For Quick Alerts
  ALLOW NOTIFICATIONS  
  For Daily Alerts

  ಲೈಂಗಿಕ ಕಿರುಕುಳ ಪ್ರಕರಣ : ಕಂಗನಾ ಮತ್ತು ಸೋನಮ್ ಮಧ್ಯೆ ಡೈಲಾಗ್ ವಾರ್

  |
  ಏನಿದು ಈ ನಟಿಯರ ನಡುವೆ ಡೈಲಾಗ್ ವಾರ್..! | Filmibeat Kannada

  ಬಾಲಿವುಡ್ ನಲ್ಲಿ ಮತ್ತೆ ಲೈಂಗಿಕ ಕಿರುಕುಳದ ವಿರುದ್ಧ ಕೂಗು ಕೇಳಿ ಬರುತ್ತಿದೆ. ಇತ್ತೀಚಿಗಷ್ಟೆ ನಟಿ ತನುಶ್ರೀ ದತ್ತ ನಟ ನಾನಾ ಪಟೇಕರ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಆ ಬಳಿಕ ಮತ್ತೊಂದು ಪ್ರಕರಣ ಇದೀಗ ದೊಡ್ಡ ಚರ್ಚೆ ಆಗುತ್ತಿದೆ.

  ನಟಿ ಕಂಗನಾ ರಣಾವತ್ ಖ್ಯಾತ ನಿರ್ದೇಶಕ ವಿಕಾಸ್ ಭಾಲ್ ವಿರುದ್ಧ ಬಾಂಬ್ ಸಿಡಿಸಿದ್ದರು. ''ಕ್ವೀನ್' ಚಿತ್ರದ ವೇಳೆ ವಿಕಾಸ್ ನನ್ನನ್ನು ಹಲವು ಬಾರಿ ಬಿಗಿಯಾಗಿ ತಬ್ಬಿಕೊಂಡಿದ್ದರು. ನನ್ನ ತಲೆ ಕೂದಲನ್ನ ಸ್ಟೈಲ್ ಮಾಡಿದ್ರು. ನಿನ್ನ ಸ್ಮೆಲ್ ಕಂಡ್ರೆ ನನಗೆ ತುಂಬಾ ಇಷ್ಟ ಎನ್ನುತ್ತಿದ್ದರು.'' ಎಂದು ತನಗೆ ಆದ ತೊಂದರೆಯನ್ನ ಹೇಳಿಕೊಂಡಿದ್ದರು.

  ಖ್ಯಾತ ನಿರ್ದೇಶಕ ವಿಕಾಸ್ ಭಾಲ್ ಮುಖವಾಡ ಕಳಚಿದ ಕಂಗನಾ.! ಖ್ಯಾತ ನಿರ್ದೇಶಕ ವಿಕಾಸ್ ಭಾಲ್ ಮುಖವಾಡ ಕಳಚಿದ ಕಂಗನಾ.!

  ಆ ಬಳಿಕ ಕಂಗನಾ ಆರೋಪದ ಘಟನೆಯ ಬಗ್ಗೆ ನಟಿ ಸೋನಮ್ ಕಪೂರ್ ಹೇಳಿಕೆ ನೀಡಿದ್ದಾರೆ. ಸೋನಮ್ ಹೇಳಿಕೆಗೆ ಕಂಗನಾ ಕೂಡ ಮತ್ತೊಂದು ಟಾಂಕ್ ನೀಡಿದ್ದಾರೆ. ಇದೀಗ, ಸೋನಮ್ ಮತ್ತು ಕಂಗನಾ ನಡುವೆ ಡೈಲಾಗ್ ವಾರ್ ಶುರುವಾಗಿದೆ. ಮುಂದೆ ಓದಿ....

  ವಿವಾಸ್ ಭಾಲ್ ವಿರುದ್ಧ ಮಹಿಳೆಯೊಬ್ಬರ ಆರೋಪ

  ವಿವಾಸ್ ಭಾಲ್ ವಿರುದ್ಧ ಮಹಿಳೆಯೊಬ್ಬರ ಆರೋಪ

  2015ರಲ್ಲಿ 'ಬಾಂಬೆ ವೆಲ್ವೆಟ್' ಚಿತ್ರದ ವೇಳೆ ನಿರ್ದೇಶಕ ವಿವಾಸ್ ಭಾಲ್ ನನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಅವರ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಆರೋಪಿಸಿದ್ದರು. ಆ ಯುವತಿಗೆ ಬೆಂಬಲ ಸೂಚಿಸಿರುವ ನಟಿ ಕಂಗನಾ ವಿಕಾಸ್ ದೌರ್ಜನ್ಯ ಮಾಡಿರ್ತಾರೆ ಎಂದಿದ್ದಾರೆ.

