ದುಡ್ಡು, ದರ್ಪ, ಅಹಂಕಾರ ; 12th ಫೇಲ್ ಚಿತ್ರದ ನಿರ್ದೇಶಕನ ಪತ್ನಿಯ ಮೇಲೆ ಕೆಂಡ ಕಾರಿದ್ದೇಕೆ ಕಂಗನಾ ?
ಸಿನಿಮಾಗಳಿಗಿಂತ ವಿವಾದ ಹಾಗೂ ಹುಸಿ ಮುನಿಸುಗಳ ಮೂಲಕವೇ ಸದ್ದು ಮಾಡುವ ನಟಿ ಕಂಗನಾ ರಣಾವತ್. ಯಾರ ಮುಲಾಜು ನೋಡದೇ ನಿರ್ಭಿಡೆಯ ಮಾತುಗಳಿಂದನೇ ಹಿಂದಿ ಉದ್ಯಮವನ್ನ ನಡುಗಿಸುವ ಕಂಗನಾ, ಸದ್ಯಕ್ಕೆ 12th ಫೇಲ್ ಚಿತ್ರದ ನಿರ್ದೇಶಕ -ನಿರ್ಮಾಪಕ ವಿಧು ವಿನೋದ್ ಚೋಪ್ರಾ ಅವರ ಪತ್ನಿ ಅನುಪಮಾ ಚೋಪ್ರಾ ಮೇಲೆ ಕೆಂಡ ಕಾರಿದ್ದಾರೆ. ಅಭದ್ರತೆಯಿಂದ ನರಳುವ ಹೆಣ್ಣು ಎಂದಿದ್ದಾರೆ.
ಪತಿಯ ಏಳಿಗೆ ಸಹಿಸದ ಪತ್ನಿ
ಗಂಡನ ಜನಪ್ರಿಯತೆಯನ್ನ ಬಳಿಸಿಕೊಂಡು, ಬೇರೆ ಬೇರೆ ವ್ಯಾಪಾರ ವ್ಯವಹಾರವನ್ನ ನಡೆಸುವ ಅನುಪಮಾ ಚೋಪ್ರಾ, ಗಂಡನ ಖ್ಯಾತಿಯಿಂದಲೇ ಹಣ ಹೆಸರನ್ನೂ ಕೂಡ ಗಳಿಸಿದ್ದಾರೆ. ನಿರ್ದೇಶಕನ ಪತ್ನಿ ಎಂಬ ಕಾರ್ಡ್ ನ್ನೇ ಬಳಿಸಿಕೊಂಡು, ಬಾಲಿವುಡ್ ನ ಪಾರ್ಟಿಗಳಿಗೆ ಹೋಗುತ್ತಾರೆ. ಗಾಸಿಪ್ ಗ್ಯಾಂಗ್ ಜೊತೆ ಸೇರಿಕೊಂಡು ಕಾಲಹರಣದ ಜೊತೆಗೆ ಬೇರೆಯವರ ಮಾನ ಹರಣವನ್ನೂ ಮಾಡುತ್ತಾರೆ.

