For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ಅವರಂತೆ ಕಾರ್ತಿಕ್ ಆರ್ಯನ್ ಜೀವನ ಅಂತ್ಯಗೊಳಿಸಬೇಡಿ

  |

  ಬಾಲಿವುಡ್ ನೆಪೋಟಿಸಂ ವಿರುದ್ಧ ನಟಿ ಕಂಗನಾ ರಣಾವತ್ ಮತ್ತೆ ಗುಡುಗಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಬಿಟೌನ್ ಇಂಡಸ್ಟ್ರಿಯ ನೆಪೋಟಿಸಂಗೆ ಸಿಲುಕಿ ಪ್ರಾಣ ಕಳೆದುಕೊಂಡರು. ಈಗ ನೆಪೋಟಿಸಂ ಗ್ಯಾಂಗ್ ಮತ್ತೊಬ್ಬ ಯುವ ಕಾರ್ತಿಕ್ ಆರ್ಯನ್ ಮೇಲೆ ದುಷ್ಟ ಕಣ್ಣಿಟ್ಟಿದೆ ಎಂದು ಕ್ವೀನ್ ಕಂಗನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡುತ್ತಿದ್ದ 'ದೋಸ್ತಾನ-2' ಚಿತ್ರದಿಂದ ಕಾರ್ತಿಕ್ ಆರ್ಯನ್ ಹೊರಬಂದಿದ್ದರು. ಆರಂಭದಲ್ಲಿ ದೋಸ್ತಾನ 2 ಚಿತ್ರಕ್ಕೆ ಕಾರ್ತಿಕ್ ಆರ್ಯನ್ ನಾಯಕ ಎಂದು ಪ್ರಕಟಿಸಲಾಗಿತ್ತು. ಆದ್ರೀಗ, ಈ ಪ್ರಾಜೆಕ್ಟ್‌ನಿಂದ ಕಾರ್ತಿಕ್ ಅವರನ್ನು ಕೈಬಿಡಲಾಗಿದೆ. ಇದಕ್ಕೆ ಸ್ಪಷ್ಟ ಕಾರಣ ಹೊರಬಿದ್ದಿಲ್ಲ.

  ಕರಣ್ ಜೋಹರ್ ಧರ್ಮ ಸಂಸ್ಥೆಯಿಂದ ನಟ ಕಾರ್ತಿಕ್ ಆರ್ಯನ್ ಬ್ಯಾನ್: ಕಾರಣವೇನು?ಕರಣ್ ಜೋಹರ್ ಧರ್ಮ ಸಂಸ್ಥೆಯಿಂದ ನಟ ಕಾರ್ತಿಕ್ ಆರ್ಯನ್ ಬ್ಯಾನ್: ಕಾರಣವೇನು?

  ಕಾರಣ ಇಲ್ಲದೇ ಕಾರ್ತಿಕ್ ಆರ್ಯನ್ ಕೈಬಿಟ್ಟಿರುವ ಕರಣ್ ಜೋಹರ್ ಸಂಸ್ಥೆಯ ಈ ನಿರ್ಧಾರದ ವಿರುದ್ಧ ಕಂಗನಾ ರಣಾವತ್ ದನಿ ಎತ್ತಿದ್ದಾರೆ. ಸುಶಾಂತ್ ಸಿಂಗ್ ಅವರಂತೆ ಕಾರ್ತಿಕ್ ಆರ್ಯನ್ ಅವರ ಜೀವನ ಅಂತ್ಯಗೊಳಿಸಬೇಡಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಕಂಗನಾ ಮಾಡಿರುವ ಸರಣಿ ಟ್ವೀಟ್ ಇಲ್ಲಿದೆ. ಮುಂದೆ ಓದಿ...

  ನೀವು ರಣಹದ್ದುಗಳು ಅವನನ್ನು ಬಿಟ್ಟುಬಿಡಿ

  ನೀವು ರಣಹದ್ದುಗಳು ಅವನನ್ನು ಬಿಟ್ಟುಬಿಡಿ

  ''ಕಾರ್ತಿಕ್ ಆರ್ಯನ್ ಸ್ವಂತ ಪ್ರತಿಭೆಯಿಂದ ಬಂದಿರುವ ನಟ ಹಾಗೂ ಸ್ವಂತ ಪ್ರತಿಭೆಯಿಂದ ಮುಂದುವರಿಯುವ ಯುವಕ. ನೆಪೋಟಿಸಂ ಗ್ಯಾಂಗ್‌ಗೆ ನನ್ನ ಮನವಿ ಏನಪ್ಪಾ ಅಂದ್ರೆ ದಯವಿಟ್ಟು ಕಾರ್ತಿಕ್ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಸುಶಾಂತ್ ಸಿಂಗ್‌ಗೆ ಮಾಡಿದ ರೀತಿ ಅವರ ಹಿಂದೆ ಹೋಗಿ ನೇಣು ಬಿಗಿದುಕೊಳ್ಳುವಂತೆ ಒತ್ತಾಯಿಸಬೇಡಿ. ನೀವು ರಣಹದ್ದುಗಳು ಅವನನ್ನು ಬಿಟ್ಟುಬಿಡಿ'' ಎಂದಿದ್ದಾರೆ ಕಂಗನಾ.

