ಕಂಗನಾ ಬದುಕಿನ ಕರಾಳ ಘಟನೆಗಳು: ಅಬ್ಬಾ ಭಯಾನಕ!

ಕಂಗನಾ ರನೌತ್ ಬಾಲಿವುಡ್‌ನ ಧೈರ್ಯವಂತ ನಟಿ. ಗಾಡ್‌ಫಾದರ್ ಇಲ್ಲದೆ ಬಾಲಿವುಡ್‌ಗೆ ಅಡಿಯಿಟ್ಟ ಕಂಗನಾ ಈಗ ಇಡೀಯ ಬಾಲಿವುಡ್‌ ಮೇಲೆಯೇ ಯುದ್ಧ ಸಾರಿದ್ದಾರೆ.

Recommended Video

ಹಳ್ಳಿ ಹುಡುಗಿ ಲುಕ್ಕಲ್ಲಿ ರಚಿತಾ ಫುಲ್ ಮಿಂಚಿಂಗ್ | Rachita Ram Grand entry | Filmibeat Kannada

ನೇರ, ನಿಷ್ಠುರವಾಗಿ ತನಗೆ ತೋಚಿದ್ದು ಮಾತನಾಡುವ, ವಿವಾದಗಳಿಗೆ ಹೆದರದೇ ಸ್ಟಾರ್, ಸೂಪರ್ ಸ್ಟಾರ್‌ಗಳ ಬಗ್ಗೆಯೂ ಎಗ್ಗು-ಸಿಗ್ಗಲ್ಲದೆ ಆರೋಪಗಳನ್ನು ಮಾಡುವ ಕಂಗನಾಳ ಈ ನಿರ್ಭೀತ ವರ್ತನೆಗೆ ಆಕೆಯ ಜೀವನದಲ್ಲಿ ನಡೆದಿರುವ ಘಟನೆಗಳೇ ಮುಖ್ಯ ಕಾರಣ.

ಬಹಳ ಕಠಿಣವಾದ ಜೀವನ ಕಂಡಿದ್ದಾರೆ ನಟಿ ಕಂಗನಾ. 18 ತುಂಬುವ ಮೊದಲೇ ನಟಿಯಾಗಲು ಮನೆ ಬಿಟ್ಟು ಬಂದ ಕಂಗನಾ, ಬಾಲಿವುಡ್‌ನ ಥಳುಕು-ಬಳುಕು ಜಗತ್ತಿನಲ್ಲಿ ಬಹುತೇಕ ಹಾದಿ ತಪ್ಪಿಬಿಟ್ಟಿದ್ದರು. ಅಥವಾ ಹಾದಿ ತಪ್ಪಿಸಿಬಿಟ್ಟಿದ್ದರು. ಎಷ್ಟರ ವರೆಗೆ ಎಂದರೆ ದುಬೈ ಶೇಕ್‌ಗಳಿಗೆ ಕಂಗನಾರನ್ನು ಮಾರುವ ಯತ್ನವೂ ನಡೆದಿತ್ತಂತೆ. ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ಅವರೇ ಮಾಧ್ಯಮದ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.

'ಒಬ್ಬ ಪೋಷಕ ನಟಿನಿಂದ ಮಾನಸಿಕ, ದೈಹಿಕ ಹಿಂಸೆ ಅನುಭವಿಸಿದೆ'

'ಒಬ್ಬ ಪೋಷಕ ನಟಿನಿಂದ ಮಾನಸಿಕ, ದೈಹಿಕ ಹಿಂಸೆ ಅನುಭವಿಸಿದೆ'

ಸಿನಿಮಾ ಅವಕಾಶಕ್ಕಾಗಿ ಹುಡುಕುತ್ತಿರುವ ಸಂದರ್ಭದಲ್ಲಿ ಒಬ್ಬ ಪೋಷಕ ನಟ ನನಗೆ ಪರಿಚಯವಾಗಿದ್ದ. ಅವನಿಂದ ನಾನು ಬಹಳಷ್ಟು ನೋವು ಅನುಭವಿಸಿದೆ. ಮೊದಲಿಗೆ ನಾನು ಒಬ್ಬ ಆಂಟಿಯೊಂದಿಗೆ ವಾಸಿಸುತ್ತಿದ್ದೆ. ಈ ಪೋಷಕ ನಟ ಆಂಟಿಯನ್ನು ಹೊರಗಟ್ಟಿದ, ನಾನು ಒಬ್ಬಳೇ ಇರುವಂತೆ ಮಾಡಿದ. ನಾನಿದ್ದ ಮನೆಯ ಬೀಗ ಹಾಕಿಕೊಂಡು ಹೋಗಿಬಿಡುತ್ತಿದ್ದ, ನಾನು ಒಬ್ಬಳೇ ಒಳಗೆ ಇರಬೇಕಾಗಿರುತ್ತಿತ್ತು ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಕಂಗನಾ.

