ಪ್ರಶಸ್ತಿ ಸಮಾರಂಭಕ್ಕೆ ಹೋಗಲು ಬಟ್ಟೆ ಖರೀದಿಸಲು ಹಣ ಇರಲಿಲ್ಲ: ಕಷ್ಟದ ದಿನಗಳನ್ನು ನೆನೆದ ನಟಿ ಕಂಗನಾ

ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಕಥೆ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಗಾಡ್ ಫಾದರ್ ಇಲ್ಲದೆ ಚಿತ್ರರಂಗ ಪ್ರವೇಶಿಸಿ ಕಠಿಣ ಪರಿಶ್ರಮದ ಮೂಲಕ ಟಾಪ್ ನಟಿಯಾಗಿ ಹೊರಹೊಮ್ಮಿದ್ದಾರೆ. ಪ್ರಾರಂಭದ ದಿನಗಳಲ್ಲಿ ಕಂಗನಾ ಎದುರಿಸಿದ ಕಷ್ಟಗಳ ಬಗ್ಗೆ ಆಗಾಗ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

Recommended Video

ಮಯೂರಿ ಮರೆಯಲಾರದ ಸಹಾಯ ಮಾಡಿದ ಜೆಕೆ ತಂದೆ-ತಾಯಿ | JK Parents did all the marriage to Mayuri

ಬಾಲಿವುಡ್ ಪ್ರಾವೇಶ ಮಾಡಿದ ಸಮಯದಲ್ಲಿ ಅವಕಾಶಕ್ಕಾಗಿ ಪರದಾಡಬೇಕಿತ್ತು. ಹಣ ಕೂಡ ಇರಲಿಲ್ಲ ಎಂದಿದ್ದಾರೆ. ಸಾಮಾನ್ಯ ಹುಡುಗಿಯಾಗಿ ವಿನಮ್ರ ಹಿನ್ನಲೆಯುಳ್ಳ ಕುಟುಂಬದಿಂದ ಚಿತ್ರರಂಗಕ್ಕೆ ಬಂದೆ. ಚಿಕ್ಕ ಪಟ್ಟಣ್ಣದಿಂದ ಬಂದ ನನಗೆ ಇಲ್ಲಿ ಪ್ರೀತಿ, ಘನತೆಗೆ ಅವಕಾಶಲಿರಲಿಲ್ಲ. ಸ್ವಜನಪಕ್ಷಪಾತ, ಭೌತಿಕವಾದ ಜನರ ಜಗತ್ತಿನಲ್ಲಿ ಬದುಕಬೇಕಿತ್ತು. ಎಂದಿದ್ದಾರೆ. ಮುಂದೆ ಓದಿ..

ಭಾರತದ ಶ್ರೀಮಂತ ವ್ಯಕ್ತಿಯಲ್ಲಿ ಒಬ್ಬರಾಗಬೇಕು

ಭಾರತದ ಶ್ರೀಮಂತ ವ್ಯಕ್ತಿಯಲ್ಲಿ ಒಬ್ಬರಾಗಬೇಕು

"ಅಂದು ನಿರ್ಧರಿಸಿದೆ ಉತ್ತಮವಾದ ಮನೆ ಮತ್ತು ಉತ್ತಮ ಕಚೇರಿ ಹೊಂದಬೇಕೆಂದು. 50 ವರ್ಷ ತುಂಬವ ಹೊತ್ತಿಗೆ ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಬೇಕು ಎಂದು ನಿರ್ಧರಿಸಿದ್ದೇನೆ" ಎಂದು ಹೇಳಿದ್ದಾರೆ.

ಪ್ರಶಸ್ತಿ ಸಮಾರಂಭಕ್ಕೆ ಹೋಗಲು ಬಟ್ಟೆ ಇರಲಿಲ್ಲ

ಪ್ರಶಸ್ತಿ ಸಮಾರಂಭಕ್ಕೆ ಹೋಗಲು ಬಟ್ಟೆ ಇರಲಿಲ್ಲ

ಸ್ಟಾರ್ ಕಿಡ್ ಅಲ್ಲದ ಕಾರಣ ಚಿತ್ರರಂಗದ ಪ್ರಾರಂಭದಲ್ಲಿ ತುಂಬಾ ಕಷ್ಟ ಎದುರಿಸಬೇಕಾಯಿತು ಎಂದು ಹೇಳಿದ್ದಾರೆ. ಮೊದಲ ಚಿತ್ರ ಗ್ಯಾಂಗ್ ಸ್ಟಾರ್ ರಿಲೀಸ್ ಆದ ನಂತರ, ಪ್ರಶಸ್ತಿ ಸಮಾರಂಭಕ್ಕೆ ಹಾಜರಾಗಬೇಕಿತ್ತು. ಆದರೆ ಸಮಾರಂಭಕ್ಕೆ ಹೋಗಲು ಬಟ್ಟೆ ಖರೀಧಿಸಲು ಹಣ್ಣ ಇರಲಿಲ್ಲ. ಆ ನಂತರ ಫ್ಯಾಷನ್ ಡಿಸೈನರ್ ರಿಕ್ ರಾಯ್ ಬಟ್ಟೆಯನ್ನು ರೆಡಿಮಾಡಿ ಕೊಟ್ಟರು ಎಂದು ಹೇಳಿದ್ದಾರೆ.

ಡಿಸೈನರ್ ಬಟ್ಟೆ ರೆಡಿ ಮಾಡಿ ಕೊಟ್ಟರು

ಡಿಸೈನರ್ ಬಟ್ಟೆ ರೆಡಿ ಮಾಡಿ ಕೊಟ್ಟರು

"ಆಗ ನನಗೆ ಈ ಬಟ್ಟೆಯನ್ನು ರೆಡಿಮಾಡಿಕೊಟ್ಟ ನಂತರ ಎಲ್ಲಿಂದ ಹಣಪಡೆಯುತ್ತಾರೆ ಎಂದು ಅಶ್ಚರ್ಯ ಪಟ್ಟಿದ್ದೆ. ಯಾರೊ ನನ್ನ ಸಹಾಯಕ್ಕೆ ಬಂದಿರುವುದು ಅದ್ಭುತವಾಗಿದೆ. ಅಲ್ಲಿಂದ ನಾನು ಈಗ ಇಲ್ಲಿವರೆಗೂ ಬಂದಿದ್ದೇನೆ" ಎಂದು ಹೇಳಿದ್ದಾರೆ.

ಕಂಗನಾ ಬಳಿ ಇರುವ ಸಿನಿಮಾಗಳು

ಕಂಗನಾ ಬಳಿ ಇರುವ ಸಿನಿಮಾಗಳು

ಕಂಗನಾ ಕೊನೆಯದಾಗಿ ಪಂಗ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಲೈವಿ, ಧಾಖಡ್, ತೇಜಸ್ ಸೇರಿದ್ದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗೆ ಕಂಗನಾ, ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ಮಾಫಿಯಾದ ಬಗ್ಗೆ ಬಹಿರಂಗ ಪಡಿಸಿದ್ದಾರೆ.

More from Filmibeat

English summary
Bollywood Actress Kangana Ranaut recalls didn't have money to buy clothes for award Functions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X