ಸಮಂತಾ ಅಕ್ಕಿನೇನಿಯನ್ನು ಕೊಂಡಾಡಿದ ಕಂಗನಾ ರನೌತ್

ನಟಿ ಸಮಂತಾ ಅಕ್ಕಿನೇನಿ ಅಭಿನಯಿಸಿರುವ ವೆಬ್ ಸರಣಿ 'ದಿ ಫ್ಯಾಮಿಲಿ ಮ್ಯಾನ್' ಸೀಸನ್ 2 ನ ಟ್ರೇಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು ಟ್ರೇಲರ್‌ ನೋಡಿದ ಹಲವರು ಸಮಂತಾ ಅಭಿನಯಕ್ಕೆ ಮಾರುಹೋಗಿದ್ದಾರೆ.

ಹಲವಾರು ಮಂದಿ ನಟ-ನಟಿಯರು ಸಮಂತಾ ಅಭಿನಯವನ್ನು ಕೊಂಡಾಡಿದ್ದಾರೆ. ಸಮಂತಾ ಪತಿ ನಾಗಚೈತನ್ಯ, ತೆಲುಗಿನ ಇನ್ನೂ ಕೆಲವು ನಟ-ನಟಿಯರ ಜೊತೆಗೆ ಬಾಲಿವುಡ್‌ನ ನಟಿಯರು ಸಹ ಸಮಂತಾ ಅಭಿನಯಕ್ಕೆ ಮಾರು ಹೋಗಿದ್ದಾರೆ.

ಸಹನಟಿಯರ ಬಗ್ಗೆ ಬಹಳ ಅಪರೂಪಕ್ಕೆ ಒಳ್ಳೆಯ ಮಾತಾಡುವ ನಟಿ ಕಂಗನಾ ರನೌತ್ ಸಹ ಸಮಂತಾ ಅಭಿನಯವನ್ನು ಹೊಗಳಿದ್ದಾರೆ. ಟ್ರೇಲರ್‌ನಲ್ಲಿನ ಸಮಂತಾರ ಚಿತ್ರವನ್ನು ಹಂಚಿಕೊಂಡಿರುವ ಕಂಗನಾ ರನೌತ್, 'ಈ ಹುಡುಗಿ ನನ್ನ ಹೃದಯ ಗೆದ್ದಿದ್ದಾಳೆ' ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.

Kangana Ranaut Praises Samantha Akkineni For Her Performence In The Family Man 2

ಕೆಲವೇ ತಿಂಗಳುಗಳ ಹಿಂದೆ ಸಮಂತಾ, ಕಂಗನಾ ರನೌತ್ ನಟನೆಯ 'ತಲೈವಿ' ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಿದ್ದರು. ಆಗಲೂ ಸಹ ಕಂಗನಾ, ಸಮಂತಾಗೆ ಸಾಮಾಜಿಕ ಜಾಲತಾಣ ಮೂಲಕ ಧನ್ಯವಾದ ತಿಳಿಸಿದ್ದರು. ಆಗ ಸಮಂತಾ, ಕಂಗನಾರ ನಟನೆಯನ್ನು ಹೊಗಳಿ ಟ್ವೀಟ್ ಮಾಡಿದ್ದರು.

ಕಂಗನಾ ರನೌತ್ ಮಾತ್ರವೇ ಅಲ್ಲದೆ ಬಾಲಿವುಡ್‌ನ ಪ್ರತಿಭಾವಂತ ನಟಿ ತಾಪ್ಸಿ ಪನ್ನು ಸಹ ಸಮಂತಾ ಅಕ್ಕಿನೇನಿಯ ನಟನೆಯನ್ನು ಹೊಗಳಿದ್ದಾರೆ. ಟ್ವೀಟ್ ಮಾಡಿರುವ ತಾಪ್ಸಿ ಪನ್ನು, 'ಸಮಂತಾ, ನಿನ್ನನ್ನು ಈ ಹೊಸ ಅವತಾರದಲ್ಲಿ ಹೊಸ ಮಾಧ್ಯಮದ ಮೂಲಕ (ವೆಬ್ ಸರಣಿ) ನೋಡಲು ಉತ್ಸುಕತೆಯಿಂದ ಕಾಯುತ್ತಿದ್ದೇನೆ' ಎಂದಿದ್ದಾರೆ. ತಾಪ್ಸಿ ಟ್ವೀಟ್‌ಗೆ ಧನ್ಯವಾದ ಹೇಳಿದ್ದಾರೆ ಸಮಂತಾ.

Recommended Video

ನಿರ್ದೇಶಕ Prashanth Raj ಅವರಿಗೆ ಏನಾಯ್ತು ? | Filmibeat Kannada

'ದಿ ಫ್ಯಾಮಿಲಿ ಮ್ಯಾನ್' ಸೀಸನ್ 2 ವೆಬ್ ಸರಣಿಯಲ್ಲಿ ಎಲ್‌ಟಿಟಿಇ ಉಗ್ರಳ ಪಾತ್ರದಲ್ಲಿ ಸಮಂತಾ ನಟಿಸಿದ್ದು, ಇದೇ ಮೊದಲ ಬಾರಿಗೆ ವಿಲನ್ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ವೆಬ್ ಸರಣಿಯಲ್ಲಿ ಮನೋಜ್ ಭಾಜಪೇಯಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಪ್ರಿಯಾಮಣಿ ಸಹ ನಟಿಸಿದ್ದಾರೆ. ವೆಬ್ ಸರಣಿಯು ಜೂನ್ 4 ರಂದು ಅಮೆಜಾನ್ ಪ್ರೈಂ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ.

More from Filmibeat

English summary
Bollywood actress Kangana Ranaut praises Samantha Akkineni's acting in The Family Man seson 2 trailer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X