For Quick Alerts
  ALLOW NOTIFICATIONS  
  For Daily Alerts

  'ಕ್ವೀನ್' ಕಂಗನಾ-ಹೃತಿಕ್ ಬಗ್ಗೆ ಹೊರಬಿದ್ದಿರುವ ಶಾಕಿಂಗ್ ನ್ಯೂಸ್

  By ಅನಾಮಿಕ
  |

  ಬಾಲಿವುಡ್ ನ ಡ್ಯಾನ್ಸರ್ ಹೃತಿಕ್ ರೋಷನ್ ಮತ್ತು ಗುಂಗುರು ಕೂದಲ ಬೆಡಗಿ ಕಂಗನಾ ರನೌತ್ ಅವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವ ವಿಚಾರ ಇಡೀ ಬಿಟೌನ್ ಗೆ ಗೊತ್ತಿದೆ.

  ಇದೀಗ ಇವರಿಬ್ಬರ ಜಗಳಕ್ಕೆ ಹೊಸ ತಿರುವು ಸಿಕ್ಕಿರುವುದು ಮಾತ್ರವಲ್ಲದೇ, ಎಲ್ಲರೂ ಇವರತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಈಗಾಗಲೇ ಹೊರಬಿದ್ದಿರುವ ಮಾಹಿತಿ ನೋಡುತ್ತಿದ್ದರೆ ಕಂಗನಾ ಮತ್ತು ಹೃತಿಕ್ ನಡುವೆ ಬಹಳ ಹತ್ತಿರದ ಸಂಬಂಧ ಇದ್ದಿರಬಹುದು ಅನ್ನೋ ಅನುಮಾನ ಕಾಡುತ್ತದೆ.

  ಹೌದು 'ಕ್ವೀನ್' ಕಂಗನಾ ಅವರು ನಟ ಹೃತಿಕ್ ರೋಷನ್ ಅವರಿಗೆ ಕಳುಹಿಸಿರುವ ಸುಮಾರು 3000 ಈಮೇಲ್ ಹೊರ ಬಿದ್ದಿದ್ದು, ಇದರಲ್ಲಿ ಕಂಗನಾ ಅವರು ಹೃತಿಕ್ ಬಗ್ಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.[ಟಾಪ್ ನಟಿ ಕಂಗನಾ ಒಂದು ಕಾಲದಲ್ಲಿ ಮನೆಯವರಿಗೆ ಬೇಡವಾಗಿದ್ದ ಮಗು]

  ಆದರೆ ಮಜಾ ಏನಪ್ಪಾ ಅಂದ್ರೆ ಹೃತಿಕ್ ಗೆ ಕಳುಹಿಸಬೇಕಾದ ಈಮೇಲ್ ಬೇರೆ ಯಾರಿಗೋ ಹೋಗಿರುವುದರಿಂದ ಇದೀಗ ಉಲ್ಟಾ-ಪಲ್ಟಾ ಆಗಿ ಎಲ್ಲವೂ ಫಜೀತಿಯಾಗಿದೆ. ಸದ್ಯಕ್ಕೆ ಈ ಈಮೇಲ್ ಪೊಲೀಸರ ಕೈಗೂ ದೊರೆತಿದೆ.

  ಈ ಹಿಂದೆ ಕಂಗನಾ ಅವರ ವಕೀಲ ರಿಜ್ವಾನ್ ಸಿದ್ದೀಕಿ ಅವರು 'ಕಂಗನಾ ಅವರ ಈಮೇಲ್ ಅಕೌಂಟ್ ಹ್ಯಾಕ್ ಮಾಡಲಾಗಿದೆ. ನನ್ನ ಕಕ್ಷಿದಾರರಾದ ಕಂಗನಾ ಅವರ ಅಕೌಂಟ್ ಅನ್ನು ಹೃತಿಕ್ ಅವರು ಪದೇ ಪದೇ ಹ್ಯಾಕ್ ಮಾಡುತ್ತಿದ್ದಾರೆ ಎಂದು ಹೃತಿಕ್ ಅವರ ಮೇಲೆ ಕಂಗನಾ ಅವರು ಕೇಸ್ ಹಾಕಿದ್ದರು' ಎಂದು 8 ತಿಂಗಳ ಹಿಂದೆ ವಕೀಲರು ಹೇಳಿಕೆ ನೀಡಿದ್ದರು.[ಜೋಗಯ್ಯನ ಕೈಹಿಡಿಯಲಿದ್ದಾರೆ ಕಂಗನಾ ರನಾವತ್]

  ಆದರೆ ಇದೀಗ ಕಂಗನಾ ಅವರ ಈಮೇಲ್ ನೋಡಿ ಅಭಿಮಾನಿಗಳು ಶಾಕ್ ಆಗುವ ಪರಿಸ್ಥಿತಿ ಬಂದಿದೆ. ಮಾತ್ರವಲ್ಲದೇ ಕಂಗನಾ ಅವರಿಗೆ ಯಾವುದೋ ಒಂದು ಖಾಯಿಲೆ ಇದೆ ಎಂಬುದಾಗಿಯೂ ಹೇಳಲಾಗುತ್ತಿದೆ. ಅದೇನೇ ಇರಲಿ ಕಂಗನಾ ಅವರು ತಮ್ಮ ಮನದಾಳ ಮಾತನ್ನು ಇಮೇಲ್ ಮೂಲಕ ಹಂಚಿಕೊಂಡಿದ್ದು, ಅವರ ಸಾಲು-ಸಾಲು ಇಮೇಲ್ ನೋಡಿ ಕೆಳಗಿನ ಸ್ಲೈಡುಗಳಲ್ಲಿ...

  English summary
  Hrithik Roshan and Kangana Ranaut's battle has taken a shocking turn and all the emails that Kangana had sent to Hrithik have been leaked. Reportedly, Kangana Ranaut sent over 3000 emails to Hrithik Roshan over the course of a few years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X