕಂಗನಾ ಳೆ ಅವರಿಗೆ ಡ್ರಗ್ಸ್ ತೆಗೆದುಕೊಳ್ಳುವಂತೆ ಬಲವಂತ ಮಾಡಿದ್ದರಂತೆ.

    ಹೀಗೆ ಹಲವು ಬಾರಿ ಕಂಗನಾ ನೀಡಿದ್ದ ಹೇಳಿಕೆಗಳು ಅವರಿಗೇ ಉಲ್ಟಾ ಹೊಡೆಯುತ್ತಿವೆ. ಹೀಗೆಯೇ ಮಹಾರಾಷ್ಟ್ರ ಚುನಾವಣೆ ಕುರಿತಾಗಿ ಕಂಗನಾ ನೀಡಿದ ಹೇಳಿಕೆ ಅವರಿಗೇ ಉಲ್ಟಾ ಹೊಡೆದಿದೆ. ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾರೆ ಕಂಗನಾ.

    ಶಿವಸೇನಾ ಪಕ್ಷದ ವಿರುದ್ಧ ವಾಗ್ದಾಳಿ

    ಶಿವಸೇನಾ ಪಕ್ಷದ ವಿರುದ್ಧ ವಾಗ್ದಾಳಿ

    ಇತ್ತೀಚೆಗೆ ಟಿವಿ ಚರ್ಚೆಯೊಂದರಲ್ಲಿ ಪಾಲ್ಗೊಂಡಿದ್ದ ನಟಿ ಕಂಗನಾ ರಣೌತ್, ಮಹಾರಾಷ್ಟ್ರ ಸರ್ಕಾರ, ಶಿವಸೇನಾ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಟ್ವಿಟ್ಟರ್‌ನಲ್ಲಿಯೂ ಅವರು ಮಹಾರಾಷ್ಟ್ರ ಸಿಎಂ ಅನ್ನು ಬಾಬರ್ ಎಂದು ಕರೆದಿದ್ದರು.

    'ಬಲವಂತವಾಗಿ ಶಿವಸೇನಾಗೆ ಮತಚಲಾಯಿಸುವಂತೆ ಮಾಡಿದರು'

    'ಬಲವಂತವಾಗಿ ಶಿವಸೇನಾಗೆ ಮತಚಲಾಯಿಸುವಂತೆ ಮಾಡಿದರು'

    ಟಿವಿ ಚರ್ಚೆಯಲ್ಲಿ ಮಾತನಾಡುತ್ತಾ, ಕಳೆದ ಚುನಾವಣೆಯಲ್ಲಿ ನನ್ನಿಂದ ಬಲವಂತವಾಗಿ ಶಿವಸೇನಾ ಗೆ ಮತ ಚಲಾಯಿಸುವಂತೆ ಮಾಡಲಾಯಿತು ಎಂದರು. ನಾನು ಬಿಜೆಪಿಗೆ ಮತ ಚಲಾಯಿಸಲು ಹೋಗಿದ್ದೆ, ಬಾಲೆಟ್‌ನಲ್ಲಿ ಬಿಜೆಪಿ ಪಕ್ಷದ ಗುರುತು ಇರಲಿಲ್ಲ ಅಷ್ಟರಲ್ಲಿ ಅಲ್ಲಿದ್ದವರು, ಶಿವಸೇನಾ ಗೆ ಮತ ಚಲಾಯಿಸಿ, ಇಬ್ಬರೂ ಮೈತ್ರಿ ಮಾಡಿಕೊಂಡಿದ್ದಾರೆ ಎಂದರು. ಹಾಗಾಗಿ ನಾನು ಶೀವಸೇನಾ ಗೆ ಮತ ಚಲಾಯಿಸಿದೆ ಎಂದಿದ್ದರು.

