For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್‌ರಿಂದ ಕಂಗನಾಗೆ ರಹಸ್ಯ ಸಂದೇಶ: ಅಸಮಾಧಾನ ಹೊರಹಾಕಿದ ನಟಿ

  |

  ಬಾಲಿವುಡ್ ನಟಿ ಕಂಗನಾ ರಣಾವತ್ ವಿವಾದಗಳ ಮೂಲಕವೇ ಹೆಚ್ಚು ಸದ್ದು ಮಾಡಿದವರು. ನೆಪೋಟಿಸಂ, ಗ್ರೂಪಿಸಂ ಅಂತ ಬಾಲಿವುಡ್ ವಿರುದ್ಧ ತಿರುಗಿ ಬಿದ್ದಿರುವ ಕಂಗನಾ ಆಗಾಗ ಕೆಲವರ ವಿರುದ್ಧ ಸಿಡಿದೇಳುತ್ತಿರುತ್ತಾರೆ.

  ವಿವಾದಗಳ ಜೊತೆಗೆ ಕಂಗನಾ ಕೆಲವು ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯ ಕ್ವೀನ್ ನಟಿ ಬಹುನಿರೀಕ್ಷೆಯ ತಲೈವಿ ಸಿನಿಮಾದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಕಂಗನಾಗೆ ಸಾಥ್ ನೀಡಿದ ನಟಿ ಸಮಂತಾ; ಬಾಲಿವುಡ್ 'ಕ್ವೀನ್' ಹೇಳಿದ್ದೇನು?ಕಂಗನಾಗೆ ಸಾಥ್ ನೀಡಿದ ನಟಿ ಸಮಂತಾ; ಬಾಲಿವುಡ್ 'ಕ್ವೀನ್' ಹೇಳಿದ್ದೇನು?

  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಯೋಪಿಕ್‌ನಲ್ಲಿ ಕಾಣಿಸಿಕೊಂಡಿರುವ ನಟಿ ಕಂಗನಾಗೆ ಹಲವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಚಾರವಾಗಿ ಅನೇಕ ಬಾಲಿವುಡ್ ಸ್ಟಾರ್ ನಟರಿಂದ ರಹಸ್ಯ ಕರೆ ಬರುತ್ತಿರುವ ಬಗ್ಗೆ ಕಂಗನಾ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...

  ಬಾಲಿವುಡ್ ಸ್ಟಾರ್‌ಗಳಿಂದ ಕಂಗನಾಗೆ ರಹಸ್ಯ ಕರೆ

  ಬಾಲಿವುಡ್ ಸ್ಟಾರ್‌ಗಳಿಂದ ಕಂಗನಾಗೆ ರಹಸ್ಯ ಕರೆ

  ಕಳೆದ ತಿಂಗಳು ಬಿಡುಗಡೆಯಾಗಿರುವ ತಲೈವಿ ಸಿನಿಮಾದ ಟ್ರೈಲರ್‌ಗೆ ಜನರಿಂದ ಮಾತ್ರವಲ್ಲದೇ ಬಾಲಿವುಡ್ ಸ್ಟಾರ್‌ಗಳಿಂದಲೂ ಹೊಗಳಿಕೆ ಕರೆಗಳು ಬರುತ್ತಿವೆ ಎಂದಿದ್ದಾರೆ. ಆದರೆ ಈ ಕರೆಗಳು ರಹಸ್ಯವಾಗಿದೆ ಎಂದು ಹೇಳಿದ್ದಾರೆ. ಇಡೀ ಬಾಲಿವುಡ್ ಅನ್ನೇ ವಿರೋಧ ಕಟ್ಟಿಕೊಂಡಿದ್ದರೂ ಸಹ ಕೆಲವು ಸ್ಟಾರ್ ಕಲಾವಿದರು ಕಂಗನಾಗೆ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  ಅಕ್ಷಯ್ ಹೊಗಳಿದರೂ ಅಸಮಾಧಾನ ಹೊರಹಾಕಿದ ಕಂಗನಾ

