twitter
    For Quick Alerts
    ALLOW NOTIFICATIONS  
    For Daily Alerts

    ಹೈದರಾಬಾದ್ ನಲ್ಲಿರುವ 'ಅಧೀರ' ಸಂಜಯ್ ದತ್ ರನ್ನ ಭೇಟಿಯಾದ ನಟಿ ಕಂಗನಾ

    |

    ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಸದ್ಯ ಹೈದರಾಬಾದ್ ನಲ್ಲಿದ್ದಾರೆ. ಕೆಜಿಎಫ್-2 ಶೂಟಿಂಗ್ ಗಾಗಿ ಸಂಜಯ್ ದತ್ ಹೈದರಾಬಾದ್ ಗೆ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಪ್ರಾರಂಭವಾಗಿದ್ದು, ಈಗಾಗಲೇ ಸಿನಿಮಾತಂಡ ಹೈದರಾಬಾದ್ ನಲ್ಲಿ ಬೀಡುಬಿಟ್ಟಿದೆ.

    ಕೆಜಿಎಫ್-2 ಸಿನಿಮಾ ಚಿತ್ರೀಕರಣಕ್ಕೆ ಸಂಜಯ್ ದತ್ ಯಾವಾಗ ಎಂಟ್ರಿ ಕೊಡುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಇದೀಗ ಸಂಜಯ್ ದತ್ ಭಾಗಿಯಾಗಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ವಿಶೇಷ ಎಂದರೆ ಹೈದರಾಬಾದ್ ನಲ್ಲಿರುವ ಸಂಜುಬಾಬಾರನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ.

    ಹೈದರಾಬಾದ್‌ಗೆ ಬಂದಿಳಿದ ರಾಕಿ ಭಾಯ್: ಏರ್‌ಪೋರ್ಟ್‌ ಫೋಟೋ ವೈರಲ್ಹೈದರಾಬಾದ್‌ಗೆ ಬಂದಿಳಿದ ರಾಕಿ ಭಾಯ್: ಏರ್‌ಪೋರ್ಟ್‌ ಫೋಟೋ ವೈರಲ್

    ಅಂದಹಾಗೆ ನಟಿ ಕಂಗನಾ ರಣಾವತ್ ಸಹ ಹೈದರಾಬಾದ್ ನಲ್ಲಿದ್ದಾರೆ. ತಲೈವಿ ಸಿನಿಮಾದ ಚಿತ್ರೀಕರಣ ನಿಮಿತ್ತ ಕಂಗನಾ ಹೈದರಾಬಾದ್ ನಲ್ಲೇ ತಂಗಿದ್ದಾರೆ. ವಿಶೇಷ ಎಂದರೆ ಕಂಗನಾ ಮತ್ತು ಸಂಜಯ್ ದತ್ ಇಬ್ಬರು ಒಂದೇ ಹೋಟೆಲ್ ನಲ್ಲಿ ತಂಗಿದ್ದಾರೆ. ಸಂಜಯ್ ದತ್ ಅದೆ ಹೋಟೆಲ್ ನಲ್ಲಿದ್ದಾರೆ ಎನ್ನುವ ವಿಷಯ ಗೊತ್ತಾಗುತ್ತಿದ್ದಂತೆ ಕಂಗನಾ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

    Kangana Ranaut meets Sanjay Dutt in Hyderabad to check on his health

    ಸಂಜಯ್ ದತ್ ಜೊತೆ ಫೋಟೋ ಕ್ಲಿಕ್ಕಿಸಿ ಶೇರ್ ಮಾಡಿರುವ ಕಂಗನಾ, ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 'ಒಂದೆ ಹೋಟೆಲ್ ನಲ್ಲಿ ತಂಗಿದ್ದೇವೆ ಎಂದು ಗೊತ್ತಾದ ಬಳಿಕ, ನಾನು ಇಂದು ಬೆಳಗ್ಗೆ ಸಂಜು ಸರ್ ಅವರನ್ನು ನೋಡಲು ಹೋಗಿದ್ದೆ. ಅವರ ಆರೋಗ್ಯವನ್ನು ವಿಚಾರಿಸಿದೆ. ಸಂಜಯ್ ದತ್ ಮತ್ತಷ್ಟು ಹ್ಯಾಂಡ್ ಸಮ್ ಆಗಿ ಕಾಣಿಸುತ್ತಿದ್ದಾರೆ. ನಿಮ್ಮ ಉತ್ತಮ ಆರೋಗ್ಯಕ್ಕಾಗಿ ನಾವು ಪ್ರಾರ್ಥನೆ ಮಾಡುತ್ತೇವೆ' ಎಂದು ಬರೆದುಕೊಂಡಿದ್ದಾರೆ.

    Recommended Video

    ಹೋಟೆಲ್ ನಲ್ಲಿ ವೈನ್ ಬಾಟೇಲ್ ಹಿಡಿದು ನಿಂತ ದರ್ಶನ್ | Filmibeat Kannada

    ಸಂಜಯ್ ದತ್ ಸದ್ಯ ಹೈದರಾಬಾದ್ ನಲ್ಲಿರುವುದು ಕೆಜಿಎಫ್-2 ಶೂಟಿಂಗ್ ಗಾಗಿ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಿನಿಮಾತಂಡ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಮೊನ್ನೆಮೊನ್ನೆಯಷ್ಟೆ ರಾಕಿಂಗ್ ಸ್ಟಾರ್ ಯಶ್ ಹೈದರಾಬಾದ್ ಗೆ ಎಂಟ್ರಿ ಕೊಟ್ಟಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಡಿಸೆಂಬರ್ ತಿಂಗಳಲ್ಲಿ ಕೆಜಿಎಫ್-2 ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ನಲ್ಲಿ ಸಿನಿಮಾತಂಡ ಬ್ಯುಸಿಯಾಗಲಿದೆ.

    English summary
    Bollywood Actress Kangana Ranaut meets Sanjay Dutt in Hyderabad to check on his health.
    Friday, November 27, 2020, 12:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X