    'ಊರ್ಮಿಳಾ ನೀಲಿ ಚಿತ್ರಗಳ ನಟಿ' ಎಂದು ತರಾಟೆಗೆ ತೆಗೆದುಕೊಂಡ ಕಂಗನಾ ರಣಾವತ್'ಊರ್ಮಿಳಾ ನೀಲಿ ಚಿತ್ರಗಳ ನಟಿ' ಎಂದು ತರಾಟೆಗೆ ತೆಗೆದುಕೊಂಡ ಕಂಗನಾ ರಣಾವತ್

    ಕಂಗನಾ ಮತಚಲಾಯಿಸಿದ ಕ್ಷೇತ್ರದಲ್ಲಿ ಶೀವಸೇನಾ ಸ್ಪರ್ಧಿಸಿರಲಿಲ್ಲ!

    ಕಂಗನಾ ಮತಚಲಾಯಿಸಿದ ಕ್ಷೇತ್ರದಲ್ಲಿ ಶೀವಸೇನಾ ಸ್ಪರ್ಧಿಸಿರಲಿಲ್ಲ!

    ಆದರೆ ಕಂಗನಾ ಹೇಳಿಕೆಯಲ್ಲಿನ ತಪ್ಪನ್ನು ಕಂಡುಹಿಡಿದ ಟ್ವಿಟ್ಟಿಗರೊಬ್ಬರು, 'ಕಂಗನಾ, ಪಶ್ಚಿಮ ಬಾಂಡ್ರಾ ಕ್ಷೇತದ ಮತದಾರರು. ಅಲ್ಲಿ 2019 ರ ಲೋಕಸಭೆ ಮತ್ತು ವಿಧಾನಸಭೆ ಎರಡರಕ್ಕೂ ಈ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿಯ ಅಭ್ಯರ್ಥಿಯೇ ಚುನಾವಣೆಗೆ ಸ್ಪರ್ಧಿಸಿತ್ತು ಮತ್ತು ಗೆದ್ದಿತ್ತು ಸಹ, ಬ್ಯಾಲೆಟ್‌ನಲ್ಲಿ ಬಿಜೆಪಿಯದ್ದೇ ಗುರುತು ಇತ್ತು ಶಿವಸೇನಾದ್ದು ಅಲ್ಲ' ಎಂದು ಮಾಹಿತಿ ನೀಡಿದ್ದಾರೆ.

    Recommended Video

    ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada
    2014 ರಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ

    2014 ರಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ

    ಒಂದು ವೇಳೆ ಅವರು 2014 ರ ಬಗ್ಗೆ ಮಾತನಾಡಿದ್ದಾಗಿದ್ದರೆ ಆಗ ಆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಬೇರೆ-ಬೇರೆಯಾಗಿ ಸ್ಪರ್ಧಿಸಿದ್ದವು, ಬಿಜೆಪಿ ಯ ಗುರುತು ಬ್ಯಾಲೆಟ್‌ ಯಂತ್ರದಲ್ಲಿತ್ತು. ಬಿಎಂಸಿ ಚುನಾವಣೆಯಲ್ಲಿಯೂ ಎರಡೂ ಪಕ್ಷಗಳು ಬೇರೆ-ಬೇರೆಯಾಗಿಯೇ ಸ್ಪರ್ಧಿಸಿದ್ದವು' ಎಂದು ಮಾಹಿತಿ ನೀಡಿದ್ದಾರೆ.

    ಕಂಗನಾ ರಣೌತ್‌ ಗೆ ನಾಲ್ಕು ಸಲಹೆ ನೀಡಿದ ನಟಿ ರಮ್ಯಾಕಂಗನಾ ರಣೌತ್‌ ಗೆ ನಾಲ್ಕು ಸಲಹೆ ನೀಡಿದ ನಟಿ ರಮ್ಯಾ

    English summary
    Actress Kangana Ranaut lied in a tv interview. She said she was forced to vote Shivasena. In her voting constituency Shiva Sena did not contest in last election.
    Friday, September 18, 2020, 9:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X