twitter
    For Quick Alerts
    ALLOW NOTIFICATIONS  
    For Daily Alerts

    ದ್ವೇಷ ಬಿತ್ತುವ ಟ್ವೀಟ್: ಕಂಗನಾ ರಣಾವತ್ ಅಕ್ಕನ ಟ್ವಿಟ್ಟರ್ ಖಾತೆ ಸಸ್ಪೆಂಡ್

    |

    ಬಾಲಿವುಡ್ ನಟಿ ಕಂಗನಾ ರಣಾವತ್ ಸಹೋದರಿ ರಂಗೋಲಿ ಚಾಂಡೆಲ್ ಅವರ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಟ್ವಿಟ್ಟರ್ ಅಮಾನತುಗೊಳಿಸಿದೆ. ದ್ವೇಷಪೂರಿತ ವಿಚಾರವನ್ನು ಟ್ವೀಟ್ ಮಾಡಿದ್ದಕ್ಕಾಗಿ ತೀವ್ರ ಟೀಕೆಗೆ ಒಳಗಾಗಿದ್ದ ರಂಗೋಲಿ ಅವರ ಖಾತೆಯ ವಿರುದ್ಧ ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ರಿಪೋರ್ಟ್ ಮಾಡಿದ್ದರು. ಅದನ್ನು ಪರಿಗಣಿಸಿರುವ ಟ್ವಿಟ್ಟರ್, ಅವರ ಖಾತೆಯನ್ನು ಸಸ್ಪೆಂಡ್ ಮಾಡಿದೆ.

    ನಟಿ ಕಂಗನಾ ರಣಾವತ್ ಅವರ ಟ್ವಿಟ್ಟರ್ ಖಾತೆಯನ್ನು ಕೂಡ ರಂಗೋಲಿ ನಿರ್ವಹಿಸುತ್ತಿದ್ದಾರೆ. ಅವರು ತಮ್ಮ ವೈಯಕ್ತಿಕ ಖಾತೆಯಲ್ಲಿ ದ್ವೇಷ ಭಾವನೆ ಬಿತ್ತುವ ಟ್ವೀಟ್ ಹಂಚಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ರಂಗೋಲಿ ಅವರ ಪೋಸ್ಟ್ ತೀವ್ರ ವಿವಾದ ಕೆರಳಿಸಿತ್ತು. ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಅವರ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂದೆ ಓದಿ...

    ವೈದ್ಯರ ಮೇಲೆ ಹಲ್ಲೆ ಪ್ರಕರಣ

    ವೈದ್ಯರ ಮೇಲೆ ಹಲ್ಲೆ ಪ್ರಕರಣ

    ಮೊರಾದಾಬಾದ್‌ನಲ್ಲಿ ವೈದ್ಯರು ಮತ್ತು ವೈದ್ಯಕೀಯ ತಂಡ ಇಬ್ಬರ ಮೇಲೆ ಕಲ್ಲುತೂರಾಟ ನಡೆಸಿ ಅವರನ್ನು ಗಾಯಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ರಂಗೋಲಿ ಬುಧವಾರ ಮಾಡಿದ್ದ ಟ್ವೀಟ್ ದ್ವೇಷವನ್ನು ಕೆರಳಿಸುವಂತಿತ್ತು.

    ಬಾಲಿವುಡ್ ನಟಿ ಜೊತೆ ನಟಿಸುವ ಅವಕಾಶ ಬೇಡವೆಂದ ಬಾಲಕೃಷ್ಣಬಾಲಿವುಡ್ ನಟಿ ಜೊತೆ ನಟಿಸುವ ಅವಕಾಶ ಬೇಡವೆಂದ ಬಾಲಕೃಷ್ಣ

    ಗುಂಡು ಹೊಡೆದು ಸಾಯಿಸಬೇಕು

    ಗುಂಡು ಹೊಡೆದು ಸಾಯಿಸಬೇಕು

    'ಕೊರೊನಾ ವೈರಸ್ ಸೋಂಕಿತರ ಕುಟುಂಬದವರನ್ನು ತಪಾಸಣೆ ಮಾಡಲು ಹೋದ ವೈದ್ಯರು ಮತ್ತು ಪೊಲೀಸರ ಮೇಲೆ ದಾಳಿ ಮಾಡಿ ಸಾಯಿಸಲಾಗಿದೆ. ಈ ಮುಲ್ಲಾಗಳು+ ಸೆಕ್ಯುಲರ್ ಮೀಡಿಯಾಗಳನ್ನು ಸಾಲಾಗಿ ನಿಲ್ಲಿಸಿ ಅವರನ್ನು ಗುಂಡು ಹೊಡೆದು ಸಾಯಿಸಬೇಕು. ಅವರು ನಮ್ಮನ್ನು ನಾಜಿಗಳೆಂದು ಕರೆಯುತ್ತಾರೆ. ಅದಕ್ಕೆ ಯಾರು ತಲೆಕೆಡಿಸಿಕೊಳ್ಳುತ್ತಾರೆ. ನಕಲಿ ವರ್ಚಸ್ಸಿಗಿಂತ ಜೀವ ಹೆಚ್ಚು ಮುಖ್ಯ' ಎಂದು ರಂಗೋಲಿ ಟ್ವೀಟ್ ಮಾಡಿದ್ದರು.

