twitter
    For Quick Alerts
    ALLOW NOTIFICATIONS  
    For Daily Alerts

    ಆಲಿಯಾ ಭಟ್ ರನ್ನು ಮುಲಾಜಿಲ್ಲದೆ ಜಾಡಿಸಿದ ಕಂಗನಾ ರನೌತ್!

    |

    'ಗಂಗೂಬಾಯಿ ಕಾಠಿಯಾವಾಡಿ' ಬಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಸಂಜಯ್ ಲೀಲಾ ಬನ್ಸಾಲಿ ಹಾಗೂ ಆಲಿಯಾ ಭಟ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಮೊದಲ ಸಿನಿಮಾ. ಈ ಸಿನಿಮಾ ಆರಂಭವಾದ ದಿನದಿಂದಲೂ ಗಂಗೂಬಾಯಿ ಸಿನಿಮಾ ವಿವಾದಕ್ಕೆ ಸಿಲುಕುತ್ತಲೇ ಇದೆ. ಇನ್ನೇನು ಬಿಡುಗಡೆಗೆ ಕೆಲವೇ ದಿನಗಳು ಇದೆ ಅನ್ನುವಾಗಲೇ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರದ ವಿರುದ್ಧ ಬಾಲಿವುಡ್ ಕಾಂಟ್ರವರ್ಸಿ ಕ್ವೀನ್ ನಟಿ ಕಂಗನಾ ಕಿಡಿ ಕಾರಿದ್ದಾರೆ.

    'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದಲ್ಲಿ ಆಲಿಯಾ ಅಭಿನಯದ ಬಗ್ಗೆ ಟೀಕೆ ಮಾಡಿರುವ ಕಂಗನಾ ಆಲಿಯಾ ಅವರನ್ನು 'ಡ್ಯಾಡಿಸ್ ಏಂಜೆಲ್' ಮತ್ತು 'ರೋಮ್‍ಕಾಮ್ ಬಿಂಬೋ' ಎಂದು ಕರೆಯುವ ಮೂಲಕ ಬಾಲಿವುಡ್‍ನಲ್ಲಿ ಸ್ಟಾರ್ ಡಮ್ ಹೇಗೆ ನಿರ್ಧಾರವಾಗುತ್ತೆ ಎಂಬುದನ್ನು ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ.

    'ಈ ಸಿನಿಮಾದಲ್ಲಿ ನನ್ನ ತಾಯಿ ವೇಶ್ಯೆಯಾಗಿ ಬದಲಾಗಿದ್ದಾಳೆ': ಆಲಿಯಾ ವಿರುದ್ಧ ಗಂಗೂಬಾಯಿ ಪುತ್ರ ಕಿಡಿ
    ಗಂಗೂಬಾಯಿ ಕಥಿಯಾವಾಡಿ' ಸಿನಿಮಾ ರಿಲೀಸ್ ಗೆ ಇನ್ನೂ 5 ದಿನ ಇರಬೇಕಾದರೆ ಬಾಕ್ಸ್ ಆಫೀಸ್‍ನಲ್ಲಿ ಬಾಂಬ್ ಸ್ಫೋಟಿಸಲಿದೆ ಎಂದು ಎಲ್ಲ ಕಡೆ ಸುದ್ದಿ ಹಬ್ಬಿದೆ. ಈ ಸುದ್ದಿ ಕೇಳಿ ರೋಚಿಗೆದ್ದ ಕಂಗನಾ ಇನ್‍ಸ್ಟಾಗ್ರಾಮ್ ನಲ್ಲಿ, ಈ ಶುಕ್ರವಾರ 200 ಕೋಟಿ ರೂ. ಬಾಕ್ಸ್ ಆಫೀಸ್‍ನಲ್ಲಿ ಸುಟ್ಟು ಬೂದಿಯಾಗಲಿದೆ. ಪಾಪಾ ಕಿ ಪರಿ ಏಕೆಂದರೆ ಅಪ್ಪ ತನ್ನ ರೋಮ್‍ಕಾಮ್ ಬಿಂಬೋ ನಟಿಸುತ್ತಾಳೆ ಎಂದು ಸಾಬೀತು ಮಾಡಲು ಬಯಸುತ್ತಾರೆ. ಅದಕ್ಕೆ ಈ ಸಿನಿಮಾದ ದೊಡ್ಡ ನ್ಯೂನತೆಯೆಂದರೆ ಪಾತ್ರಕ್ಕೆ ಸರಿಯಾದ ಕಾಸ್ಟಿಂಗ್ ಮಾಡದಿರುವುದು. ಈ ಜನರು ಎಂದೂ ಬದಲಾಗುವುದಿಲ್ಲ. ದಕ್ಷಿಣ ಮತ್ತು ಹಾಲಿವುಡ್ ಚಿತ್ರರಂಗದಲ್ಲಿಯೂ ಈ ಸಿನಿಮಾ ತೆರೆಕಾಣಿಸಿಕೊಳ್ಳುವುದರಲ್ಲಿ ಯಾವುದೇ ರೀತಿಯ ಆಶ್ಚರ್ಯವಿಲ್ಲ. ಬಾಲಿವುಡ್ ಸಿನಿಮಾ ಮಾಫಿಯಾ ಆಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    Kangana Ranaut Rages Against Gangubai Kathiawadi Again, Calls Alia Bhatt ‘Papa KI Pari’
    ಬಾಲಿವುಡ್ ಮಾಫಿಯಾ ಡ್ಯಾಡಿ ಪಾಪಾ ಜೋ ಅವರಿಂದ ಪ್ರಭಾವಿತರಾಗಿದ್ದಾರೆ. ಬನ್ಸಾಲಿ ಅವರನ್ನು ಭಾವನಾತ್ಮಕವಾಗಿ ಗುರಿ ಮಾಡಿ ಆಲಿಯಾ ಅವರನ್ನು ಅವರ ಸಿನಿಮಾದಲ್ಲಿ ನಟಿಸುವಂತೆ ಮಾಡಲಾಗಿದೆ. 'ಮೂವಿ ಮಾಫಿಯಾ'ದ ಪ್ರಭಾವದಿಂದ ದೊಡ್ಡ ಸಿನಿಮಾಗಳ ನಿರ್ಮಾಪಕರು ಸಹ ತಮ್ಮ ಸಿನಿಮಾಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಮಾಡಿದೆ ಎಂದು ಅಸಮಾಧಾನ ಹೊರಹಾಕಿದರು.

