'ಬ್ರಹ್ಮಾಸ್ತ್ರ' ಸಿನಿಮಾ ವಿರುದ್ಧ ಕಂಗನಾ ಕೆಂಡ: ಹೊಗಳಿದವರನ್ನು ಜೈಲಿಗಟ್ಟಿ ಎಂದ ನಟಿ

ರಣ್ಬೀರ್ ಕಪೂರ್-ಆಲಿಯಾ ಭಟ್ ನಟಿಸಿರುವ 'ಬ್ರಹ್ಮಾಸ್ತ್ರ' ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಮಿಶ್ರ ಅಭಿಪ್ರಾಯಗಳ ಹೊರತಾಗಿಯೂ ಮೊದಲ ದಿನ ಉತ್ತಮ ಕಲೆಕ್ಷನ್ ಅನ್ನೇ ಸಿನಿಮಾ ಮಾಡಿದೆ.

ಸಿನಿಮಾದ ಬಗ್ಗೆ ಕೆಲವರು ನೆಗೆಟಿವ್ ಕಮೆಂಟ್ ಮಾಡಿದ್ದರೆ, ಇನ್ನು ಕೆಲವರು ಸಿನಿಮಾ ಚೆನ್ನಾಗಿದೆ ಎಂದಿದ್ದಾರೆ. ಆದರೆ ನಟಿ ಕಂಗನಾ ರನೌತ್ ಮಾತ್ರ ಸಿನಿಮಾದ ವಿರುದ್ಧ ಕೆಂಡ ಕಾರಿದ್ದಾರೆ. 'ಬ್ರಹ್ಮಾಸ್ತ್ರ' ಒಂದು ಅತ್ಯಂತ ಕೆಟ್ಟ ಸಿನಿಮಾ ಎಂದಿದ್ದಾರೆ ಕಂಗನಾ ರನೌತ್.

ಸಾಮಾಜಿಕ ಜಾಲತಾಣದಲ್ಲಿ 'ಬ್ರಹ್ಮಾಸ್ತ್ರ' ಸಿನಿಮಾ ಹಾಗೂ ಅದರ ಚಿತ್ರತಂಡದ ಬಗ್ಗೆ ಉದ್ದನೆಯ ಅಭಿಪ್ರಾಯ ಹಂಚಿಕೊಂಡಿರುವ ಕಂಗನಾ, 'ಬ್ರಹ್ಮಾಸ್ತ್ರ' ಸಿನಿಮಾವನ್ನು ಹಿನ್ನೆಯಾಗಿಟ್ಟುಕೊಂಡು ಬಾಲಿವುಡ್ಡಿನ ಸುಳ್ಳತನ, ಕಳ್ಳತನ, ಅವಕಾಶವಾದಿತನಗಳನ್ನು ಬಹಿರಂಗಪಡಿಸಿದ್ದಾರೆ.

''ಸುಳ್ಳನ್ನು ಮಾರಾಟ ಮಾಡಲು ಹೊರಟಾದ ಇದೇ ಆಗುತ್ತದೆ. ಕರಣ್ ಜೋಹರ್, ತನ್ನ ಪ್ರತಿ ಶೋನಲ್ಲಿ ಆಲಿಯಾ-ರಣ್ಬೀರ್ ಅದ್ಭುತವಾದ ನಟರು ಎಂದು ಎಲ್ಲರಿಂದ ಹೇಳಿಸುತ್ತಾರೆ. ಅಯಾನ್ ಮುಖರ್ಜಿ ಅದ್ಭುತ ನಿರ್ದೇಶಕ ಎಂದು ಹೇಳಿಸುತ್ತಾರೆ. ನಿಧಾನಕ್ಕೆ ಆತ ಈ ಸುಳ್ಳನ್ನು ನಂಬಲು ಆರಂಭಿಸುತ್ತಾನೆ. ಆ ಸುಳ್ಳನ್ನು ಇತರರ ಮೇಲೂ ಹೇರಲು ಮುಂದಾಗುತ್ತಾನೆ'' ಎಂದು ಕರಣ್ ಬಗ್ಗೆ ಟೀಕಿಸಿದ್ದಾರೆ ಕಂಗನಾ.