ನನ್ನ ಸ್ವಯಂ ಘೋಷಿತ ಗಂಡನಂತೆ ವರ್ತಿಸುತ್ತಿದ್ದ: ಕಂಗನಾ

ನನ್ನ ಸ್ವಯಂ ಘೋಷಿತ ಗಂಡನಂತೆ ವರ್ತಿಸುತ್ತಿದ್ದ: ಕಂಗನಾ

'ನನ್ನನ್ನು ಪಾರ್ಟಿಗಳಿಗೆ ಕರೆದುಕೊಂಡು ಹೋಗುತ್ತಿದ್ದ. ಒಂದು ಪಾರ್ಟಿಯಲ್ಲಿ ನನಗೆ ಮಾದಕ ವಸ್ತುವನ್ನು ಬೆರೆಸಿದ ಪಾನೀಯಗಳನ್ನು ಕುಡಿಸಿದ್ದ. ಆ ದಿನ ನಾನು ಅವನೊಂದಿಗೆ ಹತ್ತಿರವಾಗಿಬಿಟ್ಟಿದ್ದೆ. ಮಾರನೇಯ ದಿನ ನನಗೆ ಗೊತ್ತಾಯಿತು. ನನಗೆ ಮಾದಕ ದ್ರವ್ಯ ನೀಡಲಾಗಿದೆಯೆಂದು. ಆ ದಿನದವರೆಗೂ ನನ್ನ ಸ್ವಯಂಘೋಷಿತ ಮ್ಯಾನೇಜರ್‌ನಂತೆ ವರ್ತಿಸುತ್ತಿದ್ದ ಆತ ಆ ನಂತರ ನನ್ನ ಸ್ವಯಂ ಘೋಷಿತ ಗಂಡನಂತೆ ವರ್ತಿಸಲು ಪ್ರಾರಂಭಿಸಿದ. ಎಂದು ಅಂದಿನ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.

ನನ್ನನ್ನು ಚಪ್ಪಲಿಯಿಂದ ಹೊಡೆಯುತ್ತಿದ್ದ: ಕಂಗನಾ

ನನ್ನನ್ನು ಚಪ್ಪಲಿಯಿಂದ ಹೊಡೆಯುತ್ತಿದ್ದ: ಕಂಗನಾ

'ನೀನು ನನ್ನ ಬಾಯ್‌ಫ್ರೆಂಡ್ ಅಲ್ಲ ಎಂದೇನಾದರೂ ನಾನು ಅವನಿಗೆ ಹೇಳಿಬಿಟ್ಟರೆ, ನನ್ನನ್ನು ಚಪ್ಪಲಿಯಿಂದ ಹೊಡೆಯಲು ಆರಂಭಿಸುತ್ತಿದ್ದು. ಹಲವಾರು ಬಾರಿ ನನ್ನ ಮೇಲೆ ಆತ ಹಲ್ಲೆ ಮಾಡಿದ್ದ. ಅಷ್ಟೆ ಅಲ್ಲ, ನನಗೆ ಮಾದಕ ದ್ರವ್ಯವನ್ನು ಬಲವಂತದಿಂದ 'ಇಂಜೆಕ್ಟ್' ಮಾಡುತ್ತಿದ್ದ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ದುಬೈ ಶ್ರೀಮಂತರ ಜೊತೆಗೆ ಬಿಟ್ಟುಬಿಡುತ್ತಿದ್ದ: ಕಂಗನಾ

ದುಬೈ ಶ್ರೀಮಂತರ ಜೊತೆಗೆ ಬಿಟ್ಟುಬಿಡುತ್ತಿದ್ದ: ಕಂಗನಾ

ನನ್ನನ್ನು ಆಗಾಗ್ಗೆ ಕೆಲವು ದುಬೈ ನ ಕೆಲವು ವ್ಯಕ್ತಿಗಳ ಮೀಟಿಂಗ್‌ಗೆ ಕರೆದುಕೊಂಡು ಹೋಗುತ್ತಿದ್ದ. ದುಬೈನ ಶ್ರೀಮಂತ ವ್ಯಕ್ತಿಗಳ ಜೊತೆಗೆ ನನ್ನನ್ನು ಬಿಟ್ಟು ಆತ ಅಲ್ಲಿಂದ ಹೊರಗೆ ಹೋಗುಬಿಡುತ್ತಿದ್ದ. ನನ್ನನ್ನು ದುಬೈ ನ ಶ್ರೀಮಂತರಿಗೆ ಮಾರಿಬಿಡುತ್ತಾನೆ ಎಂಬ ಭಯವೂ ನನಗೆ ಆಗ ಆಗಿತ್ತು ಎಂದು ಆತಂಕದ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಕಂಗನಾ.

