For Quick Alerts
  ALLOW NOTIFICATIONS  
  For Daily Alerts

  ಹಿಂದಿ ಸಿನಿಮಾರಂಗಕಿಂತ ತೆಲುಗು ಸಿನಿಮಾರಂಗ ಗ್ರೇಟ್ ಎಂದ ನಟಿ ಕಂಗನಾ

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಹಿಂದಿ ಸಿನಿಮಾರಂಗಕಿಂತ ಟಾಲಿವುಡ್ ಸಿನಿಮಾರಂಗ ಉನ್ನತ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ. ಭಾರತೀಯ ಸಿನಿಮಾರಂಗ ಎಂದರೆ ಬಾಲಿವುಡ್ ಅಂತ ಅನೇಕರು ಹೇಳುತ್ತಾರೆ. ಆದರೆ ಹಿಂದಿ ಸಿನಿಮಾಗಳಿಂತಲೂ ದಕ್ಷಿಣ ಭಾರತೀಯ ಸಿನಿಮಾಗಳು ಹೆಚ್ಚು ಗುಣಮಟ್ಟ ಹೊಂದಿರುತ್ತವೆ ಎಂದು ಕಂಗನಾ ಹೇಳಿದ್ದಾರೆ

  ಇತ್ತೀಚಿಗೆ ಕಂಗನಾ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಮತ್ತು ಶಿವಸೇನಾ ವಿರುದ್ಧ ಕೆಂಡಕಾರುತ್ತಿರುವ ಕಂಗನಾ ವಿವಾದಾತ್ಮಕ ಹೇಳಿಕೆಗಳ ಮೂಲಕ ಅನೇಕರ ವಿರೋಧ ಕಟ್ಟಿಕೊಳ್ಳುತ್ತಿದ್ದಾರೆ. ನಟಿ ಊರ್ಮಿಳಾ ಮಾತೋಂಡ್ಕರ್ ಮತ್ತು ಕಂಗನಾ ನಡುವೆ ವಾಕ್ಸಮರ ನಡೆಯುತ್ತಿದೆ. ಈ ನಡುವೆ ಈಗ ಕಂಗನಾ ಟಾಲಿವುಡ್ ಸಿನಿಮಾರಂಗದ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ..

  ಎರಡು ಕೋಟಿ ಕೇಳಿದ ಕಂಗನಾ ವಿರುದ್ಧ ಹರಿಹಾಯ್ದ ಬಿಎಂಸಿಎರಡು ಕೋಟಿ ಕೇಳಿದ ಕಂಗನಾ ವಿರುದ್ಧ ಹರಿಹಾಯ್ದ ಬಿಎಂಸಿ

  ಟಾಲಿವುಡ್ ಸಿನಿಮಾರಂಗ ಹೊಗಳಿದ ಕಂಗನಾ

  ಟಾಲಿವುಡ್ ಸಿನಿಮಾರಂಗ ಹೊಗಳಿದ ಕಂಗನಾ

  ಸರಣಿ ಟ್ವೀಟ್ ಮಾಡಿರುವ ಕಂಗನಾ ಟಾಲಿವುಡ್ ಸಿನಿಮಾರಂಗವನ್ನು ಹಾಡಿಹೊಗಳಿದ್ದಾರೆ. "ಭಾರತದಲ್ಲಿ ಹಿಂದಿ ಸಿನಿಮಾರಂಗವೆ ಗ್ರೇಟ್ ಎಂದು ಜನರು ಅಂದುಕೊಂಡಿರುವುದು ತಪ್ಪು. ಹಿಂದಿಗಿಂತ ತೆಲುಗು ಸಿನಿಮಾರಂಗ ಉನ್ನತ ಸ್ಥಾನಕ್ಕೆ ಏರಿದೆ. ದಕ್ಷಿಣ ಭಾರತೀಯ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಾಣುತ್ತಿವೆ. ಅನೇಕ ಹಿಂದಿ ಸಿನಿಮಾಗಳು ಹೈದರಾಬಾದ್ ನಲ್ಲಿ ಚಿತ್ರೀಕರಣಗೊಳ್ಳುತ್ತವೆ" ಎಂದು ಕಂಗನಾ ಹೇಳಿದ್ದಾರೆ.

