twitter
    For Quick Alerts
    ALLOW NOTIFICATIONS  
    For Daily Alerts

    ಪಂಜಾಬ್‌ನಲ್ಲಿ ಕಂಗನಾ ಕಾರು ತಡೆದ ಪ್ರತಿಭಟನಾಕಾರರು, ಕೊಲೆ ಯತ್ನ ಎಂದ ನಟಿ

    |

    ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ಐತಿಹಾಸಿಕ ಪ್ರತಿಭಟನೆ ನಡೆಸಿದ ರೈತರನ್ನು ಭಯೋತ್ಪಾದಕರು, ಖಲಿಸ್ತಾನಿ ಉಗ್ರರು ಎಂದು ಕರೆದಿದ್ದ ನಟಿ ಕಂಗನಾ ರನೌತ್‌ರ ಕಾರನ್ನು ಇಂದು ಪಂಜಾಬ್‌ನಲ್ಲಿ ಅಡ್ಡಗಟ್ಟಿ ಕ್ಷಮೆಗೆ ಒತ್ತಾಯಿಸಲಾಗಿದೆ.

    ಪಂಜಾಬಿನ ಕೀರತ್‌ಪುರ್ ಸಾಹೀಬ್‌ನಲ್ಲಿ ನಟಿ ಕಂಗನಾ ತಮ್ಮ ಭದ್ರತಾ ಸಿಬ್ಬಂದಿಯ ಜೊತೆಗೆ ಬರುತ್ತಿರುವ ಸಂದರ್ಭದಲ್ಲಿ ಕೆಲವು ಪ್ರತಿಭಟನಾಕಾರರು ಕಾರನ್ನು ಅಡ್ಡಗಟ್ಟಿದ್ದು, ನಟಿಯ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಕಂಗನಾ ಕ್ಷಮಾಪಣೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ಕಂಗನಾರನ್ನು ಸುರಕ್ಷಿತವಾಗಿ ಪ್ರತಿಭಟನಾ ಸ್ಥಳದಿಂದ ಕಳುಹಿಸಲಾಗಿದೆ.

    ಘಟನಾ ಸ್ಥಳದಿಂದಲೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪ್ರಕಟಿಸಿರುವ ನಟಿ ಕಂಗನಾ ರನೌತ್, ''ರೈತರು ಎಂದು ಹೇಳಿಕೊಳ್ಳುತ್ತಿರುವ ಗುಂಪೊಂದು ನನ್ನ ಕಾರಿನ ಮೇಲೆ ದಾಳಿ ಮಾಡಿದೆ. ಪೊಲೀಸರು ಇಲ್ಲದೇ ಇದ್ದಿದ್ದರೆ ನನ್ನ ಹತ್ಯೆ ಮಾಡುತ್ತಿದ್ದರು. ಹಾಡು ಹಗಲೇ ಸಾಮೂಹಿಕ ಹತ್ಯೆ ನಡೆಸಲು ಯತ್ನಿಸಲಾಗುತ್ತಿದೆ. ಇಷ್ಟು ಜನ ಪೊಲೀಸರು ಇದ್ದೂ ಸಹ ನನ್ನ ಕಾರನ್ನು ಮುಂದೆ ಹೋಗಲು ಇವರು ಬಿಡುತ್ತಿಲ್ಲ'' ಎಂದಿದ್ದಾರೆ ಕಂಗನಾ.

    Kangana Ranauts Car Has Been Stopped By Protesters, Demand Apology

    ''ನನ್ನ ಕಾರನ್ನು ಮುಂದೆ ಹೋಗಲು ಬಿಡುತ್ತಿಲ್ಲ. ನಾನೇನು ರಾಜಕೀಯ ವ್ಯಕ್ತಿಯೇ? ನನ್ನ ಹೆಸರಿನಲ್ಲಿ ರಾಜಕೀಯ ಮಾಡಲಾಗುತ್ತಿದೆ. ನನ್ನ ಮೇಲೆ ಉದ್ದೇಶಪೂರ್ವಕವಾಗಿ ಈ ದಾಳಿ ಮಾಡಲಾಗಿದೆ. ಈ ಜನಗಳಿಗೆ ನಾಚಿಕೆ ಆಗಬೇಕು'' ಎಂದಿದ್ದಾರೆ ಕಂಗನಾ.

    ಆ ಬಳಿಕ ಪ್ರತಿಭಟನಾ ನಿರತ ಮಹಿಳೆಯೊಬ್ಬರ ಬಳಿ ಕಾರಿನಲ್ಲಿ ಕುಳಿತುಕೊಂಡೇ ಮಾತನಾಡಿದ ಕಂಗನಾ, ''ನಾನು ಶಾಹೀನ್‌ಬಾಗ್ ಪ್ರತಿಭಟನಾಕಾರರ ಬಗ್ಗೆ ಮಾತನಾಡಿದ್ದೇನೆ, ನಿಮ್ಮ ಬಗ್ಗೆ ಅಲ್ಲ'' ಎಂದು ಸುಳ್ಳು ಹೇಳುತ್ತಿರುವ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ನಟಿ ಕಂಗನಾ ಹಲವು ಪೋಸ್ಟ್‌ಗಳಲ್ಲಿ ದೆಹಲಿಯಲ್ಲಿ ಪ್ರತಿಭಟನೆ ಮಾಡಿದ ರೈತರನ್ನು, ರೈತ ಮಹಿಳೆಯರನ್ನು ಭಯೋತ್ಪಾದಕರೆಂದು, ಖಲಿಸ್ಥಾನಿ ಉಗ್ರರೆಂದು ಕರೆದಿದ್ದರು.

