Just In
Don't Miss!
- Lifestyle
ದಿನ ಭವಿಷ್ಯ: ನಿಮ್ಮ ರಾಶಿಗೆ ಶನಿವಾರ ದಿನ ಹೇಗಿರಲಿದೆ ನೋಡಿ
- News
ದಿಢೀರ್ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕಾರಣ ನೀಡಿದ ಸಚಿವ ಕೆ. ಸುಧಾಕರ್
- Education
KSCCF Recruitment 2021: 45 ಲೆಕ್ಕಿಗರು, ಎಫ್ಡಿಎ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಮಾರ್ಚ್ ತಿಂಗಳಿನಲ್ಲಿ ಹ್ಯುಂಡೈ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ
- Sports
ಐಎಸ್ಎಲ್: ಸಮಬಲ ಸಾಧಿಸಿದ ಗೋವಾ ಎಫ್ಸಿ, ಮುಂಬೈ ಎಫ್ಸಿ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 05ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಇಂದಿರಾ ಗಾಂಧಿ ಪಾತ್ರದಲ್ಲಿ ನಟಿ ಕಂಗನಾ ರಣಾವತ್ ನಟನೆ?
ಸುಶಾಂತ್ ಸಿಂಗ್ ಸಾವು, ಡ್ರಗ್ಸ್ ಮಾಫಿಯಾ, ಬಾಲಿವುಡ್ ನೆಪೋಟಿಸಂ, ಮುಂಬೈ ಮಹಾನಗರ ಪಾಲಿಕೆ, ಮುಂಬೈ ಸರ್ಕಾರ ಹೀಗೆ...ಕಳೆದ ಆರೇಳು ತಿಂಗಳಿಂದ ನಟಿ ಕಂಗನಾ ಸಿನಿಮಾ ಬಿಟ್ಟು ಇನ್ನಿತರ ವಿಚಾರಕ್ಕಾಗಿಯೇ ಸುದ್ದಿಯಲ್ಲಿದ್ದರು. ಕಂಗನಾ ಕೊನೆಗೂ ತಲೈವಿ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಬಯೋಪಿಕ್‌ನಲ್ಲಿ ಕಂಗನಾ ನಟಿಸಿದ್ದು, ಪುರಚ್ಚಿ ತಲೈವಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದೀಗ, ಮತ್ತೊಂದು ರಾಜಕೀಯ ಥ್ರಿಲ್ಲರ್ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದು, ಈ ಚಿತ್ರದಲ್ಲಿ ಭಾರತದ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರಂತೆ. ಯಾವುದು ಆ ಚಿತ್ರ? ಮುಂದೆ ಓದಿ....
ಇಂದಿರಾ ಗಾಂಧಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ ಖ್ಯಾತ ನಟಿ

ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ
ಇನ್ನು ಹೆಸರಿಡದ ಚಿತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ. ಇದು ರಾಜಕೀಯ ಆಧರಿತ ಸಿನಿಮಾ ಆಗಿದೆ. ಈ ಚಿತ್ರದಲ್ಲಿ ಭಾರತದ ರಾಜಕೀಯ ರಂಗ ಕಂಡ ಹಲವರ ಪಾತ್ರ ಬರಲಿದೆ. ಅದರಲ್ಲಿ ಇಂದಿರಾ ಗಾಂಧಿ ಪಾತ್ರವೂ ಒಂದು. ಇಂದಿರಾ ಪಾತ್ರದಲ್ಲಿ ಕಂಗನಾ ಕಾಣಿಸಿಕೊಳ್ಳಲಿದ್ದಾರೆ.

ಬಯೋಪಿಕ್ ಅಲ್ಲ ಎಂದು ಸ್ಪಷ್ಟನೆ
ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಎಂದಾಕ್ಷಣ ಇದು ಬಯೋಪಿಕ್ ಚಿತ್ರವಾಗಿರಬಹುದಾ ಎಂಬ ಚರ್ಚೆ ಹುಟ್ಟಿಕೊಂಡಿತ್ತು. ಆದರೆ ಇದು ಬಯೋಪಿಕ್ ಅಲ್ಲ ಎಂದು ಸ್ವತಃ ಕಂಗನಾ ಸ್ಪಷ್ಟಪಡಿಸಿದ್ದಾರೆ. ಇದೊಂದು ಕಾಲಘಟ್ಟದ ಚಿತ್ರ. ಆ ಸಮಯದಲ್ಲಿ ಬರುವ ರಾಜಕಾರಣಿಗಳ ಪಾತ್ರ ಪ್ರಮುಖವಾಗಿರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಸುಶಾಂತ್ ಸಿಂಗ್ ಸಾವಿನ 'ಗುಟ್ಟು' ಬಿಚ್ಚಿಟ್ಟ ಕಂಗನಾ ರಣೌತ್