  ಪ್ರಾದೇಶಿಕ ಭಾಷೆಯ ಚಿತ್ರಗಳಿಗೆ ಮಾನ್ಯತೆ ಸಿಗುತ್ತಿಲ್ಲ

  ಪ್ರಾದೇಶಿಕ ಭಾಷೆಯ ಚಿತ್ರಗಳಿಗೆ ಮಾನ್ಯತೆ ಸಿಗುತ್ತಿಲ್ಲ

  "ಡಬ್ ಆದ ಅತ್ಯುತ್ತಮ ಪ್ರಾದೇಶಿಕ ಚಿತ್ರಗಳು ದೇಶದಾದ್ಯಂತ ರಿಲೀಸ್ ಆಗಲು ಸಾಧ್ಯವಾಗುತ್ತಿಲ್ಲ. ಆದರೆ ಹಾಲಿವುಡ್ ಚಿತ್ರಗಳು ಡಬ್ ಆಗಿ ದೊಡ್ಡ ಮಟ್ಟದಲ್ಲಿ ತೆರೆಕಾಣುತ್ತಿರುವುದು ಆತಂಕಕಾರಿ ವಿಚಾರ. ಹಿಂದಿ ಚಿತ್ರಗಳ ಕಳಪೆ ಗುಣಮಟ್ಟ ಮತ್ತು ಚಿತ್ರಮಂದಿರಗಳ ಮೇಲೆ ಹೊಂದಿರುವ ಪ್ರಾಬಲ್ಯವೇ ಇದಕ್ಕೆಲ್ಲ ಕಾರಣ" ಎಂದು ಟ್ವೀಟ್ ಮಾಡಿದ್ದಾರೆ.

  ಕಂಗನಾ ರಣಾವತ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ನಟಿ ಸನ್ನಿ ಲಿಯೋನ್ಕಂಗನಾ ರಣಾವತ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ನಟಿ ಸನ್ನಿ ಲಿಯೋನ್

  ಕಂಗನಾ ಹೇಳಿಕೆಗೆ ಪರ-ವಿರೋಧ ಚರ್ಚೆ

  ಕಂಗನಾ ಹೇಳಿಕೆಗೆ ಪರ-ವಿರೋಧ ಚರ್ಚೆ

  ಕಂಗನಾ ಹೇಳಿಕೆಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಬಾಲಿವುಡ್ ಸಿನಿಮಾರಂಗದಲ್ಲೇ ಇದ್ದುಕೊಂಡು ಬಾಲಿವುಡ್ ವಿರುದ್ಧ ಮಾಡುತ್ತಿರುವ ಕಂಗನಾ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಕಂಗನಾ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.

  ಇದು ಕನ್ನಡದ ಹೆಣ್ಣು ಮಗಳ ಹೃದಯ | Pranitha | Filmibeat Kannada
  ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಅಭಿನಯಿಸಿರುವ ಕಂಗನಾ

  ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಅಭಿನಯಿಸಿರುವ ಕಂಗನಾ

  ನಟಿ ಕಂಗನಾ ಈಗಾಗಲೇ ದಕ್ಷಿಣ ಭಾರತೀಯ ಸಿನಿಮಾರಂಗಲ್ಲಿ ನಟಿಸಿದ್ದಾರೆ. ಹಿಂದಿ ಸಿನಿಮಾರಂಗಕ್ಕೆ ಕಾಲಿಟ್ಟ ಪ್ರಾರಂಭದಲ್ಲಿ ಕಂಗನಾ ತಮಿಳು ಚಿತ್ರದಲ್ಲಿಯೂ ನಟಿಸಿದ್ದಾರೆ. ಬಳಿಕ ಟಾಲಿವುಡ್ ಗೂ ಕಾಲಿಟ್ಟಿರುವ ಕಂಗನಾ ರೆಬೆಲ್ ಸ್ಟಾರ್ ಪ್ರಭಾಸ್ ಗೆ ನಾಯಕಿಯಾಗಿ ಮಿಂಚಿದ್ದಾರೆ. ಅಲ್ಲದೆ ಪ್ರಭಾಸ್ ಅಭಿನಯದ ಬಾಹುಬಲಿ ಸಿನಿಮಾನ್ನು ನೋಡಿ ಕಂಗನಾ ಮೆಚ್ಚಿಕೊಂಡಿದ್ದಾರೆ .

  English summary
  Kangana Ranaut says People’s perception that top film industry in India is Hindi film Industry is wrong. Tollywood is the top Indutry in India.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X