India
  For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಸಿನಿಮಾಗಳಿಗಿಂತ ದಕ್ಷಿಣದ ಸಿನಿಮಾಗಳೇ ಬೇಸ್ಟ್‌ ಎಂದಿದ್ದೇಕೆ ಕಂಗನಾ?

  |

  ಕಾಂಟ್ರವರ್ಸಿ ಕ್ವೀನ್ ಎಂದೇ ಹೆಸರು ಪಡೆದಿರುವ ಬಾಲಿವುಡ್ ನಟಿ ಕಂಗನಾ ರನೌತ್ ಮತ್ತೊಮ್ಮೆ ದಕ್ಷಿಣ ಭಾರತದ ಸಿನಿಮಾಗಳನ್ನು ಬೆಂಬಲಿಸಿ ಮಾತನಾಡಿದ್ದಾರೆ. ಇತ್ತೀಚಿಗೆ ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಹೇಳಿಕೆಗೆ ಬೆಂಬಲ ಸೂಚಿಸಿದ್ದ ನಟಿ ಕಂಗನಾ ಈಗ ಮತ್ತೆ ಸೌತ್ ಸಿನಿಮಾಗಳನ್ನು ಹಾಡಿ ಹೊಗಳಿದ್ದಾರೆ.

  ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಕಂಗನಾ ಸೌತ್‌ ಸಿನಿಮಾಗಳ ಕುರಿತು ಪ್ರತಿಕ್ರಿಯಿಸಿದ್ದಾರೆ. "ದಕ್ಷಿಣ ಭಾರತದ ಸಿನಿಮಾಗಳು ತಮ್ಮ ಪ್ರೇಕ್ಷಕರೊಂದಿಗೆ ಹೆಚ್ಚಿನ ಸಂಪರ್ಕವನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ಜನರು ಕೂಡ ದಕ್ಷಿಣ ಭಾರತದ ಸಿನಿಮಾಗಳನ್ನು ತುಂಬಾನೇ ಇಷ್ಟ ಪಡುತ್ತಾರೆ. ಏಕೆಂದರೆ, ಅವರ ಪ್ರತಿ ಸಿನಿಮಾಗಳಲ್ಲಿ ಸಂಸ್ಕೃತಿಯ ಬಗ್ಗೆ ಹೆಚ್ಚಾಗಿ ತೋರಿಸುತ್ತಾರೆ. ಇದು ಜನರಿಗೂ ಹೆಚ್ಚು ಹತ್ತಿರವಾಗುವಂತೆ ಇರುತ್ತದೆ." ಎಂದು ಹೇಳಿದ್ದಾರೆ.

  'ಬಾಲಿವುಡ್‌ನ ಕೆಲವರಿಗೆ ಅಭದ್ರತೆ ಕಾಡುತ್ತಿದೆ' ಎಂದ ಕಂಗನಾ ರನೌತ್'ಬಾಲಿವುಡ್‌ನ ಕೆಲವರಿಗೆ ಅಭದ್ರತೆ ಕಾಡುತ್ತಿದೆ' ಎಂದ ಕಂಗನಾ ರನೌತ್

  "ಆದರೆ, ಬಾಲಿವುಡ್‌ ನಟರು ಹಾಗೂ ಅವರ ಸ್ಟಾರ್ ಮಕ್ಕಳು ವಿದೇಶಕ್ಕೆ ಹೋಗುತ್ತಾರೆ. ಅಲ್ಲಿ ಇಂಗ್ಲೀಷ್ ಸಿನಿಮಾಗಳನ್ನು ನೋಡುತ್ತಾರೆ. ಇಂಗ್ಲೀಷ್‌ನಲ್ಲಿ ಮಾತ್ರ ಮಾತನಾಡುತ್ತಾರೆ. ಇದರಿಂದ ಅವರು ಮಾಡುವ ಸಿನಿಮಾಗಳು ಜನರಿಗೆ ಅಷ್ಟಾಗಿ ಹತ್ತಿರವಾಗುವುದಿಲ್ಲ. ಇದು ಪ್ರೇಕ್ಷಕರು ಮತ್ತು ಅವರ ನಡುವೆ ಹೆಚ್ಚು ಅಂತರವನ್ನು ಸೃಷ್ಟಿ ಮಾಡುತ್ತದೆ." ಎಂದು ಕಂಗನಾ ಬಾಲಿವುಡ್ ವಿರುದ್ಧ ಕಿಡಿಕಾರಿದ್ದಾರೆ.

