twitter
    For Quick Alerts
    ALLOW NOTIFICATIONS  
    For Daily Alerts

    ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಕೇಶ ವಿನ್ಯಾಸಕ ಬಂಧನ

    By ಜೇಮ್ಸ್ ಮಾರ್ಟಿನ್
    |

    ಡೇಟಿಂಗ್ ಅಪ್ಲಿಕೇಷನ್ ಮೂಲಕ ಪರಿಚಯ ಮಾಡಿಕೊಂಡು, ಅಪಾಪ್ರ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಹೇರ್ ಸ್ಟೈಲಿಸ್ಟ್ ಬ್ರ್ಯಾಂಡನ್ ಅಲಿಸ್ಟರ್ ಡಿ ಗೀ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಬಾಲಿವುಡ್ ನಟಿ ಕಂಗನಾಳ ಹೇರ್ ಸ್ಟೈಲಿಸ್ಟ್ ಗೀ ಅವರು ದಕ್ಷಿಣ ಆಫ್ರಿಕಾದ ನಿವಾಸಿಯಾಗಿದ್ದಾರೆ. ಸದ್ಯ ಕಂಗನಾ ಅಭಿನಯದ ಬಹು ನಿರೀಕ್ಷೆಯ ಚಿತ್ರ ಮಣಿಕರ್ಣಿಕಾದ ಶೂಟಿಂಗ್ ನಲ್ಲಿ ನಿರತರಾಗಿದ್ದರು. ಶೂಟಿಂಗ್ ಸೆಟ್ ಗೆ ಬಂದ ಪೊಲೀಸರು ಗೀ ಅವರನ್ನು ಬಂಧಿಸಿದ್ದಾರೆ.

    ಕಂಗನಾಗೆ ಮತ್ತೊಂದು ಕಂಟಕ: ಮಣಿಕರ್ಣಿಕಾಗೆ ನಟಿ ಸ್ವಾತಿ ಗುಡ್ ಬೈ.?ಕಂಗನಾಗೆ ಮತ್ತೊಂದು ಕಂಟಕ: ಮಣಿಕರ್ಣಿಕಾಗೆ ನಟಿ ಸ್ವಾತಿ ಗುಡ್ ಬೈ.?

    42 ವರ್ಷದ ಬ್ರ್ಯಾಂಡನ್ ಅವರ POCSO ಕಾಯ್ದೆಯಡಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 03ರ ತನಕ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಕಂಗನಾ ಮುಂದಿನ ಚಿತ್ರ ಮಣಿಕರ್ಣಿಕಾ ಚಿತ್ರದ ಟ್ರೈಲರ್ ಅಕ್ಟೋಬರ್ ಮೊದಲ ಬಾರಿಗೆ ಬಿಡುಗಡೆಯಾಗಲಿದೆ.

    Kangana Ranauts hairstylist arrested for raping minor

    ಸದ್ಯದ ಚಿತ್ರದ ಚಿತ್ರೀಕರಣ ಮುಂಬೈ ಸುತ್ತಾ ಮುತ್ತಾ ಶೂಟಿಂಗ್ ನಡೆಸಲಾಗುತ್ತಿತ್ತು. ಕೇಶ ವಿನ್ಯಾಸಕ ಬ್ರ್ಯಾಂಡನ್ ಶೂಟಿಂಗ್ ನಲ್ಲಿರುವ ಬಗ್ಗೆ ಮಾಹಿತಿ ಪಡೆದ ಖಾರ್ ನ ಪೊಲೀಸರು, ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    ಅನೇಕ ಹೇರ್ ಸ್ಟೈಲ್ ಶೋಗಳಲ್ಲಿ ಕೂಡ ಪಾಲ್ಗೊಳ್ಳುವ ಬ್ರ್ಯಾಂಡನ್, ಮುಂಬೈ, ಗೋವಾ ಹಾಗೂ ಅನೇಕ ದೇಶಗಳಲ್ಲಿ ಸುತ್ತಾಡುತ್ತಿರುತ್ತಾರೆ. ಆನ್ಲೈನ್ ಡೇಟಿಂಗ್ ಸೈಟ್ ನ ಮೂಲಕ ಬ್ರ್ಯಾಂಡನ್ ಹಾಗೂ 16 ವರ್ಷ ವಯಸ್ಸಿನ ಬಾಲಕನ ಪರಿಚಯವಾಗುತ್ತದೆ.

    ನಿರ್ದೇಶಕಿ ಕಂಗನಾರಿಂದ ಇನ್ನೆಷ್ಟು ಜನರಿಗೆ ತೊಂದರೆ ಆಗುತ್ತೋ.?ನಿರ್ದೇಶಕಿ ಕಂಗನಾರಿಂದ ಇನ್ನೆಷ್ಟು ಜನರಿಗೆ ತೊಂದರೆ ಆಗುತ್ತೋ.?

    ಡೇಟಿಂಗ್ ಆಪ್ ನಲ್ಲಿ ವಯಸ್ಸು 18 ದಾಟಿದೆ ಎಂದು ಸುಳ್ಳು ಹೇಳಿ, ಬ್ರ್ಯಾಂಡನ್ ಸೇರಿದಂತೆ ಅನೇಕ ಪುರುಷರ ಜತೆ ಸಂಬಂಧ ಬೆಳೆಸಿಕೊಂಡಿದ್ದ. ಒಮ್ಮೆ ಕೆಲ ಪುರುಷರ ಜತೆ ಮಸ್ತಿಯಲ್ಲಿ ತೊಡಗಿದ್ದಾಗ ಹುಡುಗನ ತಾಯಿಗೆ ಈ ಬಗ್ಗೆ ತಿಳಿದು ಬಂದಿದೆ. ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಲಾಗಿದ್ದು, ಶಾಲಾ ಶಿಕ್ಷಕ, ಉದ್ಯಮಿಗಳು ಸೇರಿದ್ದಾರೆ.

    English summary
    Police in Mumbai's Khar have arrested a South African national and hairstylist to Bollywood celebrities, Brendon Allister De Gee, 42, on charges of raping a 16-year-old boy.
    Sunday, September 30, 2018, 10:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X