twitter
    For Quick Alerts
    ALLOW NOTIFICATIONS  
    For Daily Alerts

    ಸಿಖ್ ವಿರೋಧಿ ಹೇಳಿಕೆ ಖಂಡಿಸಿ ಕಂಗನಾ ವಿರುದ್ಧ ಕೇಸ್: ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ನಟಿ

    |

    ಬಾಲಿವುಡ್ ನಟಿ ಕಂಗನಾ ರನೌತ್ ಒಂದಲ್ಲ ಒಂದು ವಿವಾದದಲ್ಲಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಂತೂ ಕಂಗನಾ ತನ್ನ ಸಿನಿಮಾಗಳಿಗಿಂತಲೂ ವಿವಾದಗಳಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವ ಮೂಲಕ ಇಕ್ಕಟ್ಟಿಗೆ ಸಿಲುಕುತ್ತಿದ್ದಾರೆ. ಕಂಗನಾ ನೀಡಿದ ಹೇಳಿಕೆಗಳು ಪರ-ವಿರೋಧ ಚರ್ಚೆಯಾಗಿತ್ತು. ಕೆಲವರು ಕಂಗನಾ ವಾದವನ್ನು ಒಪ್ಪಿಕೊಂಡರೆ, ಮತ್ತೆ ಕೆಲವರು ವಿರೋಧಿಸಿದ್ದರು.

    ಇತ್ತೀಚೆಗೆ ಕಂಗನಾ ರನೌತ್ ಇನ್‌ಸ್ಟಾಗ್ರಾಮ್‌ನಲ್ಲಿ ಸಿಖ್ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ರೈತರ ಪ್ರತಿಭಟನೆಯನ್ನು 'ಖಾಲಿಸ್ತಾನಿ ಚಳುವಳಿ' ಎಂದು ಟೀಕಿಸಿದ್ದರು. ಕಂಗನಾ ನೀಡಿದ ಈ ಹೇಳಿಕೆಯ ವಿರುದ್ಧ ದೇಶದೆಲ್ಲೆಡೆ ಸಂಚಲವನ್ನು ಸೃಷ್ಟಿಸಿತ್ತು. ಈ ಹೇಳಿಕೆಯನ್ನು ಖಂಡಿಸಿದ ಸಿಖ್ ಸಮುದಾಯ ಸಿಡಿದೆದ್ದಿತ್ತು. ಇನ್ನೊಂದೆಡೆ ಮುಂಬೈ ಹಾಗು ದೆಹಲಿಯ ಗುರುದ್ವಾರವನ್ನು ಪ್ರತಿನಿಧಿಸುವ ವಕೀಲರ ಗುಂಪು ಮುಂಬೈನಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಕಂಗನಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಈಗ ಕಂಗನಾ ಈ ಕೇಸ್ ಅನ್ನು ಖುಲಾಸೆಗೊಳಿಸುವಂತೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

    ಹೈ ಕೋರ್ಟ್ ಮೆಟ್ಟಿಲೇರಿದ ಕಂಗನಾ

    ಹೈ ಕೋರ್ಟ್ ಮೆಟ್ಟಿಲೇರಿದ ಕಂಗನಾ

    ಕಂಗನಾ ವಿರುದ್ಧ ಮುಂಬೈ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಅನ್ನು ಪ್ರಶ್ನಿಸಿ ಕಂಗನಾ ರನೌತ್ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಕಂಗನಾ ವಿರುದ್ಧ ನೀಡಿದ ದೂರಿನ ಅನ್ವಯ ಮುಂಬೈ ಪೊಲೀಸರು IPC ಸೆಕ್ಷನ್ 295/A ಅಡಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಕೇಸ್ ದಾಖಲಿಸಿಕೊಂಡಿದ್ದರು. ಈ ದೂರನ್ನು ಪ್ರಶ್ನಿಸಿ, ಕಂಗನಾ ಪರ ವಕೀಲ ರಿಜ್ವಾನ್ ಸಿದ್ಧಿಕಿ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಮನವಿಯಲ್ಲಿ "ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಚಲಾಯಿಸಿದ್ದಕ್ಕೆ ಕಂಗನಾ ರನೌತ್‌ರನ್ನು ಉದ್ದೇಶಪೂರ್ವಕವಾಗಿ ಕಾನೂನು ಕ್ರಮ ಜರುಗಿಸಲಾಗಿದೆ. ಇದು ಕೃತ್ಯವಲ್ಲದೆ ಬೇರೇನೂ ಅಲ್ಲ." ಎಂದು ಮೇಲ್ಮನವಿಯಲ್ಲಿ ಹೇಳಲಾಗಿದೆ.