    Kangana Ranaut Rages Against Gangubai Kathiawadi Again, Calls Alia Bhatt ‘Papa KI Pari’
    ಈ ಮೂಲಕ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಅವರ ವಿರುದ್ಧ ಆಕ್ರೋಶಗೊಂಡ ಅವರು, ಬಾಲಿವುಡ್ ಮಾಫಿಯಾ ಪಾಪಾ ಎಂದು ಕರೆದು, ಇವರ ಮನೋರಂಜನೆಯನ್ನು ನಿಲ್ಲಿಸುವಂತೆ ಜನರಲ್ಲಿ ಕೇಳಿಕೊಂಡಿದ್ದಾರೆ. ಈ ಶುಕ್ರವಾರ ಬಿಡುಗಡೆಯಾಗುವ ಸಿನಿಮಾದಲ್ಲಿ ದೊಡ್ಡ ನಾಯಕ ಮತ್ತು ಶ್ರೇಷ್ಠ ನಿರ್ದೇಶಕರೂ ಸಹ ಅವನ ಮಾಫಿಯಾಗೆ ಹೊಸ ಬಲಿಪಶುಗಳಾಗಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    Kangana Ranaut Rages Against Gangubai Kathiawadi Again, Calls Alia Bhatt ‘Papa KI Pari’
    ಇನ್ನು ಇತ್ತೀಚೆಗೆ ಈ ಸಿನಿಮಾದ ಬಗ್ಗೆ ಈ ಸಿನಿಮಾದಲ್ಲಿ ಗಂಗೂಬಾಯಿಯನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಕುಟುಂಬ ಆಕ್ರೋಶ ಹೊರ ಹಾಕಿದೆ. ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಾಗೂ ಆಲಿಯಾ ಭಟ್ ವಿರುದ್ಧ ಗಂಗೂಬಾಯಿ ಕುಟುಂಬ ಕಿಡಿಕಾರುತ್ತಿದೆ. ಗಂಗೂಬಾಯಿ ಫ್ಯಾಮಿಲಿ ಲಾಯರ್ ಕೂಡ ಸಿನಿಮಾದ ಟ್ರೈಲರ್ ನೋಡಿ ದೊಡ್ಡ ಶಾಕ್‌ಗೆ ಒಳಗಾಗಿದ್ದು, ಸಿನಿಮಾ ಬಿಡುಗಡೆಯನ್ನು ವಿರೋಧಿಸುತ್ತಿದ್ದಾರೆ. ಹೀಗಾಗಿ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರಕ್ಕೆ ಬಿಡುಗಡೆ ವೇಳೆ ಆತಂಕ ಎದುರಾಗಿದೆ.

    English summary
    Kangana Ranaut took to her Instagram Stories to take an indirect dig at Alia Bhatt and her father Mahesh Bhatt ahead of the release of Alia's film Gangubai Kathiawadi.
    Monday, February 21, 2022, 9:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X