    ರಂಗೋಲಿ ಬಂಧನಕ್ಕೆ ಆಗ್ರಹ

    ರಂಗೋಲಿ ಬಂಧನಕ್ಕೆ ಆಗ್ರಹ

    ಕೂಡಲೇ ಅದರ ವಿರುದ್ಧ ಟೀಕೆಗಳು ವ್ಯಕ್ತವಾದರೂ ರಂಗೋಲಿ ಕ್ಷಮೆ ಕೇಳಲಿಲ್ಲ. ನಿರ್ದೇಶಕಿ ರೀಮಾ ಕಗ್ತಿ, ನಟಿ ಕುಬ್ರಾ ಸೇಠ್, ವಿನ್ಯಾಸಕ ಫರ್ಹಾ ಅಲಿ ಖಾನ್ ಮುಂತಾದವರು ಮುಂಬೈ ಪೊಲೀಸರನ್ನು, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಟ್ಯಾಗ್ ಮಾಡಿ ಕೂಡಲೇ ರಂಗೋಲಿಯನ್ನು ಬಂಧಿಸಿ ಎಂದು ಆಗ್ರಹಿಸಿದ್ದರು.

    ಒಂದೇ ಮಂಚ ಇಬ್ಬರೊಂದಿಗೆ ಹಂಚಿಕೊಳ್ಳಲಾರೆ: ಬಾಲಿವುಡ್ ಬೆಡಗಿಯ ಬೋಲ್ಡ್ ಮಾತುಒಂದೇ ಮಂಚ ಇಬ್ಬರೊಂದಿಗೆ ಹಂಚಿಕೊಳ್ಳಲಾರೆ: ಬಾಲಿವುಡ್ ಬೆಡಗಿಯ ಬೋಲ್ಡ್ ಮಾತು

    ಕೊಲ್ಲಬೇಕೆಂಬ ನಿಲುವು ಸರಿಯಿಲ್ಲ

    'ಡಾಕ್ಟರ್ ಮೇಲೆ ದಾಳಿ ಮಾಡಿದ ಜನರನ್ನು ಖಂಡಿಸಲೇಬೇಕು. ಆದರೆ ಸಾಲಾಗಿ ನಿಲ್ಲಿಸಿ ಗುಂಡು ಹೊಡೆದು ಕೊಲ್ಲಬೇಕು ಎನ್ನುವುದು ಸರಿಯಲ್ಲ. ದ್ವೇಷ ಭಾವನೆ ಉತ್ತೇಜಿಸುತ್ತಿರುವ ಮತ್ತು ಸಮುದಾಯವೊಂದನ್ನು ಕೊಲ್ಲಲು ಕರೆ ನೀಡಿರುವ ಈ ಮಹಿಳೆಯನ್ನು ಕೂಡಲೇ ಬಂಧಿಸಿ. ನಿಮ್ಮ ದ್ವೇಷ ಮತ್ತು ನಿಲುವಿನ ಕಾರಣಕ್ಕಾಗಿ ನಿಮ್ಮ ಬಗ್ಗೆ ಬೇಸರವಾಗುತ್ತಿದೆ' ಎಂದು ಹೇಳಿದ್ದರು.

    ನೀವು ಏನು ಬೇಕಾದರೂ ದ್ವೇಷಿಸಬಹುದು

    ನೀವು ಏನು ಬೇಕಾದರೂ ದ್ವೇಷಿಸಬಹುದು

    ಇದಕ್ಕೆ ಖಾರವಾದ ಪ್ರತಿಕ್ರಿಯೆ ನೀಡಿರುವ ರಂಗೋಲಿ, ಟ್ವಿಟ್ಟರ್ ಅಮೆರಿಕ ಮೂಲದ್ದು. ಅದು ಸಂಪೂರ್ಣ ಪಕ್ಷಪಾತಿ ಮತ್ತು ಭಾರತ ವಿರೋಧಿ. ನೀವು ಹಿಂದೂ ದೇವರುಗಳನ್ನು ಅಣಕಿಸಬಹುದು, ಪ್ರಧಾನಿ ಮತ್ತು ಗೃಹಸಚಿವರನ್ನು ಭಯೋತ್ಪಾದಕರು ಎಂದು ಕರೆಯಬಹುದು. ಆದರೆ ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುವ ಜನರ ಬಗ್ಗೆ ಏನಾದರೂ ಹೇಳಿದರೆ ಖಾತೆಯನ್ನು ಸಸ್ಪೆಂಡ್ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

    ಮತ್ತೆ ಹೃತಿಕ್ ಅನ್ನು ಕೆಣಕಿದ ಕಂಗನಾ ಸಹೋದರಿ: ನಟ್ಟಿಗರು ಹೇಳಿದ್ದೇನು?ಮತ್ತೆ ಹೃತಿಕ್ ಅನ್ನು ಕೆಣಕಿದ ಕಂಗನಾ ಸಹೋದರಿ: ನಟ್ಟಿಗರು ಹೇಳಿದ್ದೇನು?

    English summary
    Twitter has suspended the account of Kangana Ranaut's sister Rangoli Chandel after a controversial tweet.
    Thursday, April 16, 2020, 18:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X