ಖ್ಯಾತ ನಿರ್ದೇಶಕ ವಿಕಾಸ್ ಭಾಲ್ ಮುಖವಾಡ ಕಳಚಿದ ಕಂಗನಾ.!
ಬಾಲಿವುಡ್ ನಲ್ಲಿ ಒಂದೊಂದೆ ಲೈಂಗಿಕ ಕಿರುಕುಳದ ಆರೋಪಗಳು ಹೊರ ಬೀಳುತ್ತಿದೆ. ಖ್ಯಾತ ನಿರ್ದೇಶಕ, ನಿರ್ಮಾಪಕ ಹಾಗೂ ನಟರ ಹೆಸರುಗಳು ಈ ವಿವಾದದಲ್ಲಿ ಸಿಲುಕಿಕೊಳ್ಳುತ್ತಿರುವುದು ನಿಜಕ್ಕೂ ಆಶ್ಚರ್ಯ ಉಂಟು ಮಾಡುತ್ತಿದೆ.
ತನುಶ್ರೀ ದತ್ತಾ ಅವರು ನಾನಾ ಪಾಟೇಕರ್, ವಿವೇಕ್ ಅಗ್ನಿಹೋತ್ರಿ ಮೇಲೆ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ್ದರು. ಇದೀಗ, ಕ್ವೀನ್ ನಟಿ ಕಂಗನಾ ನಿರ್ದೇಶಕ ವಿಕಾಸ್ ಭಾಲ್ ಮುಖವಾಡ ಕಳಚಿದ್ದಾರೆ.
2015ರಲ್ಲಿ 'ಬಾಂಬೆ ವೆಲ್ವೆಟ್' ಚಿತ್ರದ ವೇಳೆ ನಿರ್ದೇಶಕ ವಿವಾಸ್ ಭಾಲ್ ನನ್ನ ಮೇಲೆ ಲೈಂಗಿಕಿ ಕಿರುಕುಳ ನೀಡಿದ್ದರು ಎಂದು ಅವರ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಆರೋಪಿಸಿದ್ದರು. ಆ ಯುವತಿಗೆ ಬೆಂಬಲ ಸೂಚಿಸಿರುವ ನಟಿ ಕಂಗನಾ ವಿಕಾಸ್ ದೌರ್ಜನ್ಯ ಮಾಡಿರ್ತಾರೆ ಎಂದಿದ್ದಾರೆ.

ಆ ಮಹಿಳೆ ಮಾಡಿರುವ ಆರೋಪದಲ್ಲಿ ಶೇ.100ರಷ್ಟು ಸತ್ಯವಿದೆ. ಅಲ್ಲದೇ ವಿಕಾಸ್ ನಿಂದ ನಾನು ಕೂಡ ಅದೇ ರೀತಿಯ ತೊಂದರೆಗೆ ಒಳಗಾಗಿದ್ದೇನೆ. 'ಕ್ವೀನ್' ಚಿತ್ರದ ವೇಳೆ ನನ್ನನ್ನು ಹಲವು ಬಾರಿ ಬಿಗಿಯಾಗಿ ತಬ್ಬಿಕೊಂಡಿದ್ದರು. ನನ್ನ ತಲೆ ಕೂದಲನ್ನ ಸ್ಮೆಲ್ ಮಾಡಿದ್ರು. ನಿನ್ನ ಸ್ಮೆಲಗ್ ಕಂಡ್ರೆ ನನಗೆ ತುಂಬಾ ಇಷ್ಟ ಎನ್ನುತ್ತಿದ್ದರು. ಅವರಿಂದ ಬಿಡಿಸಿಕೊಳ್ಳಲು ತುಂಬಾ ಕಷ್ಟ ಪಡ್ತಿದ್ದೆ. ಅವರಲ್ಲಿ ಏನೋ ಸಮಸ್ಯೆ ಇದೆ'' ಎಂದು ಹೇಳಿಕೊಂಡಿದ್ದಾರೆ.


Click it and Unblock the Notifications











