For Quick Alerts
  ALLOW NOTIFICATIONS  
  For Daily Alerts

  ಹೊಳೆಯುವುದೆಲ್ಲಾ ಚಿನ್ನವಲ್ಲ; ರಾಜ್ ಕುಂದ್ರ ಬಗ್ಗೆ ಕಂಗನಾ ವ್ಯಂಗ್ಯ

  |

  ನಟಿ ಕಂಗನಾ ರಣಾವತ್ ಬಾಲಿವುಡ್ ನಲ್ಲಿ ಯಾವುದೇ ಪ್ರಕರಣ ನಡೆದರೂ ಪ್ರತಿಕ್ರಿಯೆ ನೀಡದೆ ಸೈಲೆಂಟಾಗಿ ಇರುವವರು ಅಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಿರುವಾಗ ಬಾಲಿವುಡ್ ಗೆ ಶಾಕ್ ನೀಡಿರುವ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರ ಬಂಧನ ಪ್ರಕರಣದ ಬಗ್ಗೆ ಮೌನ ವಹಿಸಲು ಸಾಧ್ಯವಿಲ್ಲ.

  ಬ್ಲೂ ಫಿಲ್ಮ್ ದಂಧೆ ಆರೋಪದಲ್ಲಿ ಜೈಲು ಸೇರಿರುವ ರಾಜ್ ಕುಂದ್ರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ ರಣಾವತ್, ಇದಕ್ಕೆ ಸಿನಿಮಾರಂಗವನ್ನು 'ಮೋರಿ' ಎಂದು ಹೇಳಿದ್ದು. ಹೊಳೆಯುವುದೆಲ್ಲ ಚಿನ್ನವಲ್ಲ ಎಂದು ವ್ಯಂಗ್ಯವಾಗಿದ್ದಾರೆ. ಸುಶಾಂತ್ ಸಿಂಗ್ ಪ್ರಕರಣದಲ್ಲೂ ಕಂಗನಾ ಬಾಲಿವುಡ್ ಅನ್ನು ಗಟ್ಟರ್ (ಮೋರಿ) ಎಂದು ಕರೆದಿದ್ದರು.

   ಅಪಾರ ಹಣ ಸಂಪಾದನೆ ವಿಚಾರ ಬಹಿರಂಗ ಪಡಿಸಿದ ರಾಜ್ ಕುಂದ್ರ ವಾಟ್ಸಪ್ ಚಾಟ್ ಅಪಾರ ಹಣ ಸಂಪಾದನೆ ವಿಚಾರ ಬಹಿರಂಗ ಪಡಿಸಿದ ರಾಜ್ ಕುಂದ್ರ ವಾಟ್ಸಪ್ ಚಾಟ್

  ಇದೀಗ ಮತ್ತದೆ ಪದ ಬಳಸಿ ಬಾಲಿವುಡ್ ಅನ್ನು ಜರಿದಿದ್ದಾರೆ. ಅಷ್ಟೆಯಲ್ಲ ಮುಂದಿನ ತನ್ನ ನಿರ್ಮಾಣದ ಸಿನಿಮಾದಲ್ಲಿ ಬಾಲಿವುಡ್ ಬಗ್ಗೆ ಬಹಿರಂಗ ಪಡಿಸುವೆ ಎಂದು ಕಂಗನಾ ಹೇಳಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಕಂಗನಾ, "ಇದಕ್ಕೆ ನಾನು ಚಿತ್ರರಂಗವನ್ನು ಗಟ್ಟರ್ ಎಂದು ಕರೆದಿದ್ದು. ಹೊಳೆಯುವುದೆಲ್ಲಾ ಚಿನ್ನವಲ್ಲ. ನನ್ನ ನಿರ್ಮಾಣದಲ್ಲಿ ಬರ್ತಿರುವ ಟಿಕು ವೆಡ್ಸ ಶೆರು ಸಿನಿಮಾದಲ್ಲಿ ಬಾಲಿವುಡ್ ಬಗ್ಗೆ ಬಹಿರಂಗ ಪಡಿಸುವೆ. ಇಂತ ಸೃಜನಶೀಲ ಉದ್ಯಮದಲ್ಲಿ ನಮಗೆ ಬಲವಾದ ಮೌಲ್ಯ ವ್ಯವಸ್ಥೆ ಮತ್ತು ಆತ್ಮಸಾಕ್ಷಿಯ ಅಗತ್ಯವಿದೆ" ಎಂದು ಬರೆದುಕೊಂಡಿದ್ದಾರೆ.

  ಬ್ಲೂ ಫಿಲ್ಮ್ ದಂಧೆ ಆರೋಪದಲ್ಲಿ ರಾಜ್ ಕುಂದ್ರ ಅವರನ್ನು ಮುಂಬೈ ಪೊಲೀಸರು ಜುಲೈ 19ರಂದು ರಾತ್ರಿ ಬಂಧಿಸಿದ್ದರು. ಇದೀಗ ಜುಲೈ 23ರ ವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ರಾಜ್ ಕುಂದ್ರ ಬಂಧನದ ಬಳಿಕ ಸಾಕಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ನೀಲಿ ಚಿತ್ರದಿಂದ ಹೇಗೆಲ್ಲ ವ್ಯವಹಾರ ಮಾಡುತ್ತಿದ್ದರು, ಅಪಾರ ಹಣ ಹೇಗೆ ಸಂಪಾದನೆ ಮಾಡುತ್ತಿದ್ದರು ಎನ್ನುವ ಶಾಕಿಂಗ್ ವಿಚಾರ ಕೂಡ ಬಹಿರಂಗವಾಗಿದೆ.

  ಇನ್ನು ರಾಜ್ ಕುಂದ್ರ ಬಗ್ಗೆ ಅಡಲ್ಟ್ ಸ್ಟಾರ್ ಪೂನಂ ಪಾಂಡೆ ಸೆಕ್ಸ್ ರಾಕೆಟ್ ನ ಮಾಸ್ಟರ್ ಮೈಂಡ್ ಎಂದು ಆರೋಪಿಸಿದ್ದಾರೆ ಎನ್ನುವ ಆಂಗ್ಲ ವೆಬ್ ಪೋರ್ಟಲ್ ಗಳು ವರದಿಮಾಡಿವೆ. ಕಳೆದ ವರ್ಷದಿಂದ ಅಶ್ಲೀಲ ಚಿತ್ರೀಕರಣ ದಂಧೆಯ ಹಿಂದೆ ಬಿದ್ದಿದ್ದ ಪೊಲೀಸರು ದೊಡ್ಡ ಜಾಲವನ್ನು ಪತ್ತೆ ಮಾಡಿ 9 ಜನರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಯಾರೆಲ್ಲಾ ಇದ್ದಾರೆ ಎನ್ನುವುದು ಕೆಲವು ದಿನಗಳಲ್ಲಿ ಬಹಿರಂಗವಾಲಿದೆ.

  English summary
  Actress Kangana Ranaut reacts to Raj Kundra's arrest, she says all that glitter is not gold.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X