ಬಹಳ ವರ್ಷದಿಂದಲೂ ಆಸೆ ಇತ್ತು
ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ನಟಿಸಬೇಕು ಎನ್ನುವುದು ಕಂಗನಾ ರಣಾವತ್ ಅವರಿಗೆ ಮೊದಲಿನಿಂದಲೂ ಆಸೆ ಇತ್ತು. ವೃತ್ತಿ ಜೀವನದ ಆರಂಭದಲ್ಲಿ ಇಂದಿರಾ ಗಾಂಧಿಯಂತೆ ಮೇಕಪ್ ಮಾಡಿ ಫೋಟೋಶೂಟ್ ಸಹ ಮಾಡಿಸಿದ್ದರು. ಆ ಫೋಟೋ ಈಗ ವೈರಲ್ ಆಗಿದೆ. ಒಂದಲ್ಲ ಒಂದು ದಿನ ಈ ಪಾತ್ರ ಮಾಡುತ್ತೇನೆ ಎಂದು ಮನಸ್ಸಿನಲ್ಲಿ ನಿರ್ಧರಿಸಿದ್ದರಂತೆ. ಈಗ, ಆ ಸಮಯ ಬಂದಿದೆ.

ಸಾಯಿ ಕಬೀರ್ ನಿರ್ದೇಶನ
ಸ್ಕ್ರಿಪ್ಟ್ ಕೆಲಸ ಕೊನೆಯ ಹಂತದಲ್ಲಿದೆ. ಈ ಚಿತ್ರವನ್ನು ಸಾಯಿ ಕಬೀರ್ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಕಂಗನಾ ನಟಿಸಿದ್ದ ರಿವಾಲ್ವರ್ ರಾಣಿ ಚಿತ್ರವನ್ನು ಕಬೀರ್ ನಿರ್ದೇಶಿಸಿದ್ದರು. ಇದೀಗ, ಹೊಸ ಪ್ರಾಜೆಕ್ಟ್‌ಗೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಸಹ ಹೇಳಲು ತಯಾರಿ ನಡೆಸಿದ್ದಾರೆ.
ಡಿ ಬಾಸ್ ದರ್ಶನ್ ಜೊತೆ ಬಾಲಿವುಡ್ ನಟಿ ಕಂಗನಾ ರಣಾವತ್: ಫೋಟೋ ವೈರಲ್

ಘಟಾನುಘಟಿಗಳ ಪಾತ್ರ ಇರಲಿದೆ
ಈ ಚಿತ್ರದಲ್ಲಿ ಇಂದಿರಾ ಗಾಂಧಿ ಮಾತ್ರವಲ್ಲ, ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಮೊರಾರ್ಜಿ ದೇಸಾಯಿ, ಲಾಲ್ ಬಹುದ್ದೂರ್ ಶಾಸ್ತ್ರಿ ಅಂತಹ ಪಾತ್ರಗಳು ಬರಲಿದೆ. ಪುಸ್ತಕವೊಂದರ ಆಧರಿಸಿ ಸಿನಿಮಾ ಸಿದ್ಧವಾಗಲಿದೆ. ಆದರೆ, ಯಾವ ಪುಸ್ತಕ ಎನ್ನುವುದು ಸದ್ಯಕ್ಕೆ ಗೌಪ್ಯವಾಗಿದೆ.

ಇಂದಿರಾ ಪಾತ್ರದಲ್ಲಿ ವಿದ್ಯಾ ಬಾಲನ್?
ಭಾರತೀಯ ಚಿತ್ರರಂಗದಲ್ಲಿ ಇಂದಿರಾ ಗಾಂಧಿ ಪಾತ್ರ ಅನೇಕ ಸಿನಿಮಾಗಳಲ್ಲಿ ಬಂದು ಹೋಗಿದೆ. ಇಂದಿರಾ ಗಾಂಧಿಯಂತೆ ಅನೇಕರು ನಟಿಸಿದ್ದಾರೆ. ಆದರೆ, ಪೂರ್ಣ ಪ್ರಮಾಣದಲ್ಲಿ ಇಂದಿರಾ ಅವರ ಬಯೋಪಿಕ್ ಬಂದಿಲ್ಲ. ಇತ್ತೀಚಿಗಷ್ಟೆ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರ ವೆಬ್ ಸರಣಿಯಲ್ಲಿ ಇಂದಿರಾ ಗಾಂಧಿ ಪಾತ್ರ ನಿರ್ವಹಿಸುತ್ತಿರುವ ಸುದ್ದಿ ವರದಿಯಾಗಿತ್ತು. ಈಗ ಕಂಗನಾ ಕಮರ್ಷಿಯಲ್ ಚಿತ್ರದಲ್ಲಿ ಈ ಪಾತ್ರ ಮಾಡಲು ಸಜ್ಜಾಗಿದ್ದಾರೆ.