ಟ್ವಿಟ್ಟರ್ ನಲ್ಲಿ ಸೈಲೆಂಟ್ ಆಗಿರಿ ಎಂದವರಿಗೆ ಖಡಕ್ ಉತ್ತರ ಕೊಟ್ಟ ನಟಿ ಕಂಗನಾ

ಬಾಲಿವುಡ್ ನಟಿ ಕಂಗನಾ ರಣಾವತ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಪ್ರತಿಯೊಂದು ವಿಚಾರವನ್ನು ಕಂಗನಾ ಟ್ವಿಟ್ಟರ್ ಮೂಲಕವೇ ವ್ಯಕ್ತಪಡಿಸುತ್ತಿರುತ್ತಾರೆ. ಯಾವುದೇ ಭಯವಿಲ್ಲದೆ, ಧೈರ್ಯವಾಗಿ ತನ್ನ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ.

ಕಂಗನಾ ಅವರ ನೇರ ನುಡಿ ಅನೇಕರಿಗೆ ಕಿರಿಕಿರಿ ಉಂಟು ಮಾಡಿದ್ದು ಇದೆ. ಅಲ್ಲದೆ ಕೆಲವೊಮ್ಮೆ ಅಗ್ರೆಸಿವ್ ಆಗಿ ಮಾಡುವ ಟ್ವೀಟ್ ವಿವಾದವನ್ನು ಸೃಷ್ಟಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಕಂಗನಾ ಆಕ್ಟೀವ್ ಆಗಿರುವುದನ್ನು ನೋಡಿ ಅನೇಕರು ಸೈಲೆಂಟ್ ಆಗಿರುವಂತೆ ಹೇಳುತ್ತಿದ್ದಾರೆ.

ಟ್ವಿಟ್ಟರ್ ನಲ್ಲಿ ಸೈಲೆಂಟ್ ಆಗಿ ಎಂದವರಿಗೆ ಕಂಗನಾ ಖಡಕ್ ಉತ್ತರ ನೀಡಿದ್ದಾರೆ. ತನ್ನ ಟ್ವೀಟ್ ಇಷ್ಟವಾಗದಿದ್ದರೆ ಬ್ಲೋಕ್ ಮಾಡಿ, ಇಲ್ಲವಾದರೆ ಅನ್ ಫಾಲೋ ಮಾಡಿ ಎಂದು ಹೇಳುವ ಮೂಲಕ ಸೈಲೆಂಟ್ ಆಗಿರಿ ಎಂದವರ ಬಾಯಿ ಮುಚ್ಚಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕಂಗನಾ,

 Kangana Ranaut Responds To Who Ask Her To Stay Quiet On Twitter

'ದಿನವಿಡೀ ನನ್ನ ಟ್ವೀಟ್ ಗಳನ್ನು ನೋಡುತ್ತಿರುವವರು ಇದರಿಂದ ಬೇಸರ ಮತ್ತು ದಣಿವಾಗಿದೆ ಎನ್ನುವ ನನ್ನ ಅಭಿಮಾನಿಗಳಿಗೆ ಹಾಗೂ ನಾನು ಸೈಲೆಂಟ್ ಆಗಿ ಎಂದು ಹೇಳುವವರು ನನ್ನನ್ನು ಅನ್ ಫಾಲೋ, ಮ್ಯೂಟ್ ಅಥವಾ ಬ್ಲೋಕ್ ಮಾಡಬಹುದು. ಹಾಗೆ ಮಾಡಿಲ್ಲ ಎಂದರೆ ನೀವು ನನ್ನ ಟ್ವೀಟ್ ನ ಗೀಳು ಹತ್ತಿಸಿಕೊಂಡಿದ್ದೀರಿ ಎಂದರ್ಥ' ಎಂದು ಹೇಳಿದ್ದಾರೆ.

ಇತ್ತೀಚಿಗೆ ಕಂಗನಾ ಅಮೆರಿಕ ಚುನಾವಣೆ ಫಲಿತಾಂಶದ ಬಳಿಕ ಟ್ವೀಟ್ ಮಾಡಿ 'ಜೋ ಬೈಡನ್ ಒಬ್ಬ ಗಜಿನಿ, ಪ್ರತಿ ಐದು ನಿಮಿಷಕ್ಕೂ ತನ್ನ ಡೇಟಾ ಕ್ರ್ಯಾಶ್ ಆಗುತ್ತದೆ' ಎಂದು ಟೀಕಿಸಿದ್ದರು. 'ಬೈಡನ್ ಗೆ ನೀಡಿದ ಎಲ್ಲಾ ಔಷಧಿಗಳು ಪರಿಣಾಮಕಾರಿಯಾಗಿಲ್ಲ, ಒಂದು ವರ್ಷಕ್ಕಿಂತ ಹೆಚ್ಚು ಕಾಲ ಇದು ಕೆಲಸ ಮಾಡಲ್ಲ. ನಿಶ್ಚಿತವಾಗಿ ಕಮಲಾ ಹ್ಯಾರೀಸ್ ನಿಜವಾದ ಅಧ್ಯಕ್ಷೆ' ಎಂದು ಕಂಗನಾ ಹೇಳಿದ್ದರು.

ಸಿನಿಮಾ ವಿಚಾರಕ್ಕೆ ಬರುವುದಾದರೆ ಕಂಗನಾ ತಲೈವಿ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಳಿಸಿದ್ದಾರೆ. ಇನ್ನೂ ತೇಜಸ್ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ. ಇತ್ತೀಚಿಗೆ ಈ ಸಿನಿಮಾಗಾಗಿ ಸಜ್ಜಾಗುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.

More from Filmibeat

English summary
Bollywood Actress Kangana Ranaut respone to who ask her to stay quiet on Twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X