For Quick Alerts
  ALLOW NOTIFICATIONS  
  For Daily Alerts

  ನಾನು ಬಂದೇ ಬರ್ತೀನಿ, ತಾಕತ್ ಇದ್ದರೆ ತಡೆಯಿರಿ: ನಟಿ ಕಂಗನಾ ಸವಾಲ್

  |

  ನಟಿ ಕಂಗನಾ ರಣಾವತ್ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ನೆಪೋಟಿಸಂ, ಡ್ರಗ್ ಮಾಫಿಯಾದ ವಿರುದ್ಧ ಬಹಿರಂಗವಾಗಿ ಪ್ರತಿಭಟಿಸಿದ ಕಂಗನಾ ಈಗ ಮುಂಬೈ ಪೊಲೀಸರ ವಿರುದ್ಧ ತಿರುಗಿ ಬಿದ್ದಿದ್ದಾರೆ.

  ರಾಗಿಣಿ ಮನೆಗೆ ಪೋಲೀಸರ ಎಂಟ್ರಿ | Filmibeat Kannada

  ಈ ವಿಚಾರವಾಗಿ ಇತ್ತೀಚಿಗೆ ಟ್ವೀಟ್ ಮಾಡಿರುವ ಕಂಗನಾ ಮುಂಬೈ ನಗರವನ್ನು 'ಪಾಕ್ ಆಕ್ರಮಿತ ಕಾಶ್ಮೀರ'ಕ್ಕೆ ಹೋಲಿಸಿ ಮುಂಬೈ ನಾಗರೀಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಂಗನಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈಗ ಮತ್ತೊಂದು ಟ್ವೀಟ್ ಮಾಡಿ ಸವಾಲ್ ಎಸೆದಿದ್ದಾರೆ. 'ನಾನು ಮುಂಬೈಗೆ ಬಂದೇ ಬರ್ತೀನಿ. ಯಾರಪ್ಪನಿಗಾದರೂ ತಾಕತ್ ಇದ್ದರೆ ನನ್ನನ್ನು ತಡೆಯಿರಿ' ಎಂದು ಬಹಿರಂಗವಾಗಿ ಚಾಲೆಂಜ್ ಹಾಕಿದ್ದಾರೆ. ಮುಂದೆ ಓದಿ...

  ಮುಂಬೈ, ಪಾಕ್ ಆಕ್ರಮಿತ ಕಾಶ್ಮೀರ ಎನಿಸುತ್ತಿದೆ: ಕಂಗನಾ ವಿವಾದಮುಂಬೈ, ಪಾಕ್ ಆಕ್ರಮಿತ ಕಾಶ್ಮೀರ ಎನಿಸುತ್ತಿದೆ: ಕಂಗನಾ ವಿವಾದ

   ಏನಿದು ವಿವಾದ?

  ಏನಿದು ವಿವಾದ?

  ನಟಿ ಕಂಗನಾ ರಣಾವತ್ ಗೆ ಪೊಲೀಸ್ ಭದ್ರತೆ ಬೇಕಾಗಿದೆಯಂತೆ. ಆದರೆ ಮುಂಬೈ ಪೊಲೀಸರ ಭದ್ರತೆ ಪಡೆಯಲು ಕಂಗನಾ ಸಿದ್ಧರಿಲ್ಲ. ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಮುಂಬೈ ಪೊಲೀಸರು ನಡೆದುಕೊಂಡ ರೀತಿ ನೋಡಿ ಅವರ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ. 'ಮುಂಬೈ ಪೊಲೀಸರು, ಮಾಫಿಯಾ ಗೂಂಡಾಗಳಿಗಿಂತಲೂ ಭಯ ಹುಟ್ಟಿಸುತ್ತಾರೆ' ಎಂದು ಟ್ವೀಟ್ ಮಾಡಿ ಹರಿಯಾಣ ಅಥವಾ ಕೇಂದ್ರ ಸರ್ಕಾರದಿಂದ ಭದ್ರತೆ ಬೇಕು ಎಂದು ಕಂಗನಾ ಕೇಳಿದ್ದರು.

   ಮುಂಬೈಗೆ ಹಿಂದಿರುಗಿ ಬರಬೇಡಿ- ಶಿವಸೇನೆ ಮುಖ್ಯಸ್ಥ

  ಮುಂಬೈಗೆ ಹಿಂದಿರುಗಿ ಬರಬೇಡಿ- ಶಿವಸೇನೆ ಮುಖ್ಯಸ್ಥ

  ಮುಂಬೈ ಪೊಲೀಸರ ಬಗ್ಗೆ ನಟಿ ಕಂಗನಾ ಹೇಳಿಕೆಗೆ ಆಕ್ರೋಶಗೊಂಡ ಶಿವಸೇನೆ ಮುಖ್ಯಸ್ಥ ಸಂಜಯ್ ರಾವತ್, 'ಮುಂಬೈ ಪೊಲೀಸರ ಬಗ್ಗೆ ಅಷ್ಟೊಂದು ಭಯವಿದ್ದರೆ ಮುಂಬೈಗೆ ಬರಬೇಡಿ' ಎಂದು ಕಂಗನಾ ಟ್ವೀಟ್ ಗೆ ತಿರುಗೇಟು ನೀಡಿದ್ದರು.