ರಣ್ಬೀರ್-ಆಲಿಯಾ ಬಗ್ಗೆಯೂ ಟೀಕೆ

ರಣ್ಬೀರ್-ಆಲಿಯಾ ಬಗ್ಗೆಯೂ ಟೀಕೆ

'ಬ್ರಹ್ಮಾಸ್ತ್ರ' ಸಿನಿಮಾದ ಮುಖ್ಯ ಪಾತ್ರಧಾರಿಗಳಾದ ರಣ್ಬೀರ್-ಆಲಿಯಾ ಬಗ್ಗೆಯೂ ಟೀಕೆ ಮಾಡಿರುವ ಕಂಗನಾ, ''ಬಾಲಿವುಡ್‌ನಲ್ಲಿ ಗ್ರೂಪಿಸಮ್ ಎನ್ನುವುದು ಹೆಚ್ಚುತ್ತಲೇ ಇದೆ. ಆಲಿಯಾ ರಣ್ಬೀರ್ ಮದುವೆ, ಮಗು ಆಗುತ್ತಿರುವ ಬಗ್ಗೆ ಘೋಷಣೆ ಎಲ್ಲವೂ ಸಿನಿಮಾ ಪ್ರಚಾರದ ಭಾಗ ಎಂದಿದ್ದಾರೆ. ಬಾಲಿವುಡ್‌ನವರು ತಮ್ಮ ಸಿನಿಮಾದ ಪ್ರಚಾರಕ್ಕೆ ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲರು ಎಂದಿರುವ ಕಂಗನಾ, ಕೆಆರ್‌ಕೆ ಬಂಧನಕ್ಕೂ ಈ ಬಾಲಿವುಡ್ ಮಾಫಿಯಾದವರೇ ಕಾರಣ ಎಂದಿದ್ದಾರೆ. ಮದುವೆ, ಮಕ್ಕಳಾಗುವುದನ್ನು ಪಿಆರ್‌ ಮಾಡಲಾಗುತ್ತಿದೆ. ವಿಮರ್ಶಕರನ್ನು ಖರೀದಿಸಲಾಗುತ್ತಿದೆ. ಸಿನಿಮಾ ಟಿಕೆಟ್‌ಗಳನ್ನು ಚಿತ್ರತಂಡದವರೇ ಖರೀದಿಸಿ ನಕಲಿ ಡಿಮ್ಯಾಂಡ್ ಸೃಷ್ಟಿಸುತ್ತಿದ್ದಾರೆ'' ಎಂದಿದ್ದಾರೆ.

''ಅಯಾನ್ ಮುಖರ್ಜಿ ಜೀನಿಯಸ್ ಅಂದವರ ಜೈಲಿಗೆ ಹಾಕಿ''

''ಅಯಾನ್ ಮುಖರ್ಜಿ ಜೀನಿಯಸ್ ಅಂದವರ ಜೈಲಿಗೆ ಹಾಕಿ''

ಸಿನಿಮಾದ ನಿರ್ದೇಶಕ ಅಯಾನ್ ಮುಖರ್ಜಿ ವಿರುದ್ಧವೂ ಬರೆದಿರುವ ಕಂಗನಾ, ''ಯಾರೆಲ್ಲಾ ಅಯಾನ್ ಮುಖರ್ಜಿಯನ್ನು ಜೀನಿಯಸ್ ಎಂದಿದ್ದರೋ ಅವರನ್ನೆಲ್ಲ ಕೂಡಲೇ ಜೈಲಿಗೆ ಹಾಕಬೇಕು. 600 ಕೋಟಿ ಹಣವನ್ನು ಸುಟ್ಟು ಭಸ್ಮ ಮಾಡಿದ್ದಾನೆ ಆತ. ಫಾಕ್ಸ್ ಸ್ಟುಡಿಯೋ ಇಂಡಿಯಾ ಸಂಸ್ಥೆಯು ತನ್ನನ್ನು ತಾನು ಮಾರಿಕೊಂಡು ಈ ಸಿನಿಮಾಕ್ಕೆ ಹಣ ಒದಗಿಸಿದೆ. ಈ ಜೋಕರ್‌ಗಳಿಂದ ಇನ್ನೂ ಎಷ್ಟು ಸ್ಟುಡಿಯೋಗಳು ಬಾಗಿಲು ಹಾಕಿಕೊಳ್ಳಬೇಕು ಎಂದಿದ್ದಾರೆ.