    ಆ ನಂತರ ಮತ್ತೊಂದು ವಿಡಿಯೋ ಪ್ರಕಟಿಸಿದ ಕಂಗನಾ, ''ಈಗ ನಾನು ಆ ಇಕ್ಕಟ್ಟಿನ ಸನ್ನಿವೇಶದಿಂದ ಸುರಕ್ಷಿತವಾಗಿ ಹೊರಗೆ ಬಂದಿದ್ದೇನೆ. ನನ್ನ ಕ್ಷೇಮಕ್ಕಾಗಿ ಪ್ರಾರ್ಥಿಸಿದವರಿಗೆ, ನನ್ನ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದವರಿಗೆ ಧನ್ಯವಾದ. ನಾನು ಈಗ ಕ್ಷೇಮವಾಗಿ ಅಲ್ಲಿಂದ ತೆರಳಿದ್ದೇನೆ. ನಾನು ನನ್ನ ಭದ್ರತಾ ಸಿಬ್ಬಂದಿಗೆ, ಪಂಜಾಬ್ ಪೊಲೀಸ್‌ಗೆ ಹಾಗೂ ಸಿಆರ್‌ಪಿಎಫ್‌ಗೆ ಧನ್ಯವಾದ ಹೇಳುತ್ತೇನೆ'' ಎಂದಿದ್ದಾರೆ ಕಂಗನಾ.

    ಕೆಲ ಹೊತ್ತಿನ ನಂತರ ಮತ್ತೊಂದು ಪೋಸ್ಟ್ ಹಾಕಿದ ಕಂಗನಾ, ''ನಾನು ಕ್ಷಮೆ ಕೇಳುವಂತೆ ಯಾರೂ ಒತ್ತಾಯಿಸಿಲ್ಲ. ನಾನೂ ಸಹ ಯಾರಿಗೂ ಕ್ಷಮೆ ಕೇಳಿಲ್ಲ. ನಾನು ಪಂಜಾಬ್ ಜನರ ಪರವಾಗಿ ಮಾತನಾಡಿದೆ, ಮುಂದೆಯೂ ಮಾತನಾಡುತ್ತೇನೆ ಹಾಗಾಗಿ ನಾನು ಕ್ಷಮೆ ಕೇಳುವ ಅಗತ್ಯವಿಲ್ಲ. ಪ್ರತಿಭಟನಾ ನಿರತ ಮಹಿಳೆಯೊಂದಿಗೆ ನಾನು ಮಾತನಾಡಿದ ವಿಡಿಯೋ ಇದೆ. ನಾನು ಎಲ್ಲಿಯೂ ಕ್ಷಮಾಪಣೆ ಕೇಳಿಲ್ಲ. ನಾನು ರೈತರ ಪರ ಕಾಳಜಿ ಹೊಂದಿರುವವಳಾಗಿದ್ದೇನೆ ಹಾಗಾಗಿಯೇ ಕೃಷಿ ಕಾಯ್ದೆಯ ಪರವಾಗಿ ಮಾತನಾಡಿದ್ದೇ'' ಎಂದಿದ್ದಾರೆ ಕಂಗನಾ ರನೌತ್.

    ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯ ವಿರುದ್ಧ ಪಂಜಾಬ್‌ ರೈತರ ಮುಂದಾಳತ್ವದಲ್ಲಿ ನಡೆದ ಪ್ರತಿಭಟನೆಗೆ ಮಣಿದು ಪ್ರಧಾನಿ ಮೋದಿಯವರು ಕೃಷಿ ಕಾಯ್ದೆಗಳನ್ನು ಹಿಂಪಡೆದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಕಂಗನಾ, ''ಇಂದು ಖಲಿಸ್ಥಾನಿ ಉಗ್ರರು ಸರ್ಕಾರದ ಕೈ ತಿರುವಿದ್ದಾರೆ (ಬಲವಂತವಾಗಿ ಕಾಯ್ದೆ ಹಿಂಪಡೆಯುವಂತೆ ಮಾಡಿದ್ದಾರೆ ಎಂಬರ್ಥದಲ್ಲಿ). ಆದರೆ ಒಂದನ್ನು ಮರೆಯದಿರೋಣ, ಒಬ್ಬ ಮಹಿಳೆ, ಭಾರತದ ಏಕೈಕ ಮಹಿಳಾ ಪ್ರಧಾನಿ ಇದೇ ಖಲಿಸ್ಥಾನಿ ಉಗ್ರರನ್ನು ತನ್ನ ಶೂ ಕಾಲಿನಿಂದ ಹೊಸಕಿ ಹಾಕಿದ್ದಳು'' ಎಂದಿದ್ದರು. ಕಂಗನಾರ ಈ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಸಿಖ್ ಸಮುದಾಯದವರು ಕಂಗನಾ ವಿರುದ್ಧ ದೂರು ದಾಖಲಿಸಿದ್ದರು.

    English summary
    Kangana Ranaut's car has been stopped by protesters demand for an apology. Kangana said some people tried me to Kill.
    Friday, December 3, 2021, 19:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X