  ಸ್ಟಾರ್ ನಟರನ್ನು ಟಾರ್ಗೆಟ್ ಮಾಡಿದ ಕಂಗನಾ: ರಣ್ವೀರ್, ರಣ್ಬೀರ್, ವಿಕ್ಕಿ ಕೌಶಲ್ ಡ್ರಗ್ ಪರೀಕ್ಷೆ ಮಾಡಲಿ!ಸ್ಟಾರ್ ನಟರನ್ನು ಟಾರ್ಗೆಟ್ ಮಾಡಿದ ಕಂಗನಾ: ರಣ್ವೀರ್, ರಣ್ಬೀರ್, ವಿಕ್ಕಿ ಕೌಶಲ್ ಡ್ರಗ್ ಪರೀಕ್ಷೆ ಮಾಡಲಿ!

   ಮುಂಬೈ, ಪಾಕ್ ಆಕ್ರಮಿತ ಕಾಶ್ಮೀರದಂತೆ ಕಾಣುತ್ತಿದೆ- ಕಂಗನಾ

  ಮುಂಬೈ, ಪಾಕ್ ಆಕ್ರಮಿತ ಕಾಶ್ಮೀರದಂತೆ ಕಾಣುತ್ತಿದೆ- ಕಂಗನಾ

  ಸಂಜಯ್ ರಾವತ್ ಹೇಳಿಕೆಗೆ ಟ್ವೀಟ್ ಮೂಲಕ ಮತ್ತೆ ಪ್ರತಿಕ್ರಿಯೆ ನೀಡಿದ ನಟಿ ಕಂಗನಾ, 'ಸಂಜಯ್ ರಾವತ್ ನನಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಮೊದಲಿಗೆ ಆಜಾದಿ ಗ್ಯಾಂಗ್ ಗಳು ಮುಂಬೈ ರಸ್ತೆಗಳಲ್ಲಿ ಅಬ್ಬರಿಸಿದವು, ಈಗ ಬಹಿರಂಗವಾಗಿ ಬೆದರಿಕೆ ಹಾಕಲಾಗುತ್ತಿದೆ. ಮುಂಬೈ, ಪಾಕ್ ಆಕ್ರಮಿತ ಕಾಶ್ಮೀರದಂತೆ ಕಾಣುತ್ತಿದೆ' ಎಂದು ವಿವಾದದ ಕಿಡಿ ಹಚ್ಚಿದ್ದಾರೆ. ಕಂಗನಾ ಹೇಳಿಕೆ ಖಂಡಿಸಿ ಅನೇಕರು ಕಂಗನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

  ಕಂಗನಾ ಬದುಕಿನ ಕರಾಳ ಘಟನೆಗಳು: ಅಬ್ಬಾ ಭಯಾನಕ!ಕಂಗನಾ ಬದುಕಿನ ಕರಾಳ ಘಟನೆಗಳು: ಅಬ್ಬಾ ಭಯಾನಕ!

   ಮುಂಬೈಗೆ ಬರುವುದಾಗಿ ಬಹಿರಂಗ ಸವಾಲ್

  ಮುಂಬೈಗೆ ಬರುವುದಾಗಿ ಬಹಿರಂಗ ಸವಾಲ್

  ಇದೀಗ ಮತ್ತೊಂದು ಟ್ವೀಟ್ ಮಾಡಿ ಕಂಗನಾ ಖಡಕ್ ತಿರುಗೇಟು ನೀಡಿದ್ದಾರೆ. "ಮುಂಬೈಗೆ ಬರಬೇಡ ಎಂದು ತುಂಬಾ ಜನ ಬೆದರಿಕೆ ಹಾಕುತ್ತಿದ್ದಾರೆ. ಹಾಗಾಗಿ ನಾನು ಖಂಡಿತವಾಗಿ ಮುಂಬೈ ಬರಬೇಕು. ಸೆಪ್ಟೆಂಬರ್ 9 ರಂದು ಮುಂಬೈಗೆ ಬರ್ತೀನಿ. ವಿಮಾನ ಇಳಿದ ತಕ್ಷಣ ಮುಂಬೈ ಏರ್ ಪೋರ್ಟ್ ನಿಂದಲೇ ಪೋಸ್ಟ್ ಮಾಡುತ್ತೇನೆ. ಯಾರಪ್ಪನಿಗಾದರೂ ತಾಕತ್ ಇದ್ದರೆ ನನ್ನನ್ನು ತಡೆಯಿರಿ" ಎಂದು ಬಹಿರಂಗ ಸವಾಲ್ ಹಾಕಿದ್ದಾರೆ.

  English summary
  Actress Kangana Ranaut open challenge, she as announce return to Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X