ನಿಜವಾದ ಪ್ರತಿಭಾವಂತರನ್ನ ಗುರುತಿಸದೇ , ಒಳ್ಳೇಯ ಸಿನಿಮಾಗಳ ಬಗ್ಗೆ ಒಳ್ಳೇಯ ಮಾತುಗಳನ್ನಾಡದೆ ಕೇವಲ ಗಾಸಿಪ್ ಗ್ಯಾಲರಿಯಲ್ಲಿ ಕಾಣಿಸುವ ಅನುಪಮಾ ಚೋಪ್ರಾ ಪತ್ರಕರ್ತೆಯ ಸೋಗಿನಲ್ಲಿರುವ ವಿಷ ಜಂತು ಎಂದು ಗುಡುಗಿದ್ದಾರೆ ಕಂಗನಾ ರಣಾವತ್
ಅನುಪಮಾ ಮೇಲೆ ಕಿಡಿ ಕಾರಿದ್ದೇಕೆ ಕಂಗನಾ
ಅಸಲಿಗೆ ಗಲ್ಲಾಪೆಟ್ಟಿಗೆಯಲ್ಲಿ ಕೋಟ್ಯಂತರ ಹಣ ಲೂಟಿ ಮಾಡಿ, ಒಟಿಟಿಯಲ್ಲಿಯೂ ಜನಮನ ಗೆದ್ದ 12th ಫೇಲ್ ಸಿನಿಮಾವನ್ನ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡದಂತೆ ಅನುಪಮಾ ತಮ್ಮ ಪತಿ ವಿಧು ವಿನೋದ್ ಚೋಪ್ರಾ ಅವರಿಗೆ ಸಲಹೆಯನ್ನ ನೀಡಿದ್ದರು. ಈ ಚಿತ್ರವನ್ನ ಚಿತ್ರಮಂದಿರದಲ್ಲಿ ಜನ ಮೂಸಿಯೂ ನೋಡಲ್ಲ, ಎಂದಿದ್ದರು. ಇನ್ನೂ ಬಾಲಿವುಡ್ ಪಂಡಿತರು ಕೂಡ ಚಿತ್ರ 30 ಲಕ್ಷವನ್ನೂ ಕೂಡ ಗಳಿಸಲ್ಲ ಎಂಬ ಭವಿಷ್ಯ ನುಡಿದಿದ್ದರು. ಆದರೆ, ಈ ಭವಿಷ್ಯವಾಣಿ ಸುಳ್ಳಾಯಿತು.
ಅನುಪಮಾ ಲೆಕ್ಕಾಚಾರ ಕೂಡ ತಲೆ ಕೆಳಗಾಯಿತು. 12th ಫೇಲ್ ಸಿನಿಮಾ ಮಾಡಿದ ಅತ್ಯದ್ಭುತ ಸಾಧನೆ ಈಗ ಕಣ್ಮುಂದೆಯೇ ಇದೆ. ಈ ವಿಚಾರವನ್ನ ವಿಧು ವಿನೋದ್ ಚೋಪ್ರಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು. ಇದೇ ವಿಚಾರವನ್ನ ಮುಂದಿಟ್ಟುಕೊಂಡು, ಕಂಗನಾ ರಣಾವತ್ ಅನುಪಮಾ ಚೋಪ್ರಾ ಮೇಲೆ ಮಾತಿನ ದಾಳಿಯನ್ನ ಮಾಡಿದ್ದಾರೆ

12th ಫೇಲ್ ನಾಯಕನನ್ನ ಜಿರಲೆ ಎಂದಿದ್ದ ನಟಿ
2021ರಲ್ಲಿ ಬಾಲಿವುಡ್ ನಟಿ ಯಾಮಿ ಗೌತಮ್, ಉರಿ ಚಿತ್ರದ ನಿರ್ದೇಶಕ ಆದಿತ್ಯ ಅವರನ್ನ ಮದುವೆಯಾದಾಗ ಕಂಗನಾ ರಣಾವತ್, ಹಿಮಾಚಲ ಪ್ರದೇಶದ ವಧು ಗಾರ್ಜಿಯಸ್ ಮತ್ತು ನೋಡಲು ದೇವಿಯ ರೀತಿಯಲ್ಲಿ ಕಾಣುತ್ತಿದ್ದಾರೆ ಎಂದು ಯಾಮಿ ಫೋಟೋಗೆ ಕಮೆಂಟ್ ಮಾಡಿದ್ದರು.
ಇದೇ ಫೋಟೋಗೆ ಆಗಿನ್ನೂ ತನ್ನ ಅಸ್ತಿತ್ವದ ಹುಡುಕಾಟದಲ್ಲಿದ್ದ 12th ಫೇಲ್ ಚಿತ್ರದ ನಾಯಕ ವಿಕ್ರಾಂತ್ ಮೆಸ್ಸಿ, ಶುದ್ಧ ಮತ್ತು ಪವಿತ್ರ, ನೋಡಲು ಅಚ್ಚು ರಾಧೆ ಮಾ.. ಎಂದು ಬರೆದುಕೊಂಡಿದ್ದರು. ಈ ಕಮೆಂಟ್ ಗೆ ಪ್ರತಿಕ್ರಿಯಿಸಿದ್ದ ಕಂಗನಾ, ಎಲ್ಲಿಂದ ಬಂತು ಈ ಜಿರಳೆ, ನನ್ನ ಚಪ್ಪಲಿಯನ್ನ ಕೊಡಿ ಎಂದು ಹೇಳಿದ್ದರು

ಜಿರಲೆ ಎಂದ ನಟನನ್ನೇ ಹೊಗಳಿದ್ದ ಕಂಗನಾ
ಮೂರು ವರ್ಷದ ಹಿಂದೆ ವಿಕ್ರಾಂತ್ ಮೆಸ್ಸಿಯನ್ನ ಜಿರಲೆ ಎಂದಿದ್ದ ಕಂಗನಾ, 12 th ಚಿತ್ರ ನೋಡಿದ ನಂತರ ವಿಕ್ರಾಂತ್ ಮೆಸ್ಸಿಯನ್ನ ಬಾಯ್ತುಂಬ ಹೊಗಳಿದ್ದರು. ಖ್ಯಾತ ನಟ ಇರ್ಫಾನ್ ಖಾನ್ ಅವರ ಜೊತೆ ವಿಕ್ರಾಂತ್ ಅವರನ್ನ ಹೋಲಿಸಿದ್ದರು. ಎಂತಹ ಒಳ್ಳೆಯ ಕಥೆಯಿರುವ ಚಿತ್ರ ಮಾಡಿದ್ದಾರೆ.. ನಾನು ಸಹ ಹಿಂದಿ ಮಾಧ್ಯಮದಲ್ಲಿ ಓದಿದ್ದು, ಹಳ್ಳಿಗೆ ಸೇರಿದ ನಾನು ನನ್ನ ಶಾಲಾ ದಿನಗಳಲ್ಲಿ ಮೀಸಲಾತಿ ಇಲ್ಲದೆ ಪ್ರವೇಶ ಪರೀಕ್ಷೆಗೆ ಸಾಮಾನ್ಯ ವರ್ಗದ ವಿದ್ಯಾರ್ಥಿಯಾಗಿದ್ದೆ, ನಾನು ಸಿನಿಮಾ ನೋಡುತ್ತಾ ಅಳುತ್ತಿದ್ದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.
ವಿಧು ಸರ್ ಮತ್ತೊಮ್ಮೆ ನನ್ನ ಹೃದಯವನ್ನು ಗೆದ್ದಿದ್ದಾರೆ, ವಿಕ್ರಾಂತ್ ಮಾಸ್ಸೆ ಅವರ ನಟನೆ ಅದ್ಭುತವಾಗಿದೆ!! ಮುಂಬರುವ ವರ್ಷಗಳಲ್ಲಿ ಅವರು ಇರ್ಫಾನ್ ಖಾನ್ ಸಾಬ್ ಅವರು ಬಿಟ್ಟು ಹೋಗಿರುವ ಸ್ಥಳವನ್ನು ತುಂಬಬಹುದು. ನಿಮ್ಮ ಪ್ರತಿಭೆಗೆ ನನ್ನ ನಮಸ್ಕಾರಗಳು ಎಂದಿದ್ದರು ಕಂಗನಾ
ಇಂತಹ ಕಂಗನಾ ರಣಾವತ್ ಇದೀಗ ವಿಧು ವಿನೋದ್ ಚೋಪ್ರಾ ಪತ್ನಿ ಅನುಪಮಾ ಮೇಲೆ ಹರಿಹಾಯ್ದಿದ್ದಾರೆ. ಕಂಗನಾ ಅವರ ಈ ಮಾತುಗಳಿಗೆ ಅನುಪಮಾ ಚೋಪ್ರಾ ಹೇಗೆ ರಿಯ್ಯಾಕ್ಟ್ ಮಾಡ್ತಾರೆ ಅನ್ನುವುದನ್ನ ಈಗ ಕಾದು ನೋಡಬೇಕಿದೆ'


Click it and Unblock the Notifications