ದಕ್ಷಿಣದ ನಟರನ್ನು, ನಿರ್ದೇಶಕರನ್ನು ಬಳಸಿಕೊಂಡಿದ್ದಕ್ಕೆ ಟೀಕೆ

ದಕ್ಷಿಣದ ನಟರನ್ನು, ನಿರ್ದೇಶಕರನ್ನು ಬಳಸಿಕೊಂಡಿದ್ದಕ್ಕೆ ಟೀಕೆ

''ಕರಣ್ ಜೋಹರ್‌ಗೆ ಜನರ ಸೆಕ್ಸ್ ಲೈಫ್‌ ಬಗ್ಗೆ ಬಹಳ ಆಸಕ್ತಿ ಇದೆ. ಅದೇ ಆಸಕ್ತಿಯನ್ನು ಆತ ಚಿತ್ರಕತೆಯ ಮೇಲೂ ತೋರಿಸಿದ್ದರೆ ಒಳ್ಳೆಯದಿತ್ತು. ತಾನು ನಕಲಿ ಸಿನಿಮಾ ವಿಮರ್ಶೆ ಬರೆಸುವುದಾಗಿ, ನಕಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಬರೆಸುವುದಾಗಿ, ನಕಲಿ ಬೇಡಿಕೆ ಸೃಷ್ಟಿಸುವುದಾಗಿ ಆತನೇ ಒಪ್ಪಿಕೊಳ್ಳುತ್ತಾನೆ. ಈ ಬಾರಿ ಇವುಗಳ ಜೊತೆಗೆ ಹಿಂದುತ್ವ ಮತ್ತು ದಕ್ಷಿಣ ಭಾರತದ ಅಲೆಯನ್ನು ತನ್ನ ಸಿನಿಮಾಕ್ಕಾಗಿ ಬಳಸಿಕೊಳ್ಳಲು ಯತ್ನಿಸಿದ್ದಾನೆ. ಪೂಜಾರಿಗಳು, ದಕ್ಷಿಣ ಭಾರತದ ಸ್ಟಾರ್ ನಟರು, ನಿರ್ದೇಶಕರು, ಬರಹಗಾರರನ್ನು ತನ್ನ ಸಿನಿಮಾ ಪ್ರಚಾರಕ್ಕೆ ಆತ ಬಳಸಿಕೊಂಡಿದ್ದಾನೆ'' ಎಂದಿದ್ದಾರೆ ಕಂಗನಾ.

ಕೆಟ್ಟ ಸಿನಿಮಾ ಎಂದ ಕಂಗನಾ

ಕೆಟ್ಟ ಸಿನಿಮಾ ಎಂದ ಕಂಗನಾ

'ಬ್ರಹ್ಮಾಸ್ತ್ರ' ಸಿನಿಮಾ ಅಟ್ಟರ್ ಫ್ಲಾಪ್, ಇದೊಂದು ಕೆಲಸಕ್ಕೆ ಬಾರದ ಸಿನಿಮಾ ಎಂದು ಕಂಗನಾ ಮೂದಲಿಸಿದ್ದಾರೆ. ಸಿನಿಮಾವು ನಿನ್ನೆ (ಸೆಪ್ಟೆಂಬರ್ 09) ಬಿಡುಗಡೆ ಆಗಿದ್ದು, ಮೊದಲ ದಿನವೇ 35- 40 ಕೋಟಿ ಹಣ ಗಳಿಸಿದೆ. ಸಿನಿಮಾದ ಕುರಿತಾಗಿ ಮಿಶ್ರ ವಿಮರ್ಶೆಗಳು ಪ್ರಕಟವಾಗಿವೆಯಾದರೂ ಸಿನಿಮಾ ಮೊದಲ ದಿನ ಒಳ್ಳೆಯ ಕಲೆಕ್ಷನ್ ಅನ್ನೇ ಮಾಡಿದೆ. ಆಲಿಯಾ ಭಟ್-ರಣ್ಬೀರ್ ಕಪೂರ್ ನಟಿಸಿರುವ ಈ ಸಿನಿಮಾವನ್ನು ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Actress Kangana Ranaut says Brahmastra movie is a disaster. She also scoled director Ayan Mukharji and producer Karan Johar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X