  "ವಿಶ್ವದಾದ್ಯಂತ ಸೂಪರ್ ಹಿಟ್ ಆದ ದಕ್ಷಿಣ ಭಾರತದ ಸಿನಿಮಾ 'ಪುಷ್ಪ' ಸಕ್ಸಸ್‌ ಕಾಣಲು ಪ್ರಮುಖ ಕಾರಣವೇ ಅದು. ಈ ಸಿನಿಮಾದ ಕಥಡ ಜನರೊಂದಿಗೆ ನೇರ ಸಂಪರ್ಕವನ್ನು ಹೊಂದಿದೆ. ಆ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರವು ಜನರಿಗೆ ಹತ್ತಿರವಾಗಿತ್ತು. ತಮ್ಮಲ್ಲಿರುವ ಎಷ್ಟೋ ಜನರ ಜೀವನವನ್ನೇ ಸಿನಿಮಾದಲ್ಲಿ ಪಾತ್ರವನ್ನಾಗಿ ಮಾಡಿ ಅಭಿನಯಿಸಿದ್ದರು. ಹೀಗಾಗಿ ದಕ್ಷಿಣ ಸಿನಿಮಾರಂಗ ಪಾಶ್ಚಿಮಾತ್ಯ ದೇಶಗಳಿಂದ ಸ್ಪೂರ್ತಿ ಪಡೆಯಲು ಇಚ್ಚಿಸುವುದಿಲ್ಲ ಎಂಬುದು ನನ್ನ ಭಾವನೆ." ಹೀಗೆಂದು ದಕ್ಷಿಣ ಭಾರತದ ಸಿನಿಮಾಗಳ ಮೇಲಿನ ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ.

   ನಟ ಮಹೇಶ್‌ ಬಾಬು ಹೇಳಿಕೆ ಸರಿಯಾಗಿದೆ: ಕಾಂಟ್ರವರ್ಸಿ ಕ್ವೀನ್ ನಟಿ ಕಂಗನಾ! ನಟ ಮಹೇಶ್‌ ಬಾಬು ಹೇಳಿಕೆ ಸರಿಯಾಗಿದೆ: ಕಾಂಟ್ರವರ್ಸಿ ಕ್ವೀನ್ ನಟಿ ಕಂಗನಾ!

  "ದಕ್ಷಿಣ ಭಾರತದ ಸಿನಿಮಾಗಳ ಕಥೆಗಳಿಗೆ ಹೋಲಿಸಿದರೆ, ಬಾಲಿವುಡ್‌ ಸಿನಿಮಾಗಳಲ್ಲಿ ಅಷ್ಟಾಗಿ ಕಥೆಗಳು ಚೆನ್ನಾಗಿರುವುದಿಲ್ಲ. ಅದು ಚಿತ್ರದಲ್ಲಿ ನಟಿಸುವ ನಾಯಕನಿಗೂ ಸಂಬಂಧವಿರುವುದಿಲ್ಲ. ಹೀಗಾಗಿ ಜನರಿಗೆ ಬಾಲಿವುಡ್ ಸಿನಿಮಾಗಳು ಅಷ್ಟಾಗಿ ಹತ್ತಿರವಾಗುವುದಿಲ್ಲ. ಬಾಲಿವುಡ್‌ನಲ್ಲಿರುವ ಹೆಚ್ಚಿನ ಸ್ಕ್ರೀಪ್ಟ್‌ಗಳು ಕಳಪೆ ಗುಣಮಟ್ಟದಲ್ಲಿವೆ. ಹಾಗಾಗಿ ನಾನು ದೊಡ್ಡ ಪ್ರೊಡಕ್ಷನ್ ಹೌಸ್‌ಗಳು ಹಾಗೂ ಹೀರೊಗಳೊಂದಿಗೆ ಮಾಡಬೇಕಿದ್ದ ಹಲವು ಸಿನಿಮಾಗಳು ಕಳಪೆ ಗುಣಮಟ್ಟದ್ದಾಗಿದ್ದ ಕಾರಣ ಅಂತಹ ಸಿನಿಮಾಗಳನ್ನು ನಾನು ತಿರಸ್ಕರಿಸಿದ್ದೆ" ಎಂದು ಹೇಳಿಕೆ ಕೊಟ್ಟಿದ್ದಾರೆ.

  Kangana Ranaut Says many Bollywood Scripts are not good
  KGF 2 Collection | KGF 2 ಖಜಾನೆಗೆ 1200ಕೋಟಿ ? | Yash | Prashanth Neel | #KGF2Collection

  ಮೇ 20 ರಂದು ಕಂಗನಾ ಅಭಿನಯಿಸಿರುವ 'ಧಾಕಡ್' ಸಿನಿಮಾ ಬೆಳ್ಳಿತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಈಗಾಗಲೇ ಚಿತ್ರದ ಪ್ರಚಾರ ಕಾರ್ಯವನ್ನು ಕಂಗನಾ ಹಾಗೂ ಚಿತ್ರತಂಡ ಆರಂಭಿಸಿದೆ. ಸಿನಿಮಾದಲ್ಲಿ ಕಂಗನಾ ಮುಖ್ಯಭೂಮಿಕೆಯಲ್ಲಿದ್ದು, ಅರ್ಜುನ್ ರಾಂಪಾಲ್, ದಿವ್ಯಾ ದತ್ತ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಹಾಡು, ಟ್ರೈಲರ್‌ಗಳಿಂದ ವೀಕ್ಷಕರನ್ನು ರಂಜಿಸಿರುವ ಸಿನಿಮಾ ಮೇ 20 ರಂದು ಸಿನಿ ಪ್ರೇಕ್ಷಕರ ನಿರೀಕ್ಷೆಯನ್ನು ಮೀರಿಸುವಂತೆ ಮನರಂಜನೆ ನೀಡುತ್ತಾ ಕಾದು ನೋಡಬೇಕಿದೆ.

  English summary
  Kangana Ranaut, who never minces her words, has yet again spoken in support of South films. Hailing their ability to stay connected with their audience..

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X