    ಕೇಸ್ ದಾಖಲಿಸಿದ್ದು ಯಾರು?

    ಕೇಸ್ ದಾಖಲಿಸಿದ್ದು ಯಾರು?

    ನವೆಂಬರ್ 21ರಂದು ಕಂಗನಾ ತನ್ನ ಇನ್‌ಸ್ಟಾಗ್ರಾಂನಲ್ಲಿ ಸಿಖ್ ರೈತರ ಚಳಿವಳಿಯನ್ನು ಖಾಲಿಸ್ತಾನ ಚಳುವಳಿ ಎಂದು ಟೀಕೆ ಮಾಡುತ್ತಿದ್ದಂತೆ ಸಿಖ್ ಸಮುದಾಯ ತಿರುಗಿಬಿದ್ದಿತ್ತು. ಮುಂಬೈ ಹಾಗೂ ದೆಹಲಿಯ ವಿವಿಧ ಗುರುದ್ವಾರದ ಸದಸ್ಯರು ಆಗಿರುವ ವಕೀಲರು ದೂರು ದಾಖಲಿಸಿದ್ದರು. ಅಮರ್‌ಜಿತ್ ಸಿಂಗ್, ಕುಲ್ವಂತ್ ಸಿಂಗ್ ಸಂದು, ಮಂಜಿಂದರ್ ಸಿಂಗ್ ಸಿರ್ಸ ಹಾಗೂ ಜಸ್‌ಪಾಲ್ ಸಿಂಗ್ ಸಿದ್ಧು ಎಂಬುವವರು ಕಂಗಾನ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು.

     ಗುರುದ್ವಾರ ನಿರ್ವಹಣಾ ಸಮಿತಿಯಿಂದಲೂ ದೂರು

    ಗುರುದ್ವಾರ ನಿರ್ವಹಣಾ ಸಮಿತಿಯಿಂದಲೂ ದೂರು

    ಕೆಲ ದಿನಗಳ ಹಿಂದೆ ನಟಿ ಕಂಗನಾ ರನೌತ್ ಹೇಳಿಕೆ ವಿರುದ್ಧ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ದೂರು ದಾಖಲಿಸಿತ್ತು. 'ಖಾಲಿಸ್ತಾನಿ ಚಳುವಳಿ' ಹೇಳಿಕೆಯನ್ನು ತೀವ್ರವಾಗಿ ಖಂಡಿಸಿತ್ತು. ಕಂಗನಾ ಸಿಖ್ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆಂದು ಸಿಖ್ ಸಮಿತಿ ಮಂದಿರ್ ಮಾರ್ಗ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

    ರೈತರ ಮುತ್ತಿಗೆಯಿಂದ ಕಂಗನಾ ಕಂಗಾಲು

    ರೈತರ ಮುತ್ತಿಗೆಯಿಂದ ಕಂಗನಾ ಕಂಗಾಲು

    ಒಂದು ವಾರದ ಹಿಂದಷ್ಟೇ ನಟಿ ಕಂಗನಾ ರನೌತ್ ಕಾರಿಗೆ ಪಂಜಾಬ್‌ನ ಕಿರಾತ್‌ಪುರದಲ್ಲಿ ರೈತರು ಮುತ್ತಿಗೆ ಹಾಕಿದ್ದರು. ಕಂಗನಾ ಫ್ಲೈಟ್ ಕ್ಯಾನ್ಸಲ್ ಆಗಿದ್ದರಿಂದ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಕಾರಿಗೆ ಮುತ್ತಿಗೆ ಹಾಕಿ, ಬೆದರಿಕೆ ಹಾಕುತ್ತಿದ್ದಾರೆ ಎಂದು ಕಂಗನಾ ಆರೋಪಿಸಿದ್ದರು. ಚಂಡೀಗಢ ಹಾಗೂ ಉನಾ ಹೈವೇಯ ಬುಂಗಾ ಸಾಹಿಬ್ ಹಾಗೂ ಕಿರಾತ್‌ಪುರ ಎಂಬಲ್ಲಿ ಈ ಘಟನೆ ನಡೆದಿದ್ದು, ಬಳಿಕ ಪೊಲೀಸರು ಮುತ್ತಿಗೆ ಹಾಕಿದ ರೈತರನ್ನು ಸಮಾಧಾನ ಪಡಿಸಿ ಕಂಗನಾ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

    English summary
    Kangana Ranaut moves Bombay High Court to remove case against her anti-Sikh comment in Instagram. FIR registered by Mumbai Police against putting objectionable posts on the social media about Sikh community to Khalistanis.
    Friday, December 10, 2021, 10:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X