For Quick Alerts
  ALLOW NOTIFICATIONS  
  For Daily Alerts

  ಕಂಗನಾ ರಿಜೆಕ್ಟ್ ಮಾಡಿದ್ದ ಈ ಐದು ಸಿನಿಮಾಗಳು ಸೂಪರ್ ಹಿಟ್

  |

  ಮೂರು ಬಾರಿ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ನಟಿ ಕಂಗನಾ ರಣಾವತ್ ಬಾಲಿವುಡ್ ನ ಯಶಸ್ವಿ ನಟಿ. ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ಕಂಗನಾ ಪ್ರತಿಯೊಂದು ಸಿನಿಮಾದಲ್ಲಿಯೂ ವಿಶಿಷ್ಟವಾದ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ.

  ಬಾಲಿವುಡ್ ನ ಈ ಟ್ಯಾಲೆಂಟೆಡ್ ನಟಿ ಸದ್ಯ 'ಮೆಂಟಲ್ ಹೇ ಕ್ಯಾ' ಮತ್ತು 'ಪಂಗ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಯೋಪಿಕ್ ನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

  'ಮಣಿಕರ್ಣಿಕಾ' ಚಿತ್ರದ ಸಕ್ಸಸ್ ನಲ್ಲಿರುವ ಕಂಗನಾ ಪಾತ್ರಗಳನ್ನು ಅಳೆದು ತೂಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಕಂಗನಾ ಲೆಕ್ಕಾಚಾರ ಉಲ್ಟಾ ಆಗಿದ್ದು ಇದೆ. ಯಾಕೆಂದರೆ ಬಾಲಿವುಡ್ ನ ಐದು ಮೋಸ್ಟ್ ಸಕ್ಸಸ್ ಫುಲ್ ಸಿನಿಮಾಗಳನ್ನು ರಿಜೆಕ್ಟ್ ಮಾಡಿ ನಂತರ ಹೊಟ್ಟೆ ಉರಿಸಿಕೊಂಡಿದ್ದಾರೆ ಕಂಗನಾ. ಆ ಐದು ಸಿನಿಮಾಗಳು ಯಾವುದು?ಮುಂದೆ ಓದಿ.

  Big News: ಜಯಲಲಿತಾ ಬಗ್ಗೆ ಇನ್ನೊಂದು ಬಯೋಪಿಕ್: 'ಅಮ್ಮ'ನ ಪಾತ್ರದಲ್ಲಿ ಖ್ಯಾತ ನಟಿ

  ಡರ್ಟಿ ಗರ್ಲ್ ಆಗಲ್ಲ ಎಂದಿದ್ದರು ಕಂಗನಾ

  ಡರ್ಟಿ ಗರ್ಲ್ ಆಗಲ್ಲ ಎಂದಿದ್ದರು ಕಂಗನಾ

  2011ರಲ್ಲಿ ರಿಲೀಸ್ ಆಗಿದ್ದ 'ದಿ ಡರ್ಟಿ ಪಿಕ್ಚರ್' ಸಿನಿಮಾಗೆ ಮೊದಲು ಕಂಗನಾ ಗೆ ಆಫರ್ ಮಾಡಲಾಗಿತ್ತಂತೆ. ಫ್ಯಾಷನ್ ಬೆಡಗಿ ನೋ ಅಂದ ಕಾರಣಕ್ಕೆ ವಿದ್ಯಾ ಬಾಲನ್ ಕಾಣಿಸಿಕೊಂಡಿದ್ದರು. ಸೌತ್ ಸಿನಿ ಇಂಡಸ್ಟ್ರಿಯ ಖ್ಯಾತ ನಟಿ ಸಿಲ್ಕ್ ಸ್ಮಿತಾ ಅವರ ಜೀವನಾಧರಿತ ಸಿನಿಮಾ ಇದಾಗಿತ್ತು. ಏಕ್ತಾ ಕಪೂರ್ ನಿರ್ಮಾಣದಲ್ಲಿ ಮೂಡಿಬಂದ 'ದಿ ಡರ್ಟಿ ಪಿಕ್ಚರ್' ಬಾಲಿವುಡ್ ನಲ್ಲಿ ದೊಡ್ಡ ಯಶಸ್ಸು ಕಂಡಿತ್ತು.

  ಭಾಯಿಜಾನ್ ಸಿನಿಮಾ ರಿಜೆಕ್ಟ್ ಮಾಡಿದ್ದ ಕ್ವೀನ್

  ಭಾಯಿಜಾನ್ ಸಿನಿಮಾ ರಿಜೆಕ್ಟ್ ಮಾಡಿದ್ದ ಕ್ವೀನ್

  2016ರಲ್ಲಿ ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿದ್ದ 'ಭಜರಂಗಿ ಭಾಯಿಜಾನ್' ಚಿತ್ರವನ್ನು ತಿರಸ್ಕರಿಸಿದ್ರಂತೆ ಕಂಗನಾ. ನಿರ್ದೇಶಕ ಕಬೀರ್ ಖಾನ್, ಚಿತ್ರದ ನಾಯಕಿ ಪಾತ್ರವನ್ನು ಕಂಗನಾ ಮಾಡಿದ್ರೆ ಚೆನ್ನಾಗಿರುತ್ತೆ ಎಂದು ಈ ಸಿನಿಮಾ ಆಫರ್ ಕಂಗನಾ ಮುಂದಿಟ್ಟರೆ, ಗಂಭೀರವಾಗಿ ಯೋಚಿಸದ ಕಂಗನಾ ನೋ ಅಂದಿದ್ರಂತೆ. ನಂತರ ಕರೀನಾ ಕಪೂರ್ ಸಲ್ಲು ಜೊತೆ ಡುಯೇಟ್ ಹಾಡಿದ್ರು.