  ಮಹಿಳೆಗೆ ಬೆಂಬಲ ಸೂಚಿಸಿದ ಕಂಗನಾ

  ಮಹಿಳೆಗೆ ಬೆಂಬಲ ಸೂಚಿಸಿದ ಕಂಗನಾ

  ಈ ಘಟನೆಯ ಬಗ್ಗೆ ಮಾತನಾಡಿದ ಕಂಗನಾ ''ಆ ಮಹಿಳೆ ಮಾಡಿರುವ ಆರೋಪದಲ್ಲಿ ಶೇ.100ರಷ್ಟು ಸತ್ಯವಿದೆ. ಅಲ್ಲದೇ ವಿಕಾಸ್ ನಿಂದ ನಾನು ಕೂಡ ಅದೇ ರೀತಿಯ ತೊಂದರೆಗೆ ಒಳಗಾಗಿದ್ದೇನೆ. 'ಕ್ವೀನ್' ಚಿತ್ರದ ವೇಳೆ ನನ್ನನ್ನು ಹಲವು ಬಾರಿ ಬಿಗಿಯಾಗಿ ತಬ್ಬಿಕೊಂಡಿದ್ದರು. ನನ್ನ ತಲೆ ಕೂದಲನ್ನ ಸ್ಮೆಲ್ ಮಾಡಿದ್ರು. ನಿನ್ನ ಸ್ಮೆಲಗ್ ಕಂಡ್ರೆ ನನಗೆ ತುಂಬಾ ಇಷ್ಟ ಎನ್ನುತ್ತಿದ್ದರು. ಅವರಿಂದ ಬಿಡಿಸಿಕೊಳ್ಳಲು ತುಂಬಾ ಕಷ್ಟ ಪಡ್ತಿದ್ದೆ. ಅವರಲ್ಲಿ ಏನೋ ಸಮಸ್ಯೆ ಇದೆ'' ಎಂದು ಹೇಳಿಕೆ ನೀಡಿದ್ದರು.

  ನಾನಾ ಪಾಟೇಕರ್ ಸೇರಿ 10 ಜನರ ವಿರುದ್ಧ ದೂರು ನೀಡಿದ ತನುಶ್ರೀ ದತ್ತಾ ನಾನಾ ಪಾಟೇಕರ್ ಸೇರಿ 10 ಜನರ ವಿರುದ್ಧ ದೂರು ನೀಡಿದ ತನುಶ್ರೀ ದತ್ತಾ

  ಕಂಗನಾ ಬಗ್ಗೆ ತಮಾಷೆ ಮಾಡಿದ ಸೋನಮ್

  ಕಂಗನಾ ಬಗ್ಗೆ ತಮಾಷೆ ಮಾಡಿದ ಸೋನಮ್

  ಬೆಂಗಳೂರಿನಲ್ಲಿ 'ವಿ ಆರ್ ವುಮೆನ್' ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ಸೋನಮ್ ಕಪೂರ್ ನಿರ್ದೇಶಕರ ವಿವಾಸ್ ಭಾಲ್ ಮೇಲೆ ಕಂಗನಾ ಮಾಡಿದ ಆರೋಪದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ''ಆಕೆಯ (ಕಂಗನಾ) ಬಳಿ ಸಾಕಷ್ಟು ಸಂಗತಿಗಳು ಇವೆ. ಆದರೆ, ಆಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಕಷ್ಟ ಆಗುತ್ತದೆ. ಆಕೆ ತಾನು ನಂಬಿಕೊಂಡಿದ್ದನೂ ಹೇಳುವುದು ನನಗೆ ಇಷ್ಟ.'' ಎಂದು ತನ್ನ ಮಾತಿನ ಮೂಲಕ ತಮಾಷೆ ಮಾಡಿದ್ದರು.

  ಸೋನಮ್ ಗೆ ಟಾಂಕ್ ಕೊಟ್ಟ ಕಂಗನಾ

  ಸೋನಮ್ ಗೆ ಟಾಂಕ್ ಕೊಟ್ಟ ಕಂಗನಾ

  ಸೋನಮ್ ಮಾತನ್ನ ಕೇಳಿಕೊಂಡ ಕಂಗಾನ ಸುಮ್ಮನೆ ಕೂರಲಿಲ್ಲ. ''ಸೋನಮ್ ಕಪೂರ್ ಕೆಲವು ಮಹಿಳೆಯನ್ನು ನಂಬುತ್ತಾರೆ. ಕೆಲವರನ್ನ ನಂಬುವುದಿಲ್ಲ. ನಾನು ನನ್ನ ತಂದೆಯ ಹೆಸರಿನ ಮೂಲಕ ಜನರಿಗೆ ಗೊತ್ತಾದವು ಅಲ್ಲ. ದಶಕಗಳ ಕಾಲ ಚಿತ್ರರಂಗದಲ್ಲಿ ಕಷ್ಟ ಪಟ್ಟು ಹೆಸರು ಗಳಿಸಿದ್ದೇನೆ.'' ಎಂದಿದ್ದಾರೆ.

  English summary
  Actress Kangana Ranaut on Sonam Kapoor's statement over Kangana's sexual harassment allegations against director Vikas Bahl.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X