ನಟಿ ಕಂಗನಾ ರಣೌತ್ ಅಜ್ಜ ನಿಧನ: ಭಾವುಕರಾದ ನಟಿ

ಬಾಲಿವುಡ್ ನಟಿ ಕಂಗನಾ ರಣೌತ್ ಅವರ ಅಜ್ಜ ಬ್ರಹ್ಮ ಚಂದ್ರ ರಣೌತ್ ಅವರು ನಿನ್ನೆ (ಡಿಸೆಂಬರ್ 14) ಸಂಜೆ ನಿಧನರಾಗಿದ್ದಾರೆ.

ತಾತನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಂಗನಾ, 'ನಾನು ಮನಾಲಿಯ ನನ್ನ ಮನೆಯಿಂದ ಪೋಷಕರ ಮನೆಗೆ ತರಾತುರಿಯಲ್ಲಿ ಹೋದೆ. ನನ್ನ ತಾತ ಕೆಲವು ದಿನಗಳಿಂದಲೂ ಆರೋಗ್ಯದಿಂದಿರಲಿಲ್ಲ. ಆದರೆ ನಾನು ಮನೆ ತಲುಪುವ ವೇಳೆಗೆ ಅವರು ಕೊನೆ ಉಸಿರೆಳೆದಿದ್ದರು' ಎಂದು ಬರೆದುಕೊಂಡಿದ್ದಾರೆ.

'ನನ್ನ ಅಜ್ಜನವರಿಗೆ 90 ವರ್ಷ ವಯಸ್ಸಾಗಿತ್ತು, ಆದರೆ ಈಗಲೂ ಅವರಿಗೆ ಅದ್ಭುತವಾದ ಹಾಸ್ಯಪ್ರಜ್ಞೆ ಇತ್ತು, ನಾವೆಲ್ಲರೂ ಅಜ್ಜನವರನ್ನು 'ಡ್ಯಾಡಿ' ಎಂದೇ ಕರೆಯುತ್ತಿದ್ದೆವು, ಅವರ ಆತ್ಮಕ್ಕೆ ಶಾಂತಿ ಸಿಗಲಿ, ಓಂ ಶಾಂತಿ' ಎಂದು ಕಂಗನಾ ಬರೆದಿದ್ದಾರೆ.

Kangana Ranauts Grand Father Died On December 14

ಕಂಗನಾ ಮನೆಯಲ್ಲಿ ಇತ್ತೀಚೆಗಷ್ಟೆ ಮದುವೆ ಸಂಭ್ರಮ ಏರ್ಪಟ್ಟಿತ್ತು, ಕಂಗನಾ ಸಹೋದರ ಅಕ್ಷತ್ ಕೆಲವು ದಿನಗಳ ಹಿಂದಷ್ಟೆ ರಿತಿಕಾ ಅವರೊಟ್ಟಿಗೆ ವಿವಾಹವಾದರು. ಇದಾಗಿ ಕೆಲವೇ ದಿನಗಳಲ್ಲಿ ಈಗ ತಾತ ತೀರಿಕೊಂಡಿದ್ದಾರೆ.

ಇನ್ನು ನಟಿ ಕಂಗನಾ ಈ ವರ್ಷ ಹೆಚ್ಚು ಸುದ್ದಿಯಲ್ಲಿದ್ದ ನಟಿಯರಲ್ಲಿ ಪ್ರಮುಖರಾಗಿದ್ದಾರೆ. ಕಂಗನಾ ತಮ್ಮ ಬೆಂಕಿಯುಂಡೆಯಂತಾ ಟ್ವೀಟ್‌ಗಳಿಂದ ಬಾಲಿವುಡ್‌ನ ಹಲವರನ್ನು ಕಾಡಿದ್ದಾರೆ.

ಇಂದು ಸಹ ಹಳೆಯ ಬಾಯ್‌ಫ್ರೆಂಡ್ ಹೃತಿಕ್ ರೋಷನ್ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ, 'ಒಂದು ಸಣ್ಣ ಅಫೇರ್‌ಗಾಗಿ ಇನ್ನೆಷ್ಟು ದಿನ ಅಳುತ್ತೀಯಾ?' ಎಂದು ವ್ಯಂಗ್ಯ ಮಾಡಿದ್ದಾರೆ. ಕಂಗನಾ ವಿರುದ್ಧ 2016 ರಲ್ಲಿ ನೀಡಿದ್ದ ದೂರಿನ ತನಿಖೆಯಲ್ಲಿ ಯಾವುದೇ ಪ್ರಗತಿ ಇಲ್ಲದ ಕಾರಣ, ಪ್ರಕರಣವನ್ನು ಸಿಐಯು (ಕ್ರೈಂ ಇಂಟೆಲಿಜೆನ್ಸ್ ಯುನಿಟ್‌) ಗೆ ವಹಿಸುವಂತೆ ಹೃತಿಕ್ ಪರ ವಕೀಲರು ಮನವಿ ಸಲ್ಲಿಸಿದ್ದರು, ಹಾಗಾಗಿ ಕಂಗನಾ ಮೇಲಿನಂತೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

Recommended Video

ರಿಲೀಸ್ ಆಯ್ತು ಇಂದ್ರಜಿತ್ ಲಂಕೇಶ್ Shakeela ಟ್ರೈಲರ್ | Filmebeat Kannada

More from Filmibeat

English summary
Actress Kangana Ranaut's grand fathe Brahm Chandra Ranaut died on December 14.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X