  ಈ ಚಿಲ್ಲರೆಗಳಿಗೆ ಹೆದರುವ ಅಗತ್ಯವಿಲ್ಲ

  ಈ ಚಿಲ್ಲರೆಗಳಿಗೆ ಹೆದರುವ ಅಗತ್ಯವಿಲ್ಲ

  ''ಕಾರ್ತಿಕ್ ಈ ಚಿಲ್ಲರೆಗಳಿಗೆ ಹೆದರುವ ಅಗತ್ಯವಿಲ್ಲ. ಅಸಹ್ಯವಾದ ಲೇಖನಗಳು ಹಾಗೂ ಪ್ರಕಟಣೆಗಳನ್ನು ಬಿಡುಗಡೆ ಮಾಡುವುದರ ಮೂಲಕ ನಿಮ್ಮ ವ್ಯಕ್ತಿತ್ವದ ಮೇಲೆ ಮಸಿ ಬಳಿಯುವ ಪ್ರಯತ್ನ ಇದಾಗಿರುತ್ತದೆ. ಸುಶಾಂತ್ ಸಿಂಗ್ ಅವರ ಮೇಲೂ ಡ್ರಗ್ಸ್ ವ್ಯಸನ ಹಾಗೂ ವೃತ್ತಿಪರತೆ ಮೇಲೆ ಕಟ್ಟ ಅಭಿಪ್ರಾಯ ಮೂಡಿಸುವ ಕೆಲಸ ಮಾಡಲಾಯಿತು'' ಎಂದು ಕಂಗನಾ ಟೀಕಿಸಿದ್ದಾರೆ.

  ನಿಮ್ಮ ಜೊತೆ ನಾವು ಇದ್ದೇವೆ

  ನಿಮ್ಮ ಜೊತೆ ನಾವು ಇದ್ದೇವೆ

  ''ನಾವು ನಿಮ್ಮೊಂದಿಗಿದ್ದೇವೆ ಎಂದು ತಿಳಿದುಕೊಳ್ಳಿ, ಇಂದು ನೀವು ಏಕಾಂಗಿಯಾಗಿರಬೇಕು. ಪ್ರತಿಯೊಬ್ಬರಿಗೂ ಈ ನಾಟಕ ತಿಳಿದಿದೆ. ಇದರ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ನೀವು ತುಂಬಾ ಚೆನ್ನಾಗಿ ಕೆಲಸ ಮಾಡುತ್ತೀರಿ, ನಿಮ್ಮ ಪ್ರವೃತ್ತಿಯನ್ನು ನಂಬಿರಿ ಮತ್ತು ಶಿಸ್ತುಬದ್ಧರಾಗಿರಿ'' ಎಂದು ನಟಿ ಕಂಗನಾ ಸಲಹೆ ನೀಡಿದ್ದಾರೆ.

  ಬ್ಲಾಕ್ ಲಿಸ್ಟ್ ಮಾಡಿದ ಕರಣ್ ಜೋಹರ್

  ಬ್ಲಾಕ್ ಲಿಸ್ಟ್ ಮಾಡಿದ ಕರಣ್ ಜೋಹರ್

  ಕಾರ್ತಿಕ್ ಆರ್ಯನ್, ಜಾಹ್ನವಿ ಕಪೂರ್ ಹಾಗೂ ನವನಟಿ ಲಕ್ಷ್ಯ ತಾರಬಳಗದಲ್ಲಿ 'ದೋಸ್ತಾನ-2' ಸಿನಿಮಾ ಘೋಷಣೆ ಮಾಡಲಾಗಿತ್ತು. ಆದ್ರೀಗ, ಕಾರ್ತಿಕ್ ಈ ಚಿತ್ರದಿಂದ ಹೊರಬಂದಿದ್ದಾರೆ. ಧರ್ಮ ಪ್ರೊಡಕ್ಷನ್ ಸಂಸ್ಥೆ ಕಾರ್ತಿಕ್ ಆರ್ಯನ್ ಅವರನ್ನು ಬ್ಲಾಕ್ ಲಿಸ್ಟ್ ಮಾಡಿದೆ. ಕರಣ್ ಜೋಹರ್ ಮತ್ತೆ ಕಾರ್ತಿಕ್ ಜೊತೆ ಸಿನಿಮಾ ಮಾಡದಿರಲು ನಿರ್ಧರಿಸಿದ್ದಾರೆ.

  English summary
  Bollywood Actress Kangana Ranaut React on Kartik Aaryan Exit From Karan Johar Dostana-2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X