  ಹೃತಿಕ್ ರೋಷನ್ ವಿರುದ್ಧ ಸಿಡಿದೆದ್ದ ಕಂಗನಾ ರಣೌತ್.!

  ಮತ್ತೊಮ್ಮೆ ಸಲ್ಲು ಸಿನಿಮಾ ರಿಜೆಕ್ಟ್ ಮಾಡಿದ ಕಂಗನಾ

  ಮತ್ತೊಮ್ಮೆ ಸಲ್ಲು ಸಿನಿಮಾ ರಿಜೆಕ್ಟ್ ಮಾಡಿದ ಕಂಗನಾ

  ಬಾಕ್ಸಾಫಿಸ್ ಸುಲ್ತಾನ್ ಸಲ್ಮಾನ್ ಖಾನ್ ಜೊತೆ ಅಭಿನಯಿಸಲು ಮತ್ತೊಮ್ಮೆ ಅವಕಾಶ ಸಿಕ್ಕಿದ್ದರು ಸಹ ಆ ಅದನ್ನು ರಿಜೆಕ್ಟ್ ಮಾಡಿದ್ದರು ಕಂಗನಾ. 2016ರಲ್ಲಿ ರಿಲೀಸ್ ಆದ ಅಲಿ ಅಬ್ಬಾಸ್ ಜಫರ್ ನಿರ್ದೇಶನದ 'ಸುಲ್ತಾನ್' ಚಿತ್ರದ ನಾಯಕಿ ಪಾತ್ರಕ್ಕೆ ಮೊದಲು ಕಂಗನಾ ಅವರನ್ನು ಕೇಳಲಾಗಿತ್ತಂತೆ. ಆದರೆ ಕಂಗನಾ ನಿರಾಕರಿಸದ ಕಾರಣ ಆ ಪಾತ್ರವನ್ನ ಅನುಷ್ಕಾ ಶರ್ಮಾ ಮಾಡಿ ಸೈ ಎನಿಸಿಕೊಂಡರು. ಈ ಚಿತ್ರವೂ ಸೂಪರ್ ಹಿಟ್ ಆಯಿತು.

  ಅಕ್ಷಯ್ ಕುಮಾರ್ ಸಿನಿಮಾ ಬಿಟ್ಟ ಕಂಗನಾ

  ಅಕ್ಷಯ್ ಕುಮಾರ್ ಸಿನಿಮಾ ಬಿಟ್ಟ ಕಂಗನಾ

  2016ರಲ್ಲಿ ರಿಲೀಸ್ ಆಗಿದ್ದ ಬಾಲಿವುಡ್ ನ ಮತ್ತೊಂದು ಹಿಟ್ ಸಿನಿಮಾ 'ಏರ್ ಲಿಫ್ಟ್'. ಈ ಸಿನಿಮಾದಲ್ಲೂ ಅಭಿನಯಿಸಲ್ಲ ಎಂದಿದ್ದರಂತೆ ಕಂಗನಾ. ಬೇರೆ ಪ್ರಾಜೆಕ್ಟ್ ನಲ್ಲಿ ಬ್ಯುಸಿ ಇದ್ದ ಕಾರಣ ಏರ್ ಲಿಫ್ಟ್ ನಲ್ಲಿ ಅಭಿನಯಿಸಲು ಸಾಧ್ಯವಿಲ್ಲ ಎಂದು ತಿರಸ್ಕರಿಸಿದ್ದರಂತೆ ಕಂಗನಾ. ನಂತರ ಕಂಗನಾ ಪಾತ್ರದಲ್ಲಿ ನಿಮ್ರತ್ ಕೌರ್ ಕಾಣಿಸಿಕೊಂಡಿದ್ದರು.

  ಸಂಜು ಮಿಸ್ ಮಾಡಿಕೊಂಡ ಕಂಗನಾ

  ಸಂಜು ಮಿಸ್ ಮಾಡಿಕೊಂಡ ಕಂಗನಾ

  ಒಂದೇ ವರ್ಷದಲ್ಲಿ ಮೂರು ಸೂಪರ್ ಹಿಟ್ ಸಿನಿಮಾ ರಿಜೆಕ್ಟ್ ಮಾಡಿದ್ದ ಕಂಗನಾ, ಮತ್ತದೆ ತಪ್ಪನ್ನು 'ಸಂಜು' ಸಿನಿಮಾ ವಿಚಾರದಲ್ಲೂ ಮಾಡಿದ್ರು. 2018ರಲ್ಲಿ ರಿಲೀಸ್ ಆದ ರಣಬೀರ್ ಅಭಿನಯದ 'ಸಂಜು' ಸಿನಿಮಾದಲ್ಲಿ ಮಾನ್ಯತಾ ದತ್ ಪಾತ್ರಕ್ಕೆ ಕಂಗನಾ ಅವರನ್ನು ಆಫರ್ ಮಾಡಲಾಗಿತ್ತಂತೆ. ಆದರೆ ಕಂಗನಾ ಒಪ್ಪಲಿಲ್ಲ. ಕೊನೆಗೂ ಆ ಸಿನಿಮಾನೂ ಬಹುದೊಡ್ಡ ಯಶಸ್ಸು ಪಡೆಯಿತು.

  Read more about: ಬಾಲಿವುಡ್
  English summary
  Bollywood successful actress Kangana Ranaut rejected 5 blockbuster movies. Kangana rectect 3 hit movie offer in 2016, and two movies of Salman Khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X