twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ವಿರುದ್ಧ ಹೋರಾಡಿದ ಅನುಭವ ಹಂಚಿಕೊಂಡ ಕಂಗನಾ ರನೌತ್

    |

    (ಸೂಚನೆ: ಕೊರೊನಾ ಪಾಸಿಟಿವ್ ಬಂದವರು ಕೂಡಲೇ ವೈದ್ಯರನ್ನು ಸಂಪರ್ಕಿಸಿ ವೈದ್ಯರ ಸಲಹೆ ಪಡೆದು ಔಷಧಗಳನ್ನು ಪಡೆಯಿರಿ. ಸ್ವಯಂ ವೈದ್ಯ ಅಪಾಯಕಾರಿ ಆಗಬಹುದು)

    ಕೆಲವು ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಆಗಿದ್ದ ನಟಿ ಕಂಗನಾ ಮತ್ತೆ ಪರೀಕ್ಷೆಗೆ ಒಳಪಟ್ಟಿದ್ದು ಕೊರೊನಾ ನೆಗೆಟಿವ್ ವರದಿ ಪಡೆದಿದ್ದಾರೆ.

    ತಮಗೆ ಕೊರೊನಾ ನೆಗೆಟಿವ್ ಬಂದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಕಂಗನಾ, ತಾವು ಕೊರೊನಾ ಪಾಸಿಟಿವ್ ಆಗಿದ್ದಾಗ ಏನೇನು ಸಮಸ್ಯೆಗಳನ್ನು ಎದುರಿಸಿದೆ ಹಾಗೂ ಕೊರೊನಾವನ್ನು ಹೇಗೆ ಮಣಿಸಿದೆ ಎಂದು ಹೇಳಿಕೊಂಡಿದ್ದಾರೆ.

    'ನನಗೆ ಕೊರೊನಾ ಪಾಸಿಟಿವ್ ಆದಾಗ ಸಿಟಿ ಸ್ಕ್ಯಾನ್ ಮಾಡಿಸಿದ್ದೆ ಆಗ ಸಿಟಿ ಕೌಂಟ್ 18 ಇತ್ತು. ಇದು ಬಹಳ ಕಡಿಮೆ. ಈ ಏಳೆಂಟು ದಿನಗಳಲ್ಲಿ ನಾನು ಕೊರೊನಾ ವಿರುದ್ಧ ಹೋರಾಡಿದೆ. ಈ ವಿಷಯ ನಿಮ್ಮೊಂದಿಗೆ ಹಂಚಿಕೊಳ್ಳೋಣ ಎಂದು ಕೊಂಡೆ ಆದರೆ ಕೆಲವರು ಅದರ ಬಗ್ಗೆಯೂ ನೆಗೆಟಿವ್ ಆಗಿ ಮಾತನಾಡಿದರು. ಆದರೆ ನನ್ನ ಅಕ್ಕ ನನಗೆ ಪ್ರೇರಣೆ ನೀಡಿದರು ಹಾಗಾಗಿ ನನ್ನ ಅನುಭವ ಹಂಚಿಕೊಳ್ಳುತ್ತಿದ್ದೇನೆ' ಎಂದಿದ್ದಾರೆ ಕಂಗನಾ.

    'ಯಾವುದಕ್ಕೂ ಹೆದರಬೇಡಿ ನೀವು ಹೆದರಿದರೆ ನಿಮ್ಮ ಮನಸ್ಸಿನಲ್ಲಿ ವೈರಿಯನ್ನು ದೊಡ್ಡದಾಗಿ ಕಲ್ಪಿಸಿಕೊಳ್ಳಲು ಆರಂಭಿಸುತ್ತೀರ ಆಗ ನಿಮ್ಮ ವೈರಿಯನ್ನು ನಿಮಗೆ ಸೋಲಿಸಲು ಆಗುವುದಿಲ್ಲ' ಎಂದಿದ್ದಾರೆ ಕಂಗನಾ.

    'ಮೂರು ವಿಭಾಗಗಳಾಗಿ ವಿಂಗಡಿಸಿಕೊಂಡು ಹಾರಾಟಕ್ಕಿಳಿಯಿರಿ'

    'ಮೂರು ವಿಭಾಗಗಳಾಗಿ ವಿಂಗಡಿಸಿಕೊಂಡು ಹಾರಾಟಕ್ಕಿಳಿಯಿರಿ'

    'ನಿಮಗೆ ವೈರಸ್ ಸಮಸ್ಯೆ ಎದುರಾದಾಗ ಸಮಸ್ಯೆಯನ್ನು ದೈಹಿಕ, ಮಾನಸಿಕ, ಭಾವನಾತ್ಮ ಎಂದು ಮೂರು ವಿಭಾಗಗಳಾಗಿ ವಿಂಗಡಿಸಿ ಹೋರಾಡಲು ಅಣಿಯಾಗಿ. ನಿಮಗೆ ದೈಹಿಕವಾಗಿ ಏನು ಸಮಸ್ಯೆ ಆಗುತ್ತಿದೆ ಎಂದು ಮೊದಲು ಗುರುತಿಸಿಕೊಳ್ಳಿ. ನನಗೆ ಕೊರೊನಾ ಪಾಸಿಟಿವ್ ಆಗಿದ್ದಾಗ ವಾಸನೆ, ರುಚಿ ನಿಂತಿತ್ತು, ದೈಹಿಕವಾಗಿ ಬಹಳ ಸುಸ್ತು ಕಾಡುತ್ತಿತ್ತು' ಎಂದಿದ್ದಾರೆ ಕಂಗನಾ.

