ಸಲ್ಮಾನ್ ಖಾನ್ ಸಿನಿಮಾ ನಿರಾಕರಿಸಿದ್ದಕ್ಕೆ ನಿರ್ಮಾಪಕನಿಂದ ಕಂಗನಾಗೆ ಬೆದರಿಕೆ!
ಸಲ್ಮಾನ್ ಖಾನ್ ಸಿನಿಮಾದ ನಟಿಸುವ ಅವಕಾಶವನ್ನು ಕಂಗನಾ ರಣಾವತ್ ನಿರಾಕರಿಸಿದ್ದಕ್ಕೆ ಯಶ್ ರಾಜ್ ಫಿಲಂಸ್‌ನಿಂದ ನಟಿ ಕಂಗನಾ ಗೆ ಬೆದರಿಕೆ ಕರೆ ಬಂದಿತ್ತಂತೆ.
Recommended Video
ಕಂಗನಾ ರಣಾವತ್ ಅವರು ಈ ವಿಷಯವನ್ನು ಮಾಧ್ಯಮದೊಟ್ಟಿಗೆ ಮಾತನಾಡುವಾಗ ಬಹಿರಂಗಪಡಿಸಿದ್ದಾರೆ. ಅದೂ ಬಾಲಿವುಡ್‌ನ ದೊಡ್ಡ ನಿರ್ಮಾಪಕರೇ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಸಲ್ಮಾನ್ ಖಾನ್ ನಾಯಕರಾಗಿದ್ದ ಯಶ್ ರಾಜ್ ಫಿಲಂಸ್ ನಿರ್ಮಿಸಿದ್ದ ಸುಲ್ತಾನ್ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಕಂಗನಾ ಗೆ ನೀಡಲಾಗಿತ್ತಂತೆ. ಆದರೆ ಅವಕಾಶವನ್ನು ಅವರು ನಿರಾಕರಿಸಿದ್ದರಂತೆ.

ಸುಲ್ತಾನ್ ಸಿನಿಮಾ ಅವಕಾಶವನ್ನು
ಸುಲ್ತಾನ್ ಸಿನಿಮಾ ಅವಕಾಶವನ್ನು ನಿರಾಕರಿಸಿದ್ದರಿಂದ ಸಿಟ್ಟಿಗೆದ್ದಿದ್ದ ಯಶ್ ರಾಜ್ ಫಿಲಂಸ್‌ನ ಮುಖ್ಯಸ್ಥ ಆದಿತ್ಯ ಚೋಪ್ರಾ ಕಂಗನಾ ಬೆದರಿಕೆ ಹಾಕಿದರಂತೆ. ಹೀಗೆಂದು ಅವರು ಮಾಧ್ಯಮದಲ್ಲಿ ಆರೋಪ ಮಾಡಿದ್ದಾರೆ.

'ಆದಿತ್ಯ ಚೋಪ್ರಾ ಅನ್ನು ಭೇಟಿಯಾಗೋಣ ಎಂದುಕೊಂಡಿದ್ದೆ'
'ಸುಲ್ತಾನ್ ಸಿನಿಮಾ ನಿರ್ದೇಶಕ ಅಲಿ ಅಬ್ಬಾಸ್ ಜಬ್ಬಾರ್ ನನ್ನ ಮನೆಗೆ ಬಂದು ಚಿತ್ರಕತೆ ಓದಿ ಹೇಳಿದರು. ಆದರೆ ನನಗೆ ನಟಿಸಲು ಇಷ್ಟವಾಗಲಿಲ್ಲ, ಹಾಗಾಗಿ ನಾನು ನೇರವಾಗಿ ಆದಿತ್ಯ ಚೋಪ್ರಾ ಅವರನ್ನು ಭೇಟಿಯಾಗಿ ಕ್ಷಮೆಯೊಂದಿಗೆ ಸಿನಿಮಾದಲ್ಲಿ ನಟಿಸುವುದಿಲ್ಲವೆಂದು ಹೇಳೊಣ ಎಂದುಕೊಂಡಿದ್ದೆ' ಎಂದು ಕಂಗನಾ ಹೇಳಿದ್ದಾರೆ.

'ನಿನ್ನ ಕತೆ ಮುಗಿಯಿತು' ಎಂದು ಸಂದೇಶ ಕಳಿಸಿದ್ದರು
ಆದರೆ ಅಷ್ಟರ ಒಳಗಾಗಿ ಯಾವುದೋ ಪತ್ರಿಕೆಯಲ್ಲಿ ಕಂಗನಾ ಸುಲ್ತಾನ್ ನಲ್ಲಿ ನಟಿಸುವುದಿಲ್ಲ ಎಂದಿದ್ದಾರೆ ಎಂದು ವರದಿ ಆಗಿಬಿಟ್ಟಿತು. ಕೂಡಲೇ ಆದಿತ್ಯ ನನಗೆ ಮೆಸೆಜ್ ಮಾಡಿ, 'ನಿನಗೆಷ್ಟು ಧೈರ್ಯ? ನನಗೇ ಬೇಡ ಎನ್ನುತ್ತೀಯಾ?, ನಿನ್ನ ಕತೆ ಮುಗಿದಂತೆ' ಎಂದು ಬೆದರಿಸಿದ್ದರು ಎಂದು ಹೇಳಿದ್ದಾರೆ.

ಕರೆ ಮಾಡಿ ಬೆದರಿಕೆ ಹಾಕಿದ್ದರು ಆದಿತ್ಯ ಚೋಪ್ರಾ
ಅಷ್ಟೆ ಆ ನಂತರ ಆದಿತ್ಯ ಚೋಪ್ರಾ ನನಗೆ ಕರೆ ಮಾಡಿ, 'ನಿನ್ನೊಂದಿಗೆ ಇನ್ನೆಂದೂ ನಾನು ಕೆಲಸ ಮಾಡುವುದಿಲ್ಲ' ಎಂದು ಸಹ ಹೇಳಿದರು ಎಂದು ಕಂಗನಾ ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಸಲಿಗೆ ಸುಲ್ತಾನ್ ಸಿನಿಮಾ ನಾಯಕಿಯ ಕಾರಣಕ್ಕೆ ಕೆಲ ಕಾಲ ಚರ್ಚೆಯಲ್ಲಿತ್ತು.

ಮೊದಲಿಗೆ ದೀಪಿಕಾ ಗೆ ಆಫರ್
ಸುಲ್ತಾನ್ ನಾಯಕಿಯ ಪಾತ್ರ ಮೊದಲಿಗೆ ದೀಪಿಕಾ ಪಡುಕೋಣೆಗೆ ಆಫರ್ ಮಾಡಲಾಗಿತ್ತು, ಅವರು ಡೇಟ್ಸ್ ಕಾರಣ ಒಲ್ಲೆ ಎಂದರು, ನಂತರ ಕಂಗನಾ ಅವರನ್ನು ಕೇಳಲಾಯಿತು, ಅವರೂ ಒಪ್ಪಲಿಲ್ಲ. ನಂತರ ಅನುಷ್ಕಾ ಶರ್ಮಾ ಅವರನ್ನು ಕೇಳಿದಾಗ ಅವರು ಒಪ್ಪಿಕೊಂಡರು.


Click it and Unblock the Notifications











