For Quick Alerts
  ALLOW NOTIFICATIONS  
  For Daily Alerts

  ಬಿಕಿನಿ ಧರಿಸಿದ ಕಂಗನಾಗೆ ನೆಟ್ಟಿಗರ ತರಾಟೆ: ಭೈರವಿದೇವಿ ನಗ್ನಳಾಗಿ ಬಂದರೆ ಏನು ಮಾಡುತ್ತೀರಿ ಎಂದ ನಟಿ

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಳಿಂತ ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ವಿವಾದಗಳ ಮೂಲಕವೇ ಕಂಗನಾ ಹೆಚ್ಚು ಚರ್ಚೆಯಲ್ಲಿದ್ದಾರೆ. ಕ್ವೀನ್ ನಟಿಯ ಕೆಲವು ಹೇಳಿಕೆಗಳು ಅನೇಕರ ಕೋಪಕ್ಕೆ ಕಾರಣವಾಗುತ್ತಿದೆ ಹಾಗಾಗಿ ಅನೇಕರು ಕಂಗನಾ ವಿರುದ್ಧ ಕಿಡಿ ಕಾರುತ್ತಿದ್ದಾರೆ.

  ಈ ನಡುವೆ ಕಂಗನಾ ಹಾಟ್ ಬಿಕಿನಿ ಫೋಟೋ ಶೇರ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೆಕ್ಸಿಕೋದ ಬೀಚ್ ನಲ್ಲಿ ಬಿಕಿನಿ ತೊಟ್ಟು ಕುಳಿತಿರುವ ಫೋಟೋವನ್ನು ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಶೇರ್ ಮಾಡುತ್ತಿದ್ದಂತೆ ನೆಟ್ಟಿಗರು ಕಂಗನಾ ಕಾಲು ಎಳೆಯಲು ಪ್ರಾರಂಭಿಸಿದ್ದಾರೆ.

  ಟ್ವಿಟ್ಟರ್ ನಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಕಂಗನಾಗೆ ಹಕ್ಕಿದೆ: ಬಾಂಬೆ ಹೈಕೋರ್ಟ್

  ಹಿಂದುತ್ವ, ಸನಾತನ ಧರ್ಮ ಎನ್ನುವ ಕಂಗನಾ ಈ ರೀತಿಯ ಬಟ್ಟೆ ಧರಿಸಿ ಕುಳಿತಿರುವುದು ಸರಿಯೇ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ನೆಟ್ಟಿಗರ ಪ್ರಶ್ನೆಗೆ ಗರಂ ಆಗಿರುವ ಕಂಗನಾ ಖಾರವಾದ ಉತ್ತರ ನೀಡಿದ್ದಾರೆ.

  ಮತ್ತೊಂದು ಫೋಟೋ ಶೇರ್ ಮಾಡಿ, ತಾಯಿ ಭೈರಾದೇವಿ ಕೂದಲು ಬಿಟ್ಟುಕೊಂಡು, ಬಟ್ಟೆಯಿಲ್ಲದೆ ರಕ್ತ ಕುಡಿಯುತ್ತಾ ಹೊರಬಂದರೆ ನಿಮಗೆ ಏನಾಗುತ್ತೆ? ಎಂದು ಪ್ರಶ್ನೆ ಮಾಡುವ ಮಾಡುವ ಮೂಲಕ ನೆಟ್ಟಿಗರ ಬಾಯಿ ಮುಚ್ಚಿಸಿದ್ದಾರೆ.

  ಮಲೆನಾಡ ಹುಡುಗಿ ಅಡಿಕೆ ಸುಲಿಯೋದು ನೋಡೋಕೆ ಎಷ್ಟು ಚೆಂದ | Asha Bhat | Filmibeat Kannada

  'ನನ್ನ ಬಿಕಿನಿ ಚಿತ್ರವನ್ನು ನೋಡಿ, ಕೆಲವರು ನನಗೆ ಧರ್ಮ ಮತ್ತು ಸನಾತನ ಉಪನ್ಯಾಸ ನೀಡುತ್ತಿದ್ದಾರೆ. ಒಂದು ವೇಳೆ ತಾಯಿ ಭೈರವಿಯು ಕೂದಲು ಬಿಟ್ಟುಕೊಂಡು, ಭಕ್ತಿಯಿಲ್ಲದೆ, ರಕ್ತ ಕುಡಿಯುವ ಚಿತ್ರದೊಂದಿಗೆ ಹೊರಬಂದರೆ ನಿಮಗೆ ಏನಾಗುತ್ತದೆ? ನಿಮ್ಮನ್ನು ನೀವು ಭಕ್ತರೆಂದು ಕರೆದುಕೊಳ್ಳುತ್ತೀರಾ? ಧರ್ಮಕ್ಕೆ ಬನ್ನಿ, ಆದರೆ ಧರ್ಮದ ಗುತ್ತಿಗೆದಾರರಾಗಬೇಡಿ' ಎಂದಿದ್ದಾರೆ.

  English summary
  Bollywood Actress Kangana Ranaut reacts those critics her Bikini Photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X