ಬಾಲಿವುಡ್ ಕ್ವೀನ್ ವಾಟ್ಸಾಪ್ ಮೇಲೆ ಕಣ್ಣಿಟ್ಟವರು ಯಾರು ? ಹೊಸ ಬಾಂಬ್ ಸಿಡಿಸಿದ ಕಂಗನಾ..!
ಸಿನಿಮಾಗಳಿಗಿಂತ ಬಹಳಷ್ಟು ವಿವಾದ, ಹುಸಿ ಮುನಿಸುಗಳ ಮೂಲಕವೇ ಸದ್ದು ಮಾಡುವವರು ಬಾಲಿವುಡ್ ನಟಿ ಕಂಗನಾ ರಣಾವತ್. ಸುಖಾ ಸುಮ್ಮನೆ ನಾಲಿಗೆ ಹರಿ ಬಿಟ್ಟು Nation Wants To Know ಎಂಬ ಹ್ಯಾಶ್ ಟ್ಯಾಗ್ ಮೂಲಕ ಸದಾ ಚಾಲ್ತಿಯಲ್ಲಿರುವ ಕಂಗನಾ, ಇದೀಗ ಇನ್ನೊಂದು ಬಾಂಬ್ ಸಿಡಿಸಿದ್ದಾರೆ.ಬಾಲಿವುಡ್ ನಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪವನ್ನ ಮಾಡಿದ್ದಾರೆ.
ಹೌದು, ಬಾಲಿವುಡ್ ನ ಅಸಲಿ ಬಣ್ಣವನ್ನ ಬಯಲು ಮಾಡುವ ಶಪಥವನ್ನ ಅನೇಕ ವರ್ಷಗಳ ಹಿಂದೆಯೇ ಮಾಡಿರುವ ಕಂಗನಾ, ಬಾಲಿವುಡ್ ನ ಕೆಲವು ಸೆಲೆಬ್ರಿಟಿಗಳು ಬೇರೆ ಸೆಲೆಬ್ರಿಟಿಗಳ ವಾಟ್ಸಾಪ್ ಸಂದೇಶಗಳನ್ನ ಹ್ಯಾಕ್ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ. ದಿನನಿತ್ಯಕ್ಕೆ ನಶೆಯ ಅಮಲಿನಲ್ಲಿ ತೇಲಲು ಬೇಕಾದ ಸಾಮಗ್ರಿಗಳನ್ನ ಡಾರ್ಕ್ ವೆಬ್ ನಿಂದ ಖರೀದಿಯನ್ನ ಮಾಡ್ತಿರುವ ಅನೇಕ ತಾರೆಯರು ವಾಟ್ಸಾಪ್ ಹಾಗೂ ಮೇಲ್ ಗಳನ್ನೂ ಹ್ಯಾಕ್ ಮಾಡುತ್ತಿದ್ದಾರೆ ಎಂದಿದ್ದಾರೆ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸಿ, ಸತ್ಯಾಸತ್ಯತೆಯನ್ನ ಬಯಲಿಗೆ ಎಳೆಯಬೇಕು ಎಂದು ಆಗ್ರಹಿಸಿದ್ದಾರೆ. ಇಷ್ಟೇ ಅಲ್ಲ ಸೂಕ್ತವಾದ ತನಿಖೆ ಮಾಡಿದ್ದೇ ಆದಲ್ಲಿ ಬಾಲಿವುಡ್ ನ ದೊಡ್ಡ ದೊಡ್ಡವರ ಅಸಲಿ ಜಾತಕ ಬಯಲಾಗುತ್ತೆ ಎಂದು ಅತ್ಯಂತ ಆತ್ಮವಿಶ್ವಾಸದಿಂದ ಹೇಳಿದ್ದಾರೆ ಕಂಗನಾ ರಣಾವತ್

ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ವೊಂದನ್ನ ಹಂಚಿಕೊಂಡಿರುವ ಕಂಗನಾ, ಸರ್ಕಾರವನ್ನು ಶ್ಲಾಘಿಸಿ, 'ತುಂಬಾ ಒಳ್ಳೆಯ ಕೆಲಸ ಮಾಡಿದೆ' ಎಂದು ಬರೆದುಕೊಂಡಿದ್ದಾರೆ. ಇನ್ನು ಕೇಂದ್ರವೂ ಡಾರ್ಕ್ ವೆಬ್ ಬಗ್ಗೆ ಏನಾದರೂ ಮಾಡಬೇಕು ಎಂದಿದ್ದಾರೆ. ಅಕ್ರಮ ವಸ್ತುಗಳನ್ನು ತೆಗೆದುಕೊಳ್ಳುವುದಲ್ಲದೆ, ವಾಟ್ಸಾಪ್ ಮತ್ತು ಮೇಲ್‌ನಂತಹ ಪ್ರತಿಯೊಬ್ಬರ ಅಕೌಂಟ್ ನ ಕೆಲವರು ಹ್ಯಾಕ್ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡರೆ ಅನೇಕ ದೊಡ್ಡ ಹೆಸರುಗಳು ಬಯಲಾಗುತ್ತವೆ ಎಂದಿದ್ದಾರೆ.
ಸದ್ಯಕ್ಕೆ ಕಂಗನಾ ರಣಾವತ್ ಅವರ ಈ ಅಭಿಪ್ರಾಯಕ್ಕೆ, ಅನೇಕ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗ್ತಿವೆ. ಕೆಲವರು ಎಂದಿನಂತೆ ಕಂಗನಾ ಪರವಾಘಿ ಮಾತನಾಡಿದರೆ ಇನ್ನೂ ಹಲವುರ ಕಂಗನಾ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಮೊದಲಿನಂತೆ ಅತ್ಯುತ್ತಮ ಚಿತ್ರಗಳನ್ನ ಆಯ್ಕೆ ಮಾಡಿಕೊಳ್ಳುವತ್ತ ಗಮನ ಕೊಡಿ, ರಾಜಕೀಯದಿಂದ ಅಂತರ ಕಾಪಾಡಿಕೊಳ್ಳಿ ಎಂಬ ಸಲಹೆಯನ್ನೂ ನೀಡುತ್ತಿದ್ದಾರೆ
ಕಂಗನಾ ರಣಾವತ್ ಮುಂದಿನ ಸಿನಿಮಾ..!
ಎಮರ್ಜೆನ್ಸಿ' ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಕಂಗನಾ ನಾಯಕಿ ಅಷ್ಟೇ ಅಲ್ಲ ನಿರ್ದೇಶಕಿಯೂ ಹೌದು ಅನ್ನುವುದು ವಿಶೇಷ. ಇನ್ನೂ ಹರೆದಾಡ್ತಿರುವ ಸುದ್ದಿಗಳ ಪ್ರಕಾರ ವಿಷ್ಣು ಮಂಚು ಅಭಿನಯದ 'ಕಣ್ಣಪ್ಪ' ಚಿತ್ರಕ್ಕೂ ಕಂಗನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಪ್ರಭಾಸ್ ಶಿವನ ಪಾತ್ರದಲ್ಲಿ ನಟಿಸಲಿದ್ದರೆ, ವಿಷ್ಣು ಮಂಚು ಅವರ ಭಕ್ತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











