ಸೋನು ಸೂದ್ ಮೋಸಗಾರ, ದುಡ್ಡಿಗಾಗಿ ಎಲ್ಲಾ ಮಾಡುತ್ತಿದ್ದಾರೆ: ಟ್ವೀಟ್ ಲೈಕ್ ಮಾಡಿದ ಕಂಗನಾ
ರಿಯಲ್ ಹೀರೋ ಸೋನು ಸೂದ್ ಕೋವಿಡ್-19 ಪರಿಸ್ಥಿತಿಯನ್ನು ದುಡ್ಡು ಮಾಡಲು ಬಳಿಸಿಕೊಂಡಿದ್ದಾರೆ, ಅವರೊಬ್ಬ ಮೋಸಗಾರ ಎನ್ನುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಪೋಸ್ಟ್ ಗೆ ಕಂಗನಾ ಲೈಕ್ ಮಾಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Recommended Video
ದೇಶದಲ್ಲಿ ಕೊರೊನಾ ಭೀಕರ ಪರಿಸ್ಥಿತಿ ಸಾವಿರಾರು ಮಂದಿಯನ್ನು ಬಲಿ ಪಡೆಯುತ್ತಿದೆ. ಸೋಂಕಿತರು ಆಸ್ಪತ್ರೆ, ಬೆಡ್, ಆಕ್ಸಿಜನ್ ಸಿಗದೆ ಪರದಾಡುತ್ತಿದ್ದಾರೆ. ಇಂಥ ಸಮಯದಲ್ಲಿ ಕೆಲವು ಸಿನಿಮಾ ಗಣ್ಯರು ತನ್ನ ಕೈಲಾದ ಸಹಾಯ ಮಾಡುತ್ತಿದ್ದಾರೆ. ನಟ ಸೋನು ಸೂದ್ ಕಳೆದ ವರ್ಷ ಮತ್ತು ಈ ವರ್ಷವೂ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುತ್ತಿದ್ದಾರೆ.
ಸೋನು ಸೂದ್ ಮಾನವೀಯ ಕೆಲಸಕ್ಕೆ ಎಲ್ಲರೂ ಶ್ಲಾಘಿಸುತ್ತಿದ್ದಾರೆ. ರಿಯಲ್ ಹೀರೋ ಎಂದು ಕರೆದು, ದೇವರಂತೆ ಪೂಜಿಸುತ್ತಿದ್ದಾರೆ. ಈ ನಡುವೆಯೂ ಸೋನು ಸೂದ್ ಅವರನ್ನು ಟ್ರೋಲ್ ಮಾಡುವವರು ಮತ್ತು ಟೀಕಿಸುವವರ ಸಂಖ್ಯೆಯು ಕಡಿಮೆ ಏನಿಲ್ಲ. ಸೋನು ಸೂದ್ ಕೆಲಸವನ್ನು ಅಣಕಿಸಿದವರಲ್ಲಿ ನಟಿ ಕಂಗನಾ ರಣಾವತ್ ಕೂಡ ಒಬ್ಬರು.

ಇತ್ತೀಚಿಗೆ ಸೋನು ಸೂದ್ ಅವರ ಆಕ್ಸಿಜನ್ ಸಾಂದ್ರಕದ ಜಾಹಿರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಜಾಹೀರಾತಿನಲ್ಲಿ ಆಕ್ಸಿಜನ್ ಸಾಂದ್ರಕದ ಬೆಲೆ 2 ಲಕ್ಷ ಎಂದು ಉಲ್ಲೇಖಿಸಲಾಗಿದೆ. ಈ ಜಾಹೀರಾತಿನ ಪೋಸ್ಟರಿಗಾಗಿ ಸೋನು ಸೂದ್ ಅವರನ್ನು ಕೆಲವರು ಟ್ರೋಲ್ ಮಾಡುತ್ತಿದೆ. ವಂಚಕ, ಮೋಸಗಾರ ಎಂದು ಕರೆಯುತ್ತಿದ್ದಾರೆ.
ಈ ಜಾಹಿರಾತಿನ ಸ್ಕ್ರೀನ್ ಶಾಟ್ ಅನ್ನು ನಟಿ ಕಂಗನಾ ರಣಾವತ್ ಕೂಡ ಲೈಕ್ ಮಾಡಿದ್ದಾರೆ. ಕಂಗನಾ ಲೈಕ್ ಮಾಡಿರುವುದು ಸೋನು ಸೂದ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಕಳೆದ ವರ್ಷದಿಂದ ನಿರಂತರವಾಗಿ ಮಾನವೀಯ ಕೆಲಸ ಮಾಡುತ್ತಿರುವ ಸೋನು ಸೂದ್ ಅವರನ್ನು ವಂಚಕ ಎಂದಿರುವ ಬಗ್ಗೆ ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ.


Click it and Unblock the Notifications