  ಅಕ್ಷಯ್ ಹೊಗಳಿದರೂ ಅಸಮಾಧಾನ ಹೊರಹಾಕಿದ ಕಂಗನಾ

  ನಟ ಅಕ್ಷಯ್ ಕುಮಾರ್ ಸೇರಿದಂತೆ ಅನೇಕರಿಂದ ತಲೈವಿಗೆ ಹೊಗಳಿಕೆ ಕರೆಗಳು ಬಂದಿವೆ. ಆದರೂ ಕಂಗನಾ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ, 'ಬಾಲಿವುಡ್ ನಲ್ಲಿ ಎಂಥ ಸಂದಿಗ್ಧ ವಾತಾವರಣವಿದೆ ಎಂದರೆ ನನ್ನನ್ನು ಬಹಿರಂಗವಾಗಿ ಹೊಗಳದರೂ ಸಹ ತೊಂದರೆಗೆ ಸಿಲುಕುತ್ತೇವೆ ಎಂದು ಭಾವಿಸಿದ್ದಾರೆ. ದೊಡ್ಡ ತಾರೆಯರಿಂದಲೂ ನನಗೆ ಅನೇಕ ರಹಸ್ಯ ಕರೆಗಳು ಬಂದಿವೆ. ಅಕ್ಷಯ್ ಕುಮಾರ್ ಕೂಡ ರಹಸ್ಯ ಕರೆ ಮಾಡಿ ತಲೈವಿ ಟ್ರೈಲರ್ ಹೊಗಳಿದ್ದಾರೆ. ಅಲಿಯಾ ಅಥವಾ ದೀಪಿಕಾ ಅವರನ್ನು ಹೊಗಳಿದಂತೆ ನನ್ನನ್ನು ಬಹಿರಂಗವಾಗಿ ಹೊಗಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇದು ಸಿನಿಮಾ ಮಾಫಿಯಾದ ಭಯೋತ್ಪಾದನೆ' ಎಂದು ಹೇಳಿದ್ದಾರೆ.

  ನಾನು ಬೇಡವಾದ ಹೆಣ್ಣು ಮಗುವಾಗಿದ್ದೆ: ಕಂಗನಾ ಹೇಳಿದ ಯಶಸ್ಸಿನ ಕತೆನಾನು ಬೇಡವಾದ ಹೆಣ್ಣು ಮಗುವಾಗಿದ್ದೆ: ಕಂಗನಾ ಹೇಳಿದ ಯಶಸ್ಸಿನ ಕತೆ

  ಜಯಲಲಿತಾ ಪಾತ್ರದಲ್ಲಿ ಕಂಗನಾ ನಟನೆ

  ಜಯಲಲಿತಾ ಪಾತ್ರದಲ್ಲಿ ಕಂಗನಾ ನಟನೆ

  ತಲೈವಿ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಮತ್ತು ಹಾಡಿನಲ್ಲಿ ಕಂಗನಾ ಚಿತ್ರಪ್ರಿಯರ ಹೃದಯ ಗೆದ್ದಿದ್ದಾರೆ. ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಜಯಲಲಿತಾ ಆಗಿ ಕಾಣಿಸಿಕೊಂಡಿರುವ ಕಂಗನಾ ನೋಡಲು ಕಾತರರಾಗಿದ್ದಾರೆ.

  ಪತ್ನಿಯ ಶಕ್ತಿ ನೋಡಿ ಕೊಹ್ಲಿ ಶಾಕ್:ಬಾಹುಬಲಿಯಾದ ಅನುಷ್ಕಾ | Filmibeat Kannada
  ಏಪ್ರಿಲ್ 23ಕ್ಕೆ ಸಿನಿಮಾ ಬಿಡುಗಡೆ

  ಏಪ್ರಿಲ್ 23ಕ್ಕೆ ಸಿನಿಮಾ ಬಿಡುಗಡೆ

  ಏಪ್ರಿಲ್ 23ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಪ್ರಕಾಶ್ ರಾಜ್, ಭಾಗ್ಯಶ್ರೀ, ಮಧುಬಾಲಾ, ಅರವಿಂದ್ ಸೇರಿದಂತೆ ದೊಡ್ಡ ತಾರಾಬಳಗವೆ ಇದೆ. ಚಿತ್ರಕ್ಕೆ ನಿರ್ದೇಶಕ ವಿಜಯ್ ಆಕ್ಷನ್ ಕಟ್ ಹೇಳಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದಿದ್ದಾರೆ.

  English summary
  Bollywood Actress Kangana Ranaut reveals she got secret call from Akshay Kumar and others.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X