'ಸಿನಿಮಾ ಅವಕಾಶ ಸಿಕ್ಕಮೇಲೆ ಹಿಂಸಾತ್ಮಕವಾಗಿ ಬದಲಾದ'

'ಸಿನಿಮಾ ಅವಕಾಶ ಸಿಕ್ಕಮೇಲೆ ಹಿಂಸಾತ್ಮಕವಾಗಿ ಬದಲಾದ'

ನನಗೆ ಮೊದಲ ಸಿನಿಮಾ ಅವಕಾಶ ಸಿಕ್ಕ ಮೇಲಂತೂ ಆತ ಪೂರ್ಣ ಹಿಂಸಾತ್ಮಕವಾಗಿ ಬದಲಾದ. ನನ್ನನ್ನು ಹೊಡೆಯುತ್ತಿದ್ದ, ನನ್ನನ್ನು ಹೊರಗೆ ಹೋಗಲು ಬಿಡುತ್ತಿರಲಿಲ್ಲ. ಈ ವಿಷಯವನ್ನು ನಾನು ನನ್ನ ಮೊದಲ ಸಿನಿಮಾ ನಿರ್ದೇಶಕ ಅನುರಾಗ್ ಬಸು ಗೆ ಹೇಳಿದೆ. ಅವರು ನನಗೆ ಆಶ್ರಯ ಕೊಟ್ಟರು. ಎಷ್ಟೋ ದಿನ ಅವರ ಕಚೇರಿಯಲ್ಲೇ ನಾನು ಕಳೆದೆ.

'ಆತ್ಮಹತ್ಯೆ ಮಾಡಿಕೊಳ್ಳುತ್ತೀಯ ಎಂದು ಹೆದರಿಸುತ್ತಿದ್ದ'

'ಆತ್ಮಹತ್ಯೆ ಮಾಡಿಕೊಳ್ಳುತ್ತೀಯ ಎಂದು ಹೆದರಿಸುತ್ತಿದ್ದ'

ನಾನು ಹೊಸ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆದ ನಂತರವೂ ನಕಲಿ ಕೀಲಿ ಮಾಡಿಸಿಕೊಂಡು ಅವನು ಆಗಾಗ್ಗೆ ಅಲ್ಲಿಗೆ ಬರುತ್ತಿದ್ದ. ನನಗೆ ಮಾದಕ ವಸ್ತುವನ್ನು ಬಲವಂತವಾಗಿ ಕೊಡುತ್ತಿದ್ದ. ನೀನು 'ಪರ್ವೀನ್ ಬಾಬಿ' ರೀತಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೀಯ ಎಂದು ಹೇಳುತ್ತಿದ್ದ ಎಂದು ಕಷ್ಟದ ದಿನಗಳನ್ನು ನೆನಪಿಸಿಕೊಂಡರು.

ಕಿಟಕಿಯಿಂದ ಹಾರಿ ತಪ್ಪಿಸಿಕೊಂಡಿದ್ದೆ: ಕಂಗನಾ

ಕಿಟಕಿಯಿಂದ ಹಾರಿ ತಪ್ಪಿಸಿಕೊಂಡಿದ್ದೆ: ಕಂಗನಾ

ಮಹೇಶ್ ಭಟ್ ಒಮ್ಮೆ ಸೆಟ್‌ನಲ್ಲಿ, 'ಕತ್ತಲ ಕೋಣೆಯಲ್ಲಿ ಕಪ್ಪು ಬೆಕ್ಕು' ಎಂದು ನನಗೆ ಹೇಳಿದ್ದರು. ಇದನ್ನು ಆತ ಪದೇ-ಪದೇ ನನಗೆ ಹೇಳುತ್ತಿದ್ದ. ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟ. ಕೊನೆಗೆ ಒಮ್ಮೆ ನಾನು ನನ್ನ ಮನೆಯ ಕಿಟಕಿಯಿಂದ ಹೊರಗೆ ಜಿಗಿದು ತಪ್ಪಿಸಿಕೊಂಡಿದ್ದೆ. ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ಸಹ ನೀಡಿದ್ದೆ ಎಂದಿದ್ದಾರೆ ಕಂಗನಾ.

More from Filmibeat

English summary
Kangana Ranaut said i was mentally, physically tortured by a character artist before i get the first movie chance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X