    ದಿನಕ್ಕೆ ಮೂರು ಬಾರಿ ಸ್ಟೀಮ್ ತೆಗೆದುಕೊಳ್ಳುತ್ತಿದ್ದೆ: ಕಂಗನಾ

    ದಿನಕ್ಕೆ ಮೂರು ಬಾರಿ ಸ್ಟೀಮ್ ತೆಗೆದುಕೊಳ್ಳುತ್ತಿದ್ದೆ: ಕಂಗನಾ

    'ನಾನು ದಿನಕ್ಕೆ ಮೂರು ಬಾರಿ ಸ್ಟೀಮ್ ತೆಗೆದುಕೊಳ್ಳುತ್ತಿದ್ದೆ. ಕಶಾಯ ಕುಡಿಯುತ್ತಿದ್ದೆ. ಬಿಸಿ ನೀರಲ್ಲಿ ಉಪ್ಪು ಬೆರೆಸಿ ಗಾಗಲ್ ಮಾಡುತ್ತಿದ್ದೆ. ಅಜ್ವೈನ್, ಕಾಳು ಮೆಣಸು, ಅರಿಶಿನ ಇತರೆ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿ ಕಶಾಯ ಮಾಡಿಕೊಂಡು ಕುಡಿಯಿರಿ' ಎಂದರು ಕಂಗನಾ.

    'ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ'

    'ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ'

    'ಕೊರೊನಾ ಸಮಯದಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಅವಶ್ಯಕ. ನಾನು ಕೆಲವು ಸರಳ ಯೋಗಾಸನ ಮಾಡುತ್ತಿದ್ದೆ. ಕೊರೊನಾ ಸಮಯದಲ್ಲಿ ಧ್ಯಾನ ಮಾಡುವುದು ಕಷ್ಟವಾಗಿಬಿಡುತ್ತದೆ. ಆದರೆ ಬಿಡದೆ ನಾನು ಧ್ಯಾನ ಮಾಡಿದೆ' ಎಂದಿದ್ದಾರೆ ಕಂಗನಾ.

    ಓಂಕಾರ ಹೇಳಿ, ಕಪಾಲಬಾತಿ ಮಾಡಿ: ಕಂಗನಾ

    ಓಂಕಾರ ಹೇಳಿ, ಕಪಾಲಬಾತಿ ಮಾಡಿ: ಕಂಗನಾ

    'ಕೊರೊನಾ ಸಮಯದಲ್ಲಿ ನಗೆಟಿವ್ ಆಲೋಚನೆಗಳು ಸಾಕಷ್ಟು ಬರುತ್ತಿರುತ್ತವೆ. ಹಾಗಾಗಿ ಪ್ರಾಣಾಯಮ ಮಾಡಿ. ಓಂಕಾರ ಹೇಳಿ, ಕಪಾಲಬಾತಿ ಮಾಡಿ ಇನ್ನೂ ಕೆಲವು ಯೋಗಾಸನಗಳನ್ನು ಮಾಡಿ. ಕೊರೊನಾ ಸಮಯದಲ್ಲಿ ನನಗೆ ಸಿಟ್ಟು ಬರುವುದು ಸಿಡಿಮಿಡಿಗೊಳ್ಳುವುದು ಆಗುತ್ತಿತ್ತು ಅದೆಲ್ಲದರಿಂದ ನನ್ನನ್ನು ಯೋಗಾಸನ ಕಾಪಾಡಿತು ಎಂದಿದ್ದಾರೆ ಕಂಗನಾ.

    Recommended Video

    ನೆಚ್ಚಿನ ಟೀಂ RCB, ಆದ್ರೆ ನೆಚ್ಚಿನ ಪ್ಲೇಯರ್ ಇರೋದು CSK ನಲ್ಲಿ ಎಂದ ರಶ್ಮಿಕಾ ಮಂದಣ್ಣ | Filmibeat Kannada
    ಹನುಮಾನ್ ಚಾಳೀಸ ಕೇಳಿದೆ ಎಂದ ಕಂಗನಾ

    ಹನುಮಾನ್ ಚಾಳೀಸ ಕೇಳಿದೆ ಎಂದ ಕಂಗನಾ

    'ಕೊರೊನಾ ಬಂದಿದ್ದ ಸಮಯದಲ್ಲಿ ನಾನು ಹನುಮಾನ ಚಾಳಿಸ ಹೆಚ್ಚು ಕೇಳಿದೆ. ಗಾಯತ್ರಿ ಮಂತ್ರ ಕೇಳಿದೆ ಇತರೆ ದೇವರನಾಮಗಳನ್ನು ಹೆಚ್ಚು ಕೇಳಿದೆ. ಇದೆಲ್ಲವೂ ನಾನು ಶಾಂತವಾಗಿರಲು ಸಹಕರಿಸಿತು' ಎಂದಿದ್ದಾರೆ ಕಂಗನಾ. ಕಂಗನಾ ಅವರು ತಮ್ಮ ವಿಡಿಯೋದಲ್ಲಿ ತಾವು ಯಾವ ಮಾತ್ರೆ ತೆಗೆದುಕೊಂಡೆ, ಯಾವ ವೈದ್ಯರು ಏನು ಸಲಹೆ ನೀಡಿದರು ಎಂದು ಹೇಳಿಲ್ಲ.

    English summary
    Actress Kangana Ranaut shares her experience battling coronavirus. She said stay strong beat coronavirus.
    Wednesday, May 